ಸಂತೆಯಲ್ಲಿ ಹೆಣ್ಣು ಮಕ್ಕಳ ಮಾರಾಟ..18 ಆದರೆ ಜಾಸ್ತಿ,24 ಕ್ಕೆ ಕಮ್ಮಿ.ಭರ್ಜರಿ ಸೇಲ್​…!

ಅಂತಾರಾಷ್ಟ್ರೀಯ

ಸಂತೆಯಲ್ ಲಿಹೆಣ್ಣು ಮಕ್ಕಳ ಮಾರಾಟ.ಸಂತೆಯಲ್ಲಿ ಹಣ್ಣು, ಹಂಪಲು, ಇತರ ಸಾಮಾಗ್ರಿಗಳನ್ನು ಕೊಂಡು ಕೊಳ್ಳಲು ಮಾಡುವುದನ್ನು ನೋಡಿದ್ದೇವೆ. ಆದ್ರೆ ಇಲ್ಲೊಂದು ಕಡೆ ಯುವತಿಯರನ್ನೇ ಮಾರಾಟ ಮಾಡುವ ಸಂತೆಯಿದೆಯಂತೆ. ಏನಿದು ಹುಡುಗಿಯರನ್ನು ಮಾರುವ ಸಂತೆ.

ಯುರೋಪಿನ ಬಲ್ಗೇರಿಯಾ ದೇಶದ ವ’ರ್ಜಿನ್ ಸಂತೆಯಲ್ಲಿ 18 ರಿಂದ 24, 25 ವರ್ಷದ ಸುಂದರ ಯುವತಿಯರು ಮಾರಾಟಕ್ಕೆ ನಿಂತಿರುತ್ತಾರೆ. ಕಲೇಜಿಯಾ ಜನಾಂಗದ ಯುವತಿಯರು ಈ ಸಂತೆಯ ಮಾರಾಟ ವಸ್ತುಗಳಾಗಿದ್ದಾರೆ. ಇವರನ್ನು ಹೆಚ್ಚಿನ ದುಡ್ಡು ಹಾಕಿ ಇಲ್ಲಿಯ ಅದೇ ಜನಾಂಗದ ಮತ್ತು ಬೇರೆ ಜನಾಂಗದ ಯುವಕರು ಬಿಡ್ ಮಾಡಿ ಖರೀದಿಸುತ್ತಾರೆ. ಇಲ್ಲಿ 18 ವರ್ಷದ ಯುವತಿಯರಿಗೆ ಹೆಚ್ಚಿನ ಬೆಲೆ ಇದ್ದು, 24, 25 ವರ್ಷದ ವಯಸ್ಸಾದ ಯುವತಿಯರಿಗೆ ಅತೀ ವಯಸ್ಸಾದ ಯುವತಿಯರು ಎಂದು ಕರೆಯಲಾಗುತ್ತದೆ. ಹೀಗಾಗಿ ಇವರಿಗೆ ಹೆಚ್ಚಿನ ಬೆಲೆ ಇರುವುದಿಲ್ಲ. ತಮ್ಮ ಕನ್ಯತ್ವ ಕಾಯ್ದುಕೊಂಡ ಯುವತಿಯರಿಗೆ ಅತೀ ಹೆಚ್ಚಿನ ಬೆಲೆ ಇರುತ್ತದೆ.

ಇಲ್ಲಿ14ನೇ ಶತಮಾನದಿಂದ ಈ ಸಂಪ್ರದಾಯ ನಡೆದುಕೊಂಡು ಬಂದಿದೆ. ಯುವತಿಯರು ತಮ್ಮ ಸಂಗಾತಿಯನ್ನು ಆಯ್ದುಕೊಳ್ಳಲು ಅವಕಾಶವಿಲ್ಲ. ಬದಲಾಗಿ ತಮ್ಮ ಕನ್ಯತ್ವ ಕಾಪಾಡಿಕೊಳ್ಳುವುದು ಇವರ ಜೀವನದ ಗುರಿಯಾಗಿರುತ್ತದೆ. ಹಾಗಾಗಿ ಈ ಜನಾಂಗದಲ್ಲಿ ಹುಟ್ಟಿದ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವುದಿಲ್ಲ, ಮನೆಯಿಂದ ಹೊರಗೆ ಹೋಗಲು ಬಿಡುವುದಿಲ್ಲ.
ಇನ್ನೇನು ಮಾರಾಟಕ್ಕೆ ಸಜ್ಜಾದಾಗ ಒಂದು ದಿನ ಸಂತೆಯಲ್ಲಿ ಇಷ್ಟಪಟ್ಟ ವಸ್ತುಗಳನ್ನು ಕೊಂಡು ಕೊಳ್ಳಲು ಅವಕಾಶ ನೀಡುತ್ತಾರೆ. ಆ ದಿನ ಮಾತ್ರ ತಮಗೆ ಬೇಕಾಗಿದ್ದನ್ನು ತೆಗೆದುಕೊಂಡು ಸಂತೆಯಲ್ಲಿ ಸುತ್ತಾಡುತ್ತಾರೆ. ನಂತರ ತಾವು ವ’ರ್ಜಿನ್ ಎಂದು ಬೋರ್ಡು ಹಿಡಿದು ಅದೇ ಸಂತೆಯಲ್ಲಿ ನಿಲ್ಲುತ್ತಾರೆ. ಹೀಗೆ ಹೆಚ್ಚಿನ ಬೆಲೆಗೆ ಯುವತಿ ಖರೀದಿಯಾದರೆ ಅವರ ಕುಟುಂಬಕ್ಕೆ ಹೆಮ್ಮೆಯ ಸಂಗತಿಯಾಗಿರುತ್ತದೆ.

ಹೀಗೆ ಯುವತಿಯರ ತಾಯಂದಿರೂ ಕೂಡಾ ಯುವತಿಯರ ಜೊತೆ ಸಂತೆಗೆ ಮಾರಾಟಕ್ಕೆ ಬಂದಿರುತ್ತಾರೆ. ಕಾಲ ಬದಲಾದ ಹಾಗೆಯೇ ಇಲ್ಲಿ ಸ್ವಲ್ಪ ಮಟ್ಟಿಗೆ ಬದಲಾಗಿದೆ. ಯುವತಿಯರು ತಮಗೆ ಇಷ್ಟವಾದ ಯುವಕನನ್ನು ಸಂತೆಗೆ ಬರಮಾಡಿಕೊಂಡು ಅಲ್ಲಿ ಎಲ್ಲರಿಗೂ ತಮ್ಮ ಪ್ರೀತಿಯನ್ನು ಹೇಳಿಕೊಳ್ಳಬೇಕು. ಹೆಚ್ಚಿನ ಬೆಲೆ ಹಾಕಿ ತಮ್ಮನ್ನು ಕೊಂಡುಕೊಳ್ಳಬೇಕಾಗಿದೆ