ಮಂಗಳೂರು ಉತ್ತರದ ಫೀನಿಕ್ಸ್ ಆಗುತ್ತರಾ ಇನಾಯತ್ ಅಲಿ..?

ಕರಾವಳಿ

ಮಂಗಳೂರು ಉತ್ತರದಲ್ಲಿ ಈ ಬಾರಿ ಹೊಸ ಮುಖಗಳಿಗೆ ಟಿಕೆಟ್.! ಮುಂದಿನ ವಿಧಾನಸಭಾ ಚುನಾವಣೆಗೆ ಯುವ ಸ್ಪರ್ಧಾಕಾಂಕ್ಷಿಗಳ ಪೈಪೋಟಿ. ವಿಧಾನಸಭಾ ಚುನಾವಣೆಗೆ ತಿಂಗಳುಗಳು ಬಾಕಿ ಇರುವಾಗ ದಕ್ಷಿಣ ಕನ್ನಡ ಜಿಲ್ಲೆಯ ಉತ್ತರ ವಿಧಾನ ಸಭಾ ಕ್ಷೇತ್ರದಲ್ಲಿ ಸ್ಪರ್ಧಾಕಾಂಕ್ಷಿಗಳ ನಡುವೆ ಬಿರುಸಿನ ಪೈಪೋಟಿ ಏರ್ಪಟ್ಟಿದೆ.ಕಳೆದ ಚುನಾವಣೆಯಲ್ಲಿ ಹಿಂದುತ್ವದ ಅಲೆಯಲ್ಲಿ ಕೊಚ್ಚಿ ಹೋಗಿರುವ ಮಂಗಳೂರು ಉತ್ತರ ಕ್ಷೇತ್ರವನ್ನು ಮರಳಿ ಪಡೆಯಲು ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ.

ಉತ್ತರದಲ್ಲಿ ಇನಾಯತ್ ಆಲಿ ಪಕ್ಕಾ ಕಾಂಗ್ರೇಸ್ ಅಭ್ಯರ್ಥಿ. ಮಂಗಳೂರು ಉತ್ತರ ಕ್ಷೇತ್ರದಲ್ಲಿ ಉದ್ಯಮಿ ಇನಾಯತ್ ಅಲಿ ಪ್ರಮುಖ ಸ್ಪರ್ಧಾ ಆಕಾಂಕ್ಷಿಯಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಅವರು ಟಿಕೇಟ್ ಆಕಾಂಕ್ಷಿಯಾಗಿದ್ದರು. ಕೊನೇ ಕ್ಷಣದಲ್ಲಿ ಟಿಕೇಟ್ ಕೈ ತಪ್ಪಿತ್ತು. ಎನ್ ಎಸ್ ಯು ಐ ರಾಷ್ಟ್ರೀಯ ಪದಾಧಿಕಾರಿಯಾಗಿ ಸೌತ್ ಇಂಡಿಯಾ ಉಸ್ತುವಾರಿಯಾಗಿದ್ದು ಅವರು ಬಳಿಕ ಉದ್ಯಮ ಕ್ಷೇತ್ರವನ್ನು ಆಯ್ಕೆ ಮಾಡಿದ್ದರು.ಇದೀಗ ಸ್ಪರ್ಧಾ ಆಕಾಂಕ್ಷಿಯಾಗಿ ಹಲವಾರು ತಿಂಗಳುಗಳಿಂದ ಜಿಲ್ಲೆಯಲ್ಲಿ ಹಾಗೂ ಉತ್ತರ ಕ್ಷೇತ್ರದಲ್ಲಿ ಪಕ್ಷ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದಾರೆ.

ಮಂಗಳೂರು ಉತ್ತರ ಕ್ಷೇತ್ರದಲ್ಲಿ ಕೇವಲ ರಾಜಕಾರಣಕ್ಕಷ್ಟೇ ಜೀವನವನ್ನು ಮೀಸಲಿಡದೆ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳಲ್ಲೂ ಹಲವು ಮಾದರಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಸಂಘಟಿಸಿದ ಸ್ನೇಹಜೀವಿ ಆಗಿದ್ದಾರೆ.

ಸಮಾಜ ಸೇವೆಯೇ ಇವರ ಉಸಿರು, ಕರಾವಳಿಯಾದ್ಯಂತ ತನ್ನ ಸಮಾಜ ಸೇವೆಯಿಂದಲೇ ಚಿರ ಪರಿಚಿತರಾದ ಜನಾಬ್ ಇನಾಯತ್ ಅಲಿ ವಿದ್ಯಾರ್ಥಿ ದೆಸೆಯಿಂದಲೇ ಹೋರಾಟದ ಸಂಕಲ್ಪವನ್ನು ಮೈಗೂಡಿಸಿ ಬಂದು NSUI ನ ರಾಷ್ಟ್ರೀಯ ಕಾರ್ಯದರ್ಶಿ ಹುದ್ದೆಯನ್ನು ಅಲಂಕರಿಸಿ ದೇಶದಲ್ಲೆಡೆ ಚಿರಪರಿಚಿತರಾಗಿ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕರ ಆಪ್ತರಾಗಿ,ತಳ ಮಟ್ಟದ ಕಾರ್ಯಕರ್ತರ ಸ್ನೇಹ ಜೀವಿಯಾಗಿ,ಎಲ್ಲರೊಂದಿಗೂ ಪಕ್ಷಾತೀತವಾಗಿ ಸ್ನೇಹ ಬೆಳೆಸಿಕೊಂಡ ಅಪರೂಪದ ವ್ಯಕ್ತಿ. ಕೋವಿಡ್ ಕಾಲದ ಸಂದರ್ಭದಲ್ಲಿ ಅಚ್ಚುಕಟ್ಟಾಗಿ ಪ್ರತಿ ನಾಗರಿಕರ ಅಹವಾಲು ಪಡೆದು ಕಷ್ಟ ಕಾಲದಲ್ಲಿ ಜನರೊಂದಿಗೆ ಬೆಸೆದು ನೆರವಾಗಿದ್ದಾರೆ. ಅದೆಷ್ಟೊ ಬಡವರ, ನಿರ್ಗತಿಕರ,ಕಣ್ಣೀರೊರೆಸಲು ಪಣತೊಟ್ಟ ಓರ್ವ ಅಪ್ಪಟ ಜನ ಸೇವಕ.

ತನ್ನ ರಾಜಕೀಯ ಜೀವನದಲ್ಲಿ ಜಾತಿ-ಧರ್ಮ,ಮತ-ಬೇಧ ಮರೆತು ಸಮಾಜದ ಪ್ರತಿಯೊಬ್ಬ ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸಿದ ಕ್ರೀಯಾಶೀಲ, ನಗು ಮುಖದ ಯುವ ನಾಯಕ. ಕಷ್ಟ ಹೇಳಿ ಬಂದ ಬಡ ಜನರ ಜಾತಿ-ಮತ ನೋಡದೆ ಕಣ್ಣೀರೊರೆಸುವ ನಿಜವಾದ ನಾಯಕ

ನಿತ್ಯ ನಿರಂತರವಾಗಿ ಸಾಮಾಜಿಕ ಸಾಮರಸ್ಯ ನೆಲೆಗೊಳ್ಳಲು, ಜಾತ್ಯತೀತ ಸಿದ್ಧಾಂತ ಭದ್ರಗೊಳಿಸಲು ಹಗಲಿರುಳು ಶ್ರಮಿಸುತ್ತಿರುವ ಇನಾಯತ್ ಅಲಿಯವರ ಹೆಸರು ಕಳೆದ 2018 ವಿಧಾನಸಭಾ ಚುನಾವಣೆಯಲ್ಲಿ ಹರಿದಾಡಿದರೂ ಚುನಾವಣೆ ನಿಲ್ಲುವ ಗೋಜಿಗೆ ಹೋಗಲಿಲ್ಲ. ಆದರೆ ಈ ಬಾರಿ ಮಾತ್ರ ಕ್ಷೇತ್ರದಾದ್ಯಂತ ಇನಾಯತ್ ಪರ ಅಲೆ ಜೋರಾಗಿ ಬೀಸುತ್ತಿದ್ದು ಮುಂದಿನ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿಂಬಿತವಾಗಿದ್ದಾರೆ. ಕ್ಷೇತ್ರದ ಸಹಸ್ರಾರು ಕಾಂಗ್ರೆಸ್ ಕಾರ್ಯಕರ್ತರು ಅವರ ಬೆನ್ನಿಗೆ ನಿಂತಿದ್ದಾರೆ. ಕ್ಷೇತ್ರದಾದ್ಯಂತ ಹೊಸ ಸಂಚಲನ ಮತ್ತು ಹುರುಪು ಸೃಷ್ಟಿಯಾಗಿದೆ.ಕಾಂಗ್ರೆಸ್ ಪಾಳಯದಲ್ಲೂ ಹೊಸ ಗರಿ ಮೂಡಿದೆ. ಸತತ ಸೋಲಿನಿಂದ ಕಂಗೆಟ್ಟಿದ್ದ ಕಾಂಗ್ರೆಸ್ ನ್ನು ಫೀನಿಕ್ಸ್ ನಂತೆ ಮೇಲೆತ್ತಲು ಹೊಸ ಅಭ್ಯರ್ಥಿಯ ಹುಡುಕಾಟದಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರಿಗೆ ಇನಾಯತ್ ಅಲಿ ಹೆಸರು ತೇಲಿ ಬಂದದ್ದೇ ತಡ ಹೊಸ ಉತ್ಸಾಹದಲ್ಲಿದ್ದಾರೆ ಮಂಗಳೂರು ಉತ್ತರದ ಕಾರ್ಯಕರ್ತರು.