ಎಸ್‌ಕೆಎ‌ಸ್‌ಎಸ್ಎಫ್ ಇಸ್ತಿಖಾಮ ರಾಜ್ಯ ಸಮಿತಿಯ ಅಧ್ಯಕ್ಷರಾಗಿ ಕುಕ್ಕಿಲ ದಾರಿಮಿ ಆಯ್ಕೆ.

ರಾಜ್ಯ

ರಾಜ್ಯದ ಖ್ಯಾತ ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಂಘಟನೆಯಾದ ಎಸ್‌ಕೆಎ‌ಸ್‌ಎಸ್ಎಫ್ ಇದರ ಆದರ್ಶ ವಿಭಾಗವಾದ ಇಸ್ತಿಖಾಮ ಕರ್ನಾಟಕ ರಾಜ್ಯ ಸಮಿತಿಯನ್ನು ಬಿ.ಸಿ ರೋಡು ತಲಪಾಡಿಯಲ್ಲಿರುವ ಸಮಸ್ತ ಕಚೇರಿಯಲ್ಲಿ ರಚಿಸಲಾಯಿತು.
ಇಸ್ತಿಖಾಮದ ರಾಜ್ಯ ಉಸ್ತುವಾರಿಯಾದ ಖಾಸಿಮ್ ದಾರಿಮಿ ಸವಣೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಬೂಬಕರ್ ಸಿದ್ದೀಕ್ ದಾರಿಮಿ ಮೂಡುಬಿದಿರೆ ದುಆ ಮಾಡಿದರು. ಅಬ್ದುಸ್ಸಲಾಂ ಫೈಝಿ ಎಡಪ್ಪಲಂ ಉದ್ಘಾಟಿಸಿದರು.
ಇಸ್ತಿಖಾಮ ಕರ್ನಾಟಕ ರಾಜ್ಯ ನೂತನ ಸಮಿತಿಯ ಚೇರ್ಮನ್ ಆಗಿ ಕೆ.ಐ ಅಬ್ದುಲ್ ಖಾದಿರ್ ದಾರಿಮಿ ಕುಕ್ಕಿಲ, ಕನ್ವೀನರಾಗಿ ರಫೀಖ್ ಬಾಖವಿ ಮಠ, ವರ್ಕಿಂಗ್ ಕನ್ವೀನರಾಗಿ ಅಶ್ರಫ್ ಬಾಖವಿ ಚಾಪಲ್ಲ, ಉಸ್ತುವಾರಿಯಾಗಿ ಖಾಸಿಮ್ ದಾರಿಮಿ ಸವಣೂರು, ವೈಸ್ ಚೇರ್ಮನರುಗಳಾಗಿ ಸಲಾಮ್ ಫೈಝಿ ಎಡಪ್ಪಲಂ, ಅಬೂಬಕರ್ ಸಿದ್ದೀಕ್ ದಾರಿಮಿ ಒಮಾನ್, ಇಸ್‌ಹಾಖ್ ಫೈಝಿ ಕುಕ್ಕಿಲ, ಜೊಯಿಂಟ್ ಕನ್ವೀನರುಗಳಾಗಿ ಅಬ್ದುಲ್ ಮಜೀದ್ ದಾರಿಮಿ ತೋಡಾರು, ಅಬ್ಬಾಸ್ ದಾರಿಮಿ ಕೆಲಿಂಜ, ಮುಸ್ತಫಾ ಅನ್ಸಾರಿ ಕಣ್ಣೂರು, ಸದಸ್ಯರುಗಳಾಗಿ ರಫೀಖ್ ಹುದವಿ ಕೋಲಾರ, ನಝೀರ್ ಫೈಝಿ ತೋಡಾರು, ಶಾಫೀ ಫೈಝಿ ಕೊಡಗುರವರನ್ನು ಆಯ್ಕೆ ಮಾಡಲಾಯಿತು.