ಸಾಮೂಹಿಕ ಹತ್ಯೆ ಕುರಿತು ಜಾಗತಿಕ ವರದಿಯಲ್ಲಿ ಭಾರತಕ್ಕೆ 8ನೇ ಸ್ಥಾನ

ಅಂತಾರಾಷ್ಟ್ರೀಯ

ಅಮೆರಿಕವು ಸಾಮೂಹಿಕ ಹತ್ಯೆಗಳ ಕುರಿತು ವರದಿ ತಯಾರಿಸಿದ್ದು, 30 ರಾಷ್ಟ್ರಗಳ ಪಟ್ಟಿ ಇತ್ತೀಚೆಗೆ ಬಿಡುಗಡೆ ಮಾಡಿದೆ. ಇದರಲ್ಲಿ ಭಾರತ ದೇಶದ ಪಡೆದ ಸ್ಥಾನದಂದ ಆತಂಕ ಹುಟ್ಟಿಸುವಂತಿದೆ.

ಅಮೆರಿಕದ ʼಅರ್ಲಿ ವಾರ್ನಿಂಗ್‌ ಪ್ರಾಜೆಕ್ಟ್ʼ‌ ಪ್ರಕಟಿಸಿದ ವರದಿಯಲ್ಲಿ ಭಾರತವು 8ನೇ ಸ್ಥಾನ ಪಡೆದಿದ್ದು, ಆತಂಕ ಸೃಷ್ಟಿಸಿದೆ. ಸಿರಿಯಾ 11ನೇ ಸ್ಥಾನ ಪಡೆದರೆ, ಇರಾಕ್‌ 12, ಚೀನಾ 23 ಹಾಗೂ ಇರಾನ್‌ 30ನೇ ಸ್ಥಾನ ಪಡೆಯುವ ಮೂಲಕ ಭಾರತಕ್ಕಿಂತ ಉತ್ತಮ ಸ್ಥಿತಿಯನ್ನು ಹೊಂದಿವೆ. ಸಾಮೂಹಿಕ ಹತ್ಯೆ ವಿಚಾರದಲ್ಲಿ ಭಾರತದ ಪರಿಸ್ಥಿತಿ ಶೋಚನೀಯವಾಗಿದೆ.

ಇದರಲ್ಲಿ ಪಾಕಿಸ್ತಾನ ಮೊದಲ, ಯೆಮೆನ್‌ ಹಾಗೂ ಮ್ಯಾನ್ಮಾರ್‌ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನದಲ್ಲಿವೆ.ಸಾಮೂಹಿಕ ಹತ್ಯೆ, ಜನರ ಸುರಕ್ಷತೆಗೆ ಧಕ್ಕೆ, ಮಾನವ ಹಕ್ಕುಗಳ ಸ್ಥಿತಿಗತಿ ಆಧರಿಸಿ EWP ಸಂಸ್ಥೆಯು 30 ರಾಷ್ಟ್ರಗಳ ಪಟ್ಟಿ ತಯಾರಿಸಿ ವರದಿ ಬಿಡುಗಡೆಗೊಳಿಸಿರುತ್ತದೆ.

ಯುನೈಟೆಡ್ ಸ್ಟೇಟ್ಸ್ ನ ಸೈಮನ್-ಸ್ಕ್ಜೋಡ್ಟ್ ಸೆಂಟರ್ ಫಾರ್ ದಿ ಪ್ರಿವೆನ್ಷನ್ ಆಫ್ ಜೆನೊಸೈಡ್ ಮತ್ತು ಡಾರ್ಟ್ಮೌತ್ ಕಾಲೇಜಿನ ಇಂಟರ್ ನ್ಯಾಷನಲ್ ಅಂಡರ್ ಸ್ಟ್ಯಾಂಡಿಂಗ್ ಸೆಂಟರ್ ಜಂಟಿಯಾಗಿ ಈ ವರದಿಯನ್ನು ಸಿದ್ದಪಡಿಸಿದೆ.