ಲೋಬೋಗೆ ಟಿಕೆಟ್ ಕಾಮತ್ ಗೆ ಲಾಭ.?ಹೊಸ ಮುಖಕ್ಕೆ ಆದ್ಯತೆ.!

ಕರಾವಳಿ

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಗಾಗಿ 7 ಮಂದಿ ಕೈ ನಾಯಕರು ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ ಜೆ.ಆರ್ ಲೋಬೋ, ಐವನ್ ಡಿಸೋಜಾ, ವಿಶ್ವಾಸ್ ಕುಮಾರ್ ದಾಸ್, ಆಶಿತ್ ಪಿರೇರಾ, ಮೆರಿಲ್ ರೇಗೋ,ವಿನಯ್ ರಾಜ್,ಶಾಲೆಟ್ ಪಿಂಟೋ ಸೇರಿದ್ದಾರೆ.ಬಹುತೇಕ ಕ್ರೈಸ್ತ ಸಮುದಾಯಕ್ಕೆ ಮೀಸಲಾಗ ಬಹುದಾದ ಮಂಗಳೂರು ದಕ್ಷಿಣ ಕ್ಷೇತ್ರದಿಂದ ಅರ್ಜಿ ಸಲ್ಲಿಸಿದವರಲ್ಲಿ ಇಬ್ಬರು ಬೇರೆ ಸಮುದಾಯದವರಾದರೆ,ಉಳಿದ 5 ಮಂದಿ ಕ್ರೈಸ್ತ ಸಮುದಾಯಕ್ಕೆ ಸೇರಿದವರಾಗಿದ್ಧಾರೆ.ಮಂಗಳೂರು ದಕ್ಷಿಣದಲ್ಲಿ ಅಲ್ಪಸಂಖ್ಯಾತರಾದ ಕ್ರೈಸ್ತರು ಹಾಗೂ ಮುಸ್ಲಿಮರು ಬಹುತೇಕ ನಿರ್ಣಾಯಕ ಮತದಾರರು.ಬಿಲ್ಲವ, ಬಂಟ ಹಾಗೂ ಇನ್ನಿತರ ಸಮುದಾಯಗಳೂ ಇವೆ. ಆದರೆ ಕಾಂಗ್ರೆಸ್ ಸ್ವಲ್ಪಕಷ್ಟಪಟ್ಟು ಗ್ರ್ವಾಂಡ್ ವರ್ಕ್ ಮಾಡಿದ್ದಲ್ಲಿ ಗೆಲ್ಲಬಹುದಾದ ಕ್ಷೇತ್ರವಿದು.ಕಳೆದ ಬಾರಿಯಂತೆ ಆಂತರಿಕ ಒಳಜಗಳ, ಗುಂಪುಗಾರಿಕೆ ಮಾಡಿದ್ದಲ್ಲಿ ಕಾಂಗ್ರೇಸ್ ಈ ಬಾರಿಯೂ ಮಕಾಡೆ ಮಲಗುತ್ತಡೆ.

ದಕ್ಷಿಣ ಕ್ಷೇತ್ರದಲ್ಲಿ ಲೋಬೋಗೆ ಟಿಕೇಟ್ ಕೊಟ್ಟರೆ ಕೈ ಸೋಲುತ್ತದೆ ಎಂಬ ಮಾತೀಗ ಚಾಲ್ತಿಯಲ್ಲಿದೆ. ಕಳೆದ ಅವಧಿಯಲ್ಲಿ ಸೋಲಲು ಅವರು ಮಾಡಿಕೊಂಡ ಕೆಲವಾರು ಎಡವಟ್ಟುಗಳೇ ಕಾರಣ. ಮುಸ್ಲಿಮರೊಂದಿಗೆ ವಿರೋಧ ಕಟ್ಟಿಕೊಂಡದ್ದು ಲೋಬೋ ಸೋಲಿಗೆ ಪ್ರಮುಖ ಕಾರಣವೂ ಆಗಿತ್ತು. ಇದೆಲ್ಲವೂ ಕಾಮತರಿಗೆ ಲಾಭವೂ ಆಯಿತು ಎಂಬ ಮಾತು ಎಲ್ಲರ ಬಾಯಲ್ಲೂ ಕೇಳಿ ಬರುತ್ತಿದೆ.ಹೀಗಾಗಿ ಈ ಬಾರಿಯೂ ಲೋಬೋಗೆ ಟಿಕೆಟ್ ಕೊಟ್ಟರೆ ಮುಸ್ಲಿಮ್ ಸಮುದಾಯದ ಮತ ‘ಕೈ’ ಗೆ ತಪ್ಪಲಿದೆ ಎಂಬ ಗುಸು ಗುಸು ಕೇಳಿ ಬರುತ್ತಿದೆ.ಈ ಬಾರಿ ಅಲ್ಪಸಂಖ್ಯಾತರ ವೋಟ್ ವೇದವ್ಯಾಸರ ಪಾಲಿಗೂ ಕಬ್ಬಿಣದ ಕಡಲೆಯಾಗಿ ಪರಿಣಮಿಸಲಿದೆ. ಕಾರಣ ಹಿಜಾಬ್,ಮಂಗಳೂರು ಗೋಲಿಬಾರ್, ಅಧಿವೇಶನದಲ್ಲಿ ನೀಡಿದ ಹೇಳಿಕೆ, ಮುಸ್ಲಿಂ ಅಧಿಕಾರಿಗಳ ವರ್ಗಾವಣೆ ಆರೋಪ,ನಿರಂತರ ನಡೆಯುವ ಅನೈತಿಕ ಪೊಲೀಸ್ ಗಿರಿ, ಆಜಾನ್,ಮುಸ್ಲಿಮ್ ವಿರೋಧಿ ನೀತಿ ಇದೆಲ್ಲವೂ ಕಾಮತರಿಗೆ ಕಠಿಣ ಆಗಲಿದೆ.

ಟಿಕೇಟಿಗೆ ಅರ್ಜಿ ಹಾಕದಿದ್ದರೂ ಬಿಲ್ಲವ ಮುಂದಾಳು,ವಕೀಲ ವೃತ್ತಿಯ ಪದ್ಮರಾಜ್ ರವರಿಗೆ ಕಾಂಗ್ರೆಸ್ ಮಣೆ ಹಾಕುವ ಸಾಧ್ಯತೆಯೂ ಹೆಚ್ಚಿದೆ.ಮಂಗಳೂರು ದಕ್ಷಿಣ ಬಹುತೇಕ ನಗರವನ್ನೇ ಪ್ರತಿನಿಧಿಸುವ ಕ್ಷೇತ್ರವಾಗಿದ್ದರಿಂದ ಹೆಚ್ಚು ಪೈಪೋಟಿ ನೀಡಬಲ್ಲ, ವಿದ್ಯಾವಂತ ಅಭ್ಯರ್ಥಿಗೆ ಕಾಂಗ್ರೆಸ್ ಆದ್ಯತೆ ನೀಡುವುದು ಅನಿವಾರ್ಯ. ಸರಳ ಸಜ್ಜನಿಕೆಯ ಶಾಸಕ ಕಾಮತರನ್ನು ಕಟ್ಟಿ ಹಾಕ ಬೇಕಾದರೆ ಕಾಂಗ್ರೇಸ್ ಪಾಳಯದಲ್ಲಿ ರಣತಂತ್ರದ ಬಹಳ ಅಗತ್ಯವಿದೆ.