ವಕೀಲರ ಮೇಲಿನ ದೌರ್ಜನ್ಯ ಪ್ರಕರಣ : ಪೂಂಜಾಲಕಟ್ಟೆ S.I ಸುತೇಶ್ ವರ್ಗಾವಣೆ

ಕರಾವಳಿ

ಬಂಟ್ವಾಳ:ಯುವ ವಕೀಲ ಕುಲ್ ದೀಪ್ ಶೆಟ್ಟಿಯವರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ದೌರ್ಜನ್ಯ ನಡೆಸಿದ ಆರೋಪದ ಮೇರೆಗೆ ರಾಜ್ಯಾದ್ಯಂತ ವಕೀಲರುಗಳು ಬೀದಿಗಿಳಿದ ಹಿನ್ನಲೆಯಲ್ಲಿ ಎಚ್ಚೆತ್ತ ಸರಕಾರ ಪೂಂಜಾಲಕಟ್ಟೆ ಪೆೊಲೀಸ್ ಉಪ-ನಿರೀಕ್ಷಕರಾದ ಸುತೇಶ್ ಅವರನ್ನು ವರ್ಗಾವಣೆಗೊಳಿಸಿದೆ.

ಸಿವಿಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯ ರಾತ್ರಿ ವೇಳೆ ವಕೀಲರ ಮನೆಗೆ ನುಗ್ಗಿ ರಾದ್ದಾಂತ ಎಬ್ಬಿಸಿ ಬಂಧಿಸಿದ ಆರೋಪ ಎಸ್ಸೈ ಸುತೇಶ್ ಹಾಗೂ ಪೆೊಲೀಸರ ಮೇಲೆ ಮಾಡಲಾಗಿತ್ತು. ಬಳಿಕ ಪ್ರಕರಣದ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ವಕೀಲರುಗಳು ರಾಜ್ಯದ ವಿವಿಧೆಡೆ ಬೀದಿಗಿಳಿದು ಪ್ರತಿಭಟನೆ ನಡೆಸಿ ಪೊಲೀಸರ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದರು.

ಪ್ರಕರಣವನ್ನು ಇದೀಗ ಗಂಭೀರವಾಗಿ ಪರಿಗಣಿಸಿದ ಸರಕಾರ ಕರ್ತವ್ಯ ಲೋಪದ ಕಾರಣ ನೀಡಿ ಎಸ್ಸೈ ಸುತೇಶ್ ಅವರನ್ನು ವರ್ಗಾವಣೆಗೊಳಿಸಿ ಅದೇಶಿಸಿದೆ. ಎಸ್ಸೈ ಸುತೇಶ್ ಅವರನ್ನು ಇದೀಗ ಮಂಗಳೂರು ಜಿಲ್ಲಾ ಎಸ್ಪಿ ಕಚೇರಿಗೆ ವರ್ಗಾವಣೆ ಮಾಡಲಾಗಿದೆ. ಸದ್ಯ ಉಪ್ಪಿನಂಗಡಿ ಪಿಎಸ್ಸೈ ನಂದಕುಮಾರ್ ಅವರಿಗೆ ಪೂಂಜಾಲಕಟ್ಟೆ ಠಾಣಾ ಜವಾಬ್ದಾರಿ ವಹಿಸಲಾಗಿದೆ.