ಕರ್ನಾಟಕದಲ್ಲಿ ಹರಾಂ.. ಗೋವಾದಲ್ಲಿ ಹಲಾಲ್.!ಪ್ರತಿದಿನ ಗೋವಾಗೆ 2120 ಕೆಜಿ ದನದ ಮಾಂಸ

ರಾಜ್ಯ

ಕರ್ನಾಟಕದಿಂದ ಪ್ರತಿ ದಿನ 2,000 ಕೆಜಿಗೂ ಹೆಚ್ಚು ದನ ಮತ್ತು ಎಮ್ಮೆಯ ಮಾಂಸ ಗೋವಾಗೆ ಬರುತ್ತದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಹೇಳಿದ್ದಾರೆ.

ಗೋವಾ ವಿಧಾನಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ಅವರು ಈ ಮಾಹಿತಿ ನೀಡಿದ್ದಾರೆ. “ಕಳೆದ 6 ತಿಂಗಳಲ್ಲಿ ಕರ್ನಾಟಕದಿಂದ ಗೋವಾಗೆ 388 ಟನ್ ಗಳಷ್ಟು ದನ ಮತ್ತು ಎಮ್ಮೆಯ ಮಾಂಸವನ್ನು ತರಿಸಿಕೊಳ್ಳಲಾಗಿದೆ.ಕರ್ನಾಟಕದಲ್ಲಿನ ವ್ಯಾಪಾರಿಗಳು ಪ್ರತಿ ದಿನ ಗೋವಾಗೆ ದನದ ಮಾಂಸ ಕಳುಹಿಸುತ್ತಾರೆ” ಎಂದು ಅವರು ವಿಧಾನಸಭೆಗೆ ಮಾಹಿತಿ ನೀಡಿದ್ದಾರೆ.

“ಗೋವಾ ಕರ್ನಾಟಕ ಗಡಿಯಲ್ಲಿ ಸಂಬಂಧಿ ಅಧಿಕಾರಿಗಳು ಕರ್ನಾಟಕದ ದನದ ಮಾಂಸ ವ್ಯಾಪಾರಿಗಳಿಂದ ಸಂಗ್ರಹಿಸುವ ತೆರಿಗೆಯ ಮೊತ್ತದಿಂದ ಈ ಪ್ರಮಾಣವನ್ನು ಲೆಕ್ಕ ಹಾಕಲಾಗಿದೆ. ಪ್ರತಿ ದಿನ ಕರ್ನಾಟಕದಿಂದ ಸರಾಸರಿ 2,120 ಕೆಜಿಯಷ್ಟು ದನ ಮತ್ತು ಎಮ್ಮೆಯ ಮಾಂಸ ಗೋವಾಗೆ ಬರುತ್ತದೆ ಎಂದು ತೆರಿಗೆ ದಾಖಲೆಗಳು ಹೇಳುತ್ತದೆ ಎಂದು ಅವರು ಲಿಖಿತ ಉತ್ತರದಲ್ಲಿ ವಿವರಿಸಿದ್ದಾರೆ.