ಕರಾವಳಿ
ಜನವರಿ 16 ಕ್ಕೆ ಕರಾವಳಿ ಉತ್ಸವ ಮುಗಿಯುತ್ತಾ.?
ಖಾಸಗಿ ಪುಡ್ ಫೆಸ್ಟ್ ಕಾರ್ಯಕ್ರಮಕ್ಕೆ ಮೂರು ದಿನ ಮುಂಚಿತವೇ ಕರಾವಳಿ ಉತ್ಸವಕ್ಕೆ ತೆರೆ.! ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಜಿಲ್ಲಾಡಳಿತದ ವತಿಯಿಂದ ನಡೆಯುತ್ತಿರುವ ಕರಾವಳಿ ಉತ್ಸವ ಜನವರಿ 19 ರವರೆಗೆ ನಡೆಯಲಿದೆ ಎಂದು ಈ ಹಿಂದೆ ಘೋಷಿಸಲಾಗಿತ್ತು. ಆದರೆ ಜನವರಿ 16 (ಇಂದು) ಮುಕ್ತಾಯಗೊಳ್ಳಲಿದೆ ಅನ್ನುವ ಮಾತುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಅಲ್ಲಿ ಕಾರ್ಯಾಚರಿಸುವ ಸ್ಟಾಲ್ ವ್ಯಾಪಾರಿಗಳಿಗೆಗಳಿಗೆ ಮೌಖಿಕವಾಗಿ ಈ ಬಗ್ಗೆ ಆದೇಶ ನೀಡಲಾಗಿದೆ ಅನ್ನಲಾಗಿದೆ. ಜನವರಿ 19 ಕ್ಕೆ ಮುಕ್ತಾಯವಾಗಬೇಕಿದ್ದ ಕರಾವಳಿ ಉತ್ಸವ ದಿಢೀರನೆ […]
ಬೀದಿಬದಿ ವ್ಯಾಪಾರಿಗಳ ಐಕ್ಯತೆಯನ್ನು ಮುರಿದು ಹೋರಾಟವನ್ನು ಹತ್ತಿಕ್ಕಲು ಶಾಸಕ ಕಾಮತ್ ಕುಮ್ಮಕ್ಕು: ಸುನಿಲ್ ಕುಮಾರ್ ಬಜಾಲ್ ಆಕ್ರೋಶ
ಮಂಗಳೂರು : ನಗರದ ಬೀದಿ ವ್ಯಾಪಾರ ವಲಯ ಶಾಸಕ ವೇದವ್ಯಾಸ ಕಾಮತ್ ಬೀದಿ ವ್ಯಾಪಾರಿಗಳಿಗೆ ಮುಂಗೈಗೆ ಬೆಲ್ಲ ಹಚ್ಚಿ ಬಡ ಬೀದಿ ವ್ಯಾಪಾರಿಗಳಿಗೆ ಸಂಕಷ್ಟ ತಂದೊಡ್ಡಿದ್ದಾರೆ. ಬೀದಿ ವ್ಯಾಪಾರ ವಲಯ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಆರೋಪಿಸಿದರು ಅವರು ಇಂದು ನಗರದ ಬೀದಿ ವ್ಯಾಪಾರ ವಲಯದ ಎದುರು ಅವೈಜ್ಞಾನಿಕ, ಅಸುರಕ್ಷಿತ ಮತ್ತು ಅಸಮರ್ಪಕ ಬೀದಿ ವ್ಯಾಪಾರ ವಲಯದಲ್ಲಿ ವ್ಯಾಪಾರ ಮಾಡಲು ಬಲವಂತ ಮಾಡುತ್ತಿರುವ ನಗರ ಪಾಲಿಕೆ ಅಧಿಕಾರಿಗಳ ದಬ್ಬಾಳಿಕೆ […]
ರಾಜ್ಯ
45 ಮಂದಿ ರೌಡಿ ಶೀಟರ್ ಗಳು ಗಡೀಪಾರು ; ಗೂಂಡಾ ಕಾಯ್ದೆ ಹಾಕಲು ಚಿಂತನೆ
ಗಂಭೀರ ಪ್ರಕರಣದ ಕೆಲವು ಅಪರಾಧಿಗಳನ್ನು ದಕ್ಷಿಣ ಕನ್ನಡ ಜಿಲ್ಲೆಗೆ ಗಡೀಪಾರು ಮಾಡಿದ ಪೊಲೀಸ್ ಆಯುಕ್ತರು ಹುಬ್ಬಳ್ಳಿ -ಧಾರವಾಡ ಜಿಲ್ಲೆಯನ್ನು ಅಪರಾಧ ಮುಕ್ತ ಜಿಲ್ಲೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ಪೊಲೀಸ್ ಆಯುಕ್ತರಾದ ಎನ್. ಶಶಿಕುಮಾರ್ ನಿರಂತರ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಹುಬ್ಬಳ್ಳಿ-ಧಾರವಾಡದ 45 ಮಂದಿ ಅಪರಾಧಿಗಳನ್ನು ವಿವಿಧ ಜಿಲ್ಲೆಗೆ ಆರು ತಿಂಗಳ ಕಾಲ ಗಡೀಪಾರು ಮಾಡಿ ಆದೇಶಿಸಿದ್ದಾರೆ. ಕೊಲೆ, ಕೊಲೆಯತ್ನ, ಸುಲಿಗೆ, ದರೋಡೆ, ಕಳ್ಳತನ, ಹಲ್ಲೆ, ದೊಂಬಿ, ಮಾನಭಂಗ ಸೇರಿದಂತೆ ವಿವಿಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದವರನ್ನು […]
ಸಿ.ಎಂ ಸಿದ್ದರಾಮಯ್ಯಗೆ ಇಂದು ಸಂಕಷ್ಟದ ದಿನ. ಮುಡಾ ಕೇಸ್ ಸಿಬಿಐಗೆ ವರ್ಗಾವಣೆ ಮಾಡುವ ಕುರಿತು ಇಂದು ನ್ಯಾಯಾಲಯ ಮಹತ್ವದ ತೀರ್ಪು ಸಾಧ್ಯತೆ.
ಸಿದ್ದರಾಮಯ್ಯರವರಿಗೆ ಇಂದು ಸಂಕಷ್ಟದ ದಿನ. ಮುಡಾ ಕೇಸ್ ಸಿಬಿಐಗೆ ವರ್ಗಾವಣೆ ಮಾಡುವ ಕುರಿತು ಇಂದು ನ್ಯಾಯಾಲಯ ಮಹತ್ವದ ತೀರ್ಪು ಕೊಡಲಿದೆ. ಮುಡಾ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ದೂರುದಾರ ಸ್ನೇಹಮಹಿ ಕೃಷ್ಣ ಸಲ್ಲಿಸಿರುವ ಅರ್ಜಿಯ ಸಂಬಂಧ ಬುಧವಾರ ಮಹತ್ತರವಾದ ಆದೇಶ ಹೊರ ಬೀಳುವ ಸಾಧ್ಯತೆ ಇದೆ. ಧಾರವಾಡ ವಿಭಾಗೀಯ ಪೀಠದಲ್ಲಿ ನ್ಯಾಯಮೂರ್ತಿ ನಾಗಪ್ರಸನ್ನ ಅವರು ಇಂದು ಬಹುತೇಕ ಈ ಪ್ರಕರಣದ ಆದೇಶ ನೀಡುವ ಸಾಧ್ಯತೆ ಹೆಚ್ಚಿದೆ. ದೂರುದಾರ ಸ್ನೇಹಮಹಿ ಕೃಷ್ಣ, ಇವತ್ತು ನಿಶ್ಚಿತವಾಗಿಯೂ ಪ್ರಕರಣದ ತನಿಖೆ ಸಿಬಿಐಗೆ […]
ರಾಷ್ಟ್ರೀಯ
ಮತ್ತೊಂದು ಚಂಡಮಾರುತ; ಕರ್ನಾಟಕ ಸೇರಿ ದೇಶಾದ್ಯಂತ 20 ಕ್ಕೂ ಹೆಚ್ಚು ರಾಜ್ಯಗಳಲ್ಲಿ ಬಿರುಗಾಳಿ ಮತ್ತು ಭಾರೀ ಮಳೆಯಾಗುವ ಸಾಧ್ಯತೆ
ಮತ್ತೊಂದು ಚಂಡಮಾರುತ ಸಿದ್ಧವಾಗಿದೆ. ಜನವರಿ 16 ರವರೆಗೆ ಕರ್ನಾಟಕ ಸೇರಿ ದೇಶಾದ್ಯಂತ 20 ಕ್ಕೂ ಹೆಚ್ಚು ರಾಜ್ಯಗಳಲ್ಲಿ ಬಿರುಗಾಳಿ ಮತ್ತು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹವಾಮಾನ ಇಲಾಖೆಯ ಪ್ರಕಾರ, ಮಧ್ಯ ಪಾಕಿಸ್ತಾನ ಮತ್ತು ಅದರ ಪಕ್ಕದ ಪ್ರದೇಶಗಳಲ್ಲಿ ಪಶ್ಚಿಮದ ಅವಾಂತರಗಳು ಚಂಡಮಾರುತದ ಪ್ರಸರಣದ ರೂಪದಲ್ಲಿ ಸಕ್ರಿಯವಾಗಿವೆ. ಪಶ್ಚಿಮ ರಾಜಸ್ಥಾನ ಮತ್ತು ಪಕ್ಕದ ಪ್ರದೇಶಗಳ ಮೇಲೆ ಚಂಡಮಾರುತದ ಅವಾಂತರಗಳು ಸಕ್ರಿಯವಾಗಿವೆ. ಇದರಿಂದಾಗಿ, ಈಶಾನ್ಯ ಅರೇಬಿಯನ್ ಸಮುದ್ರದಿಂದ ಪಶ್ಚಿಮ ಮಾರುತಗಳು ಬೀಸುತ್ತಿವೆ. […]
ವಿಶ್ವದ ಬಲಿಷ್ಠ ಪಾಸ್ ಪೋರ್ಟ್ ಶ್ರೇಯಾಂಕದಲ್ಲಿ ಭಾರತ ಗಣನೀಯ ಕುಸಿತ
ಹೆನ್ಲೆ ಇಂಡೆಕ್ಸ್ ಶ್ರೇಯಾಂಕದಲ್ಲಿ 85 ಸ್ಥಾನಕ್ಕೆ ಜಾರಿದ ಭಾರತ ಹೆನ್ಲೆ ಇಂಡೆಕ್ಸ್ ನೀಡುವ ವಿಶ್ವದ ಬಲಿಷ್ಠ ಪಾಸ್ ಪೋರ್ಟ್ ಶ್ರೆಯಾಂಕದಲ್ಲಿ ಭಾರತ ಐದು ಸ್ಥಾನದ ಕುಸಿತವನ್ನು ಕಂಡು, 2024ರಲ್ಲಿದ್ದ 80ನೇ ಸ್ಥಾನದಿಂದ, 2025ರ ಹೊಸ ವರ್ಷದಲ್ಲಿ 85 ಸ್ಥಾನಕ್ಕೆ ಕುಸಿದಿದೆ. ಮೋಸ್ಟ್ ಪವರಫುಲ್ ಪಾಸ್ ಪೋರ್ಟ್ ನಲ್ಲಿ ಸಿಂಗಾಪುರ ಮೊದಲನೇ ಸ್ಥಾನ ಪಡೆದರೆ ಜಪಾನ್ ನಂತರದ ಸ್ಥಾನದಲ್ಲಿದೆ. ಹಲವು ಮಾನದಂಡಗಳನ್ನು ಆಧರಿಸಿ ಹೆನ್ಲೆ ಪಾಸ್ ಪೋರ್ಟ್ ಇಂಡೆಕ್ಸ್ ನೀಡಲಾಗುವ ವಿಶ್ವದ ಬಲಿಷ್ಠ ಪಾಸ್ ಪೋರ್ಟ್ ಶ್ರೇಯಾಂಕದಲ್ಲಿ ಭಾರತ […]
ಅಂತಾರಾಷ್ಟ್ರೀಯ
ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಸರ್ಕಾರವು 2 ವಿಶೇಷ ವರ್ಗಗಳ ವೀಸಾಗಳನ್ನು ಪ್ರಾರಂಭಿಸಿದೆ
ಹೊಸದಿಲ್ಲಿ: ದೇಶದ ಶೈಕ್ಷಣಿಕ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು ಉದ್ದೇಶಿಸಿರುವ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಭಾರತವು ಎರಡು ವಿಶೇಷ ವರ್ಗದ ವೀಸಾಗಳನ್ನು ಪ್ರಾರಂಭಿಸಿದೆ. ‘ಇ-ಸ್ಟೂಡೆಂಟ್ ವೀಸಾ’ ಮತ್ತು ‘ಇ-ಸ್ಟೂಡೆಂಟ್-ಎಕ್ಸ್’ ವೀಸಾವನ್ನು ಗೃಹ ಸಚಿವಾಲಯವು ಪರಿಚಯಿಸಿದೆ ಮತ್ತು ಎಲ್ಲಾ ಅರ್ಜಿದಾರರು ಸರ್ಕಾರವು ಪ್ರಾರಂಭಿಸಿರುವ ‘ಸ್ಟಡಿ ಇನ್ ಇಂಡಿಯಾ’ (ಎಸ್‌ಐಐ) ಪೋರ್ಟಲ್ ಅನ್ನು ಬಳಸಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. SII ಪೋರ್ಟಲ್‌ನಲ್ಲಿ ನೋಂದಾಯಿಸಲಾದ ಅರ್ಹ ವಿದೇಶಿ ವಿದ್ಯಾರ್ಥಿಗಳು ಇ-ವಿದ್ಯಾರ್ಥಿ ವೀಸಾ ಸೌಲಭ್ಯವನ್ನು ಪಡೆಯಬಹುದು ಮತ್ತು ಇ-ವಿದ್ಯಾರ್ಥಿ ವೀಸಾಗಳನ್ನು ಹೊಂದಿರುವವರ ಅವಲಂಬಿತರಿಗೆ ಇ-ವಿದ್ಯಾರ್ಥಿ-x […]
ನರ್ಸ್ ನಿಮಿಷಾ ಪ್ರಿಯಾಗೆ ಮರಣ ದಂಡನೆ ಶಿಕ್ಷೆ; ತಿಂಗಳೊಳಗೆ ಶಿಕ್ಷೆ ಜಾರಿಯಾಗುವ ಸಾಧ್ಯತೆ.! ಆಘಾತಕ್ಕೊಳಗಾಗಿರುವ ಕುಟುಂಬ; ರಕ್ಷಣೆಗೆ ಮೊರೆ.
ಯೆಮೆನ್ ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರಿಗೆ ಸಾಧ್ಯವಿರುವ ಎಲ್ಲಾ ಸಹಾಯಗಳನ್ನು ನೀಡುವುದಾಗಿ ಭಾರತ ಭರವಸೆ ನೀಡಿದೆ. ಯೆಮೆನ್ ಪ್ರಜೆಯೊಬ್ಬರನ್ನು ಕೊಲೆ ಮಾಡಿದ ಆರೋಪದ ಮೇಲೆ ನಿಮಿಷಾಗೆ ಮರಣ ದಂಡನೆ ಶಿಕ್ಷೆ ವಿಧಿಸಲಾಗಿದೆ. ನಿಮಿಷಾ ಪ್ರಿಯಾ ಅವರಿಗೆ ನೀಡಿರುವ ಮರಣದಂಡನೆಯ ಶಿಕ್ಷೆಯನ್ನು ಯೆಮೆನ್ ಅಧ್ಯಕ್ಷ ರಶಾದ್ ಅಲ್-ಅಲಿಮಿ ಇತ್ತೀಚೆಗೆ ಅಂಗೀಕರಿಸಿದ್ದಾರೆ. ಒಂದು ತಿಂಗಳೊಳಗೆ ಶಿಕ್ಷೆ ಜಾರಿಯಾಗುವ ಸಾಧ್ಯತೆಗಳಿರುವುದರಿಂದ ಆಘಾತಕ್ಕೊಳಗಾಗಿರುವ ಕುಟುಂಬ ಅವರ ರಕ್ಷಣೆಗೆ ಮೊರೆ ಇಟ್ಟಿದೆ. ಮಗಳನ್ನು ಮರಣದಂಡನೆ ಶಿಕ್ಷೆಯಿಂದ ಪಾರು […]