ಇರಾನ್ ನಲ್ಲಿ ಮಹಿಳೆಯರು ಸೇರಿ 500 ಕ್ಕೂ ಅಧಿಕ ಮಂದಿಗೆ ಗಲ್ಲು ಶಿಕ್ಷೆ

ಅಂತಾರಾಷ್ಟ್ರೀಯ

2022ರಲ್ಲಿ ಇರಾನ್ ಇದುವರೆಗೆ 500ಕ್ಕೂ ಹೆಚ್ಚು ಜನರನ್ನು ಗಲ್ಲಿಗೇರಿಸಿದೆ, ಇದು ಕಳೆದ ವರ್ಷಕ್ಕಿಂತ ಹೆಚ್ಚು ಎಂದು ಮಾನವ ಹಕ್ಕುಗಳ ಸಮಿತಿ ತಿಳಿಸಿದೆ.

ಮಾನವ ಹಕ್ಕುಗಳ‌ ಸಮಿತಿ ಈ ಬಾರಿ ಇರಾನ್ ನಲ್ಲಿ ಕನಿಷ್ಠ ಮಹಿಳೆಯರು ಸೇರಿ ಒಟ್ಟು 504 ಜನರನ್ನು ಗಲ್ಲಿಗೇರಿಸಲಾಗಿದೆ.ಹೆಚ್ಚುವರಿ ಪ್ರಕರಣಗಳನ್ನು ಖಚಿತಪಡಿಸಲು ಇನ್ನೂ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದೆ.

ಸೆಪ್ಟೆಂಬರ್‌ನಿಂದ ಇರಾನ್‌ನಲ್ಲಿ ಭುಗಿಲೆದ್ದ ಆಡಳಿತ-ವಿರೋಧಿ ಪ್ರತಿಭಟನೆಗಳಲ್ಲಿ ಭಾಗಿಯಾಗಿರುವ ಜನರ ವಿರುದ್ಧ ಅಧಿಕಾರಿಗಳು ಮರಣದಂಡನೆ ಅಸ್ತ್ರವನ್ನು ವ್ಯಾಪಕವಾಗಿ ಬಳಸುತ್ತಾರೆ ಎಂದು ಟೀಕೆ ವ್ಯಕ್ತವಾಗಿದೆ.

ಅಮಾನವೀಯ ಮತ್ತು ಕ್ರೂರ ಮರಣದಂಡನೆಯನ್ನು ಮಾನವ ಹಕ್ಕುಗಳ ಸಂಘಟನೆಯು ಖಂಡಿಸಿದ್ದು, ರಾಜಕೀಯ ಕೈದಿಗಳ ವಿರುದ್ಧ ಭದ್ರತಾ ಸಂಬಂಧಿ ಆರೋಪಗಳನ್ನು ಹೊರಿಸಿ, ಮರಣ ದಂಡನೆ ವಿಧಿಸುವುದು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗುತ್ತದೆ ಎಂದು ಅರೋಪಿಸಿದೆ.

ಕಳೆದ ವರ್ಷ 333 ಜನರನ್ನು ಗಲ್ಲಿಗೇರಿಸಿತ್ತು. ಈ ಪೈಕಿ 55 ಜನರನ್ನು ಅಧಿಕಾರಿಗಳು ಹೊರಿಸಿದ ಆರೋಪದ ಹಿನ್ನೆಲೆಯಲ್ಲಿ ಗಲ್ಲಿಗೇರಿಸಲಾಗಿತ್ತು. ಗಲ್ಲು ಶಿಕ್ಷೆಗಳನ್ನು ನ್ಯಾಯಾಲಯ ಘೋಷಿಸಿದ್ದಲ್ಲ. ಅದು ಅಧಿಕಾರಿಗಳ ಆದೇಶವಾಗಿತ್ತು.