ಕ್ರಿಮಿನಲ್ ಪ್ರಕರಣ ಇದ್ದರೆ ನೋಟೀಸ್ ನೀಡದೆ ಸರ್ಕಾರಿ ನೌಕರರ ಅಮಾನತು: ಇಲಾಖೆಯ ಕ್ರಮ ಸರಿ ಹೈಕೋರ್ಟ್‌

ರಾಜ್ಯ

ಅಪರಾಧ ಪ್ರಕರಣ ಇದ್ದರೂ ನೋಟೀಸ್ ನೀಡದೆ ಸರ್ಕಾರಿ ನೌಕರರನ್ನು ಅಮಾನತು ಮಾಡಬಹುದು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಗೃಹ ರಕ್ಷಕ ದಳದ ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಕೇಸು ದಾಖಲಾದಾಗ ನೋಟೀಸ್ ಜಾರಿ ಮಾಡದೆ ಅಂತಹ ಸಿಬ್ಬಂದಿಯನ್ನುಅಮಾನತು ಮಾಡಬಹುದು ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.

ಬೆಂಗಳೂರಿನ ನಿವಾಸಿ ಡಿ.ಇ. ಕೆಂಪಾಮಣಿ ಎಂಬವರು ಗೃಹ ರಕ್ಷಕ ದಳದ ಸಕ್ಷಮ ಅಧಿಕಾರಿಗಳು ತಮ್ಮ ವಿರುದ್ಧ ಹೊರಡಿಸಲಾದ ಅಮಾನತು ಆದೇಶವನ್ನು ರದ್ದುಪಡಿಸುವಂತೆ ಕೋರಿ ಕರ್ನಾಟಕ ಹೈಕೋರ್ಟಿನ ಮೆಟ್ಟಿಲೇರಿದ್ದರು.