ಶಂಕಿತ ಪ್ರೇಮ ಪ್ರಕರಣ 18 ವಿದ್ಯಾರ್ಥಿಗಳು ಸಸ್ಪೆಂಡ್.!

ಕರಾವಳಿ

ಮಂಗಳೂರಿನ ವಿಟ್ಲದಲ್ಲಿರುವ ಖಾಸಗಿ ಪಿಯು ಕಾಲೇಜಿನಲ್ಲಿ ಅಂತರ್‌ಧರ್ಮೀಯ ಸಂಬಂಧದ ಆರೋಪದ ಮೇಲೆ 18 ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗಿದೆ. ಮಾರ್ಚ್ 2023 ರಲ್ಲಿ ನಡೆಯಲಿರುವ ಪರೀಕ್ಷೆಗಳಿಗೆ ಮಾತ್ರ ಹಾಜರಾಗುವಂತೆ ಮ್ಯಾನೇಜ್‌ಮೆಂಟ್ ಈ ವಿದ್ಯಾರ್ಥಿಗಳಿಗೆ ಸೂಚಿಸಿದೆ.

ಹಿಂದೂ ವಿದ್ಯಾರ್ಥಿನಿ ಮತ್ತು ಮುಸ್ಲಿಂ ವಿದ್ಯಾರ್ಥಿ ನಡುವಿನ ಪ್ರೇಮ ಪ್ರಕರಣದ ಬಗ್ಗೆ ಗಾಸಿಪ್ ಹರಿದಾಡುತ್ತಿತ್ತು, ಕಾಲೇಜು ಆಡಳಿತವು ವಿದ್ಯಾರ್ಥಿಗಳ ಮೊಬೈಲ್ ಫೋನ್ ಮತ್ತು ಬ್ಯಾಗ್‌ಗಳನ್ನು ಪರಿಶೀಲಿಸಲಿಸಿದಾಗ ಮುಸ್ಲಿಂ ಹುಡುಗನೊಬ್ಬ ಹಿಂದೂ ಹುಡುಗಿಗೆ ಬರೆದ ಪ್ರೇಮ ಪತ್ರ ದೊರೆಯಿತು. ಆ ದಿನ ಹುಡುಗ ಕಾಲೇಜಿಗೆ ಗೈರಾಗಿದ್ದ. ಮ್ಯಾನೇಜ್‌ಮೆಂಟ್ ಹುಡುಗಿಯ ಪೋಷಕರನ್ನು ಕರೆಸಿ ಮಾಹಿತಿ ಪಡೆದು,ವಿಚಾರಣೆ ನಡೆಸಿ, ವಿದ್ಯಾರ್ಥಿನಿಯನ್ನು ತರಗತಿಗಳಿಗೆ ಕಳುಹಿಸಬೇಡಿ. ಮಾರ್ಚ್ 2023 ರಲ್ಲಿ ನಡೆಯುವ ಪರೀಕ್ಷೆಗೆ ಮಾತ್ರ ಹಾಜರಾಗುವಂತೆ ಸೂಚಿಸಿದೆ.ನಂತರ ಈ ಪ್ರಕರಣಕ್ಕೆ ಸಂಬಂಧಿಸಿದಂಚೆ 18 ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗಿದೆ.