ಯು.ಪಿ ಮಾದರಿ.ರಾಯಿ ಎಂಬಲ್ಲಿ ಅನೈತಿಕ ಪೊಲೀಸ್ ಗಿರಿ. ಜಿಲ್ಲೆಯಲ್ಲಿ ಮತ್ತೆ,ಮತ್ತೆ ಹೆಡೆ ಬಿಚ್ಚುತ್ತಿದೆ ಅನೈತಿಕ ಪೊಲೀಸ್ ಗಿರಿ

ಕರಾವಳಿ

ಕರಾವಳಿ ಭಾಗದಲ್ಲಿ ಮೆಲ್ಲನೆ ಮೂಲೆಗೆ ಸೇರಿದ್ದ ಅನೈತಿಕ ಪೊಲೀಸ್ ಗಿರಿ ಮತ್ತೆ ವಿಜೃಂಭಿಸಲು ಆರಂಭಿಸಿದೆ. ಇನ್ನೇನೂ ಚುನಾವಣೆಗೆ 4-5 ತಿಂಗಳು ಬಾಕಿ ಇರುವಂತೆ ಹಿಂದೂ-ಮುಸ್ಲಿಂ ಮಧ್ಯೆ ಹುಳಿ ಹಿಂಡುವ ಅನೈತಿಕ ಗೂಂಡಾಗಿರಿ ಸದ್ದು ಮಾಡತೊಡಗಿದೆ.

ಮೂಲರ ಪಟ್ನಾದ ಮೇಸ್ತ್ರಿ ಕೆಲಸಕ್ಕೆ ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ವಿನಾ ಕಾರಣ ಹಿಂದುತ್ವವಾದಿಗಳ ಗುಂಪು ಕ್ರೂರವಾಗಿ ಯುಪಿ ಮಾದರಿ ಹಲ್ಲೆ ನಡೆಸಿರುವ ಘಟನೆ ಸೊರ್ನಾಡು-ರಾಯಿ ಬಳಿ ನಡೆದಿದೆ.

ಮೂಲರ ಪಟ್ನದ ಕೂಲಿ ಕಾರ್ಮಿಕರೊಬ್ಬರು ಪ್ರತೀದಿನ ಬಸ್ ವೊಂದರಲ್ಲಿ ಬಿ.ಸಿ. ರೋಡ್ ಮಾರ್ಗವಾಗಿ ಮೂಡಬಿದಿರೆಗೆ ಕೆಲಸಕ್ಕೆ ತೆರಳುತ್ತಿದ್ದರು. ಬೆಳಗಿನ ಸಮಯ ಬಸ್ ಪ್ರಯಾಣಿಕರಿಂದ ತುಂಬಿದ್ದ ಕಾರಣ ಶಾಲಾ ಮಕ್ಕಳು, ಮಹಿಳೆಯೊಬ್ಬರು ತಮ್ಮ ಬ್ಯಾಗನ್ನು ಕುಳಿತಿದ್ದ ಸಂತ್ರಸ್ತನ ಕೈಯ್ಯಲ್ಲಿ ನೀಡಿದ್ದರು. ಮಹಿಳೆ ಹಾಗೂ ಶಾಲಾ ಮಕ್ಕಳು ಇಳಿಯುವ ಸ್ಥಳ ಬಂದಾಗ ಸಂತ್ರಸ್ತನ ಕೈಯಲ್ಲಿದ್ದ ಬ್ಯಾಗನ್ನು ಪಡೆದುಕೊಂಡು ಬಸ್ ನಿಂದ ಇಳಿದು ಅವರ ಪಾಡಿಗೆ ತೆರಳಿದ್ದಾರೆ.
ಆ ಬಳಿಕ ಬಸ್ ನ ಕಂಡೆಕ್ಟರ್ ಕುಕ್ಕುದ ಬಳಿ ಸಂತ್ರಸ್ತನೊಂದಿಗೆ ತಗಾದೆ ತೆಗೆದು ಮಹಿಳೆಯ ಮೈ ಮುಟ್ಟಿದ್ದಿಯಾ ಎಂದು ಆರೋಪಿಸಿ ಬಸ್ಸಿನಿಂದ ಕೆಳಗಿಳಿಸಿ,ಸಂತ್ರಸ್ತನ ಜೊತೆ ಮಾತಿನ ಚಕಮಕಿ ನಡೆಸಿ ನಂತರ ಸ್ಥಳಕ್ಕೆ ಹಿಂದ್ವುತ್ವ ಕಾರ್ಯಕರ್ತರನ್ನು ಕರೆಸಿ ಸಂತ್ರಸ್ತನನ್ನು ಅವರ‌ ಕೈಗೆ‌ ಒಪ್ಪಿಸಿ ಬಸ್‌ ತೆರಳಿದೆ.

ಬಳಿಕ ಹಿಂದುತ್ವವಾದಿಗಳ ಗುಂಪು ಸಂತ್ರಸ್ತನನ್ನು ತಮ್ಮ ವಶಕ್ಕೆ ಪಡೆದು ರಾಯಿ ಎಂಬಲ್ಲಿರುವ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಆತನ ಬಟ್ಟೆ ಬಿಚ್ಚಿ,ಗೋಳಿಮರಕ್ಕೆ ಕಟ್ಟಿಹಾಕಿದ ಸಂಘೀ ಕಾರ್ಯಕರ್ತರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.ಬಳಿಕ ಬಂಟ್ವಾಳ ಪೊಲೀಸರಿಗೆ ಮಾಹಿತಿ ನೀಡಿ ಪೊಲೀಸರೊಂದಿಗೆ ಒಪ್ಪಂದ ಮಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.ಆದರೆ ಸಂಘಿ ಮನೋಭಾವದ ಪೊಲೀಸರು ಸಂತ್ರಸ್ತನನ್ನು ಅಸ್ಪತ್ರೆಗೆ ಕರೆದು ಕೊಂಡು ಹೋಗಿ,ಕೇವಲ ಬಿ.ಪಿ ಮಾತ್ರ ಪರಿಶೀಲಿಸಿ ಅವನಿಗಾದ ಹಲ್ಲೆಯನ್ನು,ಬೆನ್ನಿಗಾದ ಗಾಯವನ್ನು, ವೈದ್ಯರಿಗೆ ತೋರಿಸದೆ,ಸೂಕ್ತ ಚಿಕಿತ್ಸೆಯನ್ನು ಕೊಡಿಸದೆ ಬಂಟ್ವಾಳ ಪೊಲೀಸ್ ಠಾಣೆಗೆ ವಾಪಸು ಕರೆತಂದು,ಸಂಜೆ 5 ಗಂಟೆ ತನಕ ಠಾಣೆಯಲ್ಲೆ ಇರಿಸಿ,ನಂತರ ಮನೆಯವರನ್ನು ಕರೆಸಿ,ಅರೋಪಿಗಳ ಮೇಲೆ ಕೇಸು ದಾಖಲು ಮಾಡದೆ,ಸಂತ್ರಸ್ತನನ್ನೆ ಬೆದರಿಸಿ ಮನೆಯರೊಂದಿಗೆ ಕಳುಹಿಸಿರುತ್ತಾರೆ.

ಕೂಲಿ ಕಾರ್ಮಿಕನಿಗೆ ಹಿಂಸಾತ್ಮಕವಾಗಿ ಹಲ್ಲೆ ಮಾಡಿದ ಸಂಘಪರಿವಾರದ ಪುಂಡರು,ಬಸ್ಸಿನ ಕಂಡೆಕ್ಟರ್ ನ ಸಂಚಿನಿಂದ ಕೂಲಿ ಕಾರ್ಮಿಕನಿಗೆ ಭೀಕರ ಹಲ್ಲೆ. ಕ್ಷುಲಕ ಕಾರಣ ಹೇಳಿ  ಕಾರ್ಮಿಕನನ್ನು ಬಸ್ಸಿನಿಂದ ಹೊರಗೆ ಕರೆದುಕೊಂಡು ಹೋಗಿ ಗುಡ್ಡಕಾಡು ಪ್ರದೇಶದಲ್ಲಿ ಮರಕ್ಕೆ ಕಟ್ಟಿ ಹಾಕಿ ಯುಪಿ ಮಾದರಿಯಲ್ಲಿ ಹಲ್ಲೆ,ಈ ಘಟನೆಯ ರೂವಾರಿಗಳ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾದದ್ದು ಪೊಲೀಸ್ ಇಲಾಖೆಯ ಕರ್ತವ್ಯವಾಗಿದೆ.

ಕೆಲವೇ ತಿಂಗಳ ಹಿಂದೆ ಅಡ್ಡೂರಿನ ಇಬ್ಬರು ಜವಳಿ ವ್ಯಾಪಾರಿಗಳ ಮೇಲೆ ಪುತ್ತೂರಿನ ಕಡಬದಲ್ಲಿ ಭೀಕರ ಹಲ್ಲೆ. ಉತ್ತರ ಪ್ರದೇಶ ಮಾದರಿಯ ಗುಂಪು ಹಲ್ಲೆ ಕರಾವಳಿಯಲ್ಲಿ ಪ್ರತಿಧ್ವನಿಸಿತ್ತು.

ಮಂಗಳೂರಿನ ಕಂಕನಾಡಿಯಲ್ಲಿರುವ ಪ್ರತಿಷ್ಠಿತ ಚಿನ್ನಾಭರಣ ಮಳಿಗೆಯ ಮುಸ್ಲಿಂ ಉದ್ಯೋಗಿಯೋರ್ವನಿಗೆ ಮಳಿಗೆಗೆ ಗ್ರಾಹಕರಾಗಿ ಬಂದಿದ್ದ 20 ಮಂದಿಯ ಭಜರಂಗದಳದ ಯುವಕರ ಗುಂಪು ಹಲ್ಲೆ ನಡೆಸಿದ ಘಟನೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಕಾಂತಾರ ಚಿತ್ರ ನೋಡಲು ಹೋದ ಮುಸ್ಲಿಂ ಜೋಡಿಗೆ ಐವರು ಮತಾಂದ ಯುವಕರು ಹಿಂದು ದೇವರ ಚಿತ್ರ ನೋಡಬೇಡಿ ಎಂದು ಥಳಿಸಿ ಘಟನೆ.

ಇತ್ತೀಚೆಗೆ ಕೊಟ್ಟಾರ ಎಂಬಲ್ಲಿ ರಾತ್ರಿ 12 ಗಂಟೆಯ ಸುಮಾರಿಗೆ ಊಟಕ್ಕೆಂದು ಹೋಟೇಲ್ ಹುಡುಕಿಕೊಂಡು ಹೊರಟಿದ್ದ ಯುವಕ-ಯುವತಿಯರನ್ನು ತಡೆದು ನಿಲ್ಲಿಸಿದ ಭಜರಂಗದಳದ ಕಾರ್ಯಕರ್ತರಿಂದ ಹಲ್ಲೆ.ದ.ಕ ಜಿಲ್ಲೆಯ ಹಲವಾರು ಕಡೆಗಳಲ್ಲಿ ಮತಾಂಧರಿಂದ ಇಂತಹ ಅಹಿತಕರ ಘಟನೆಗಳು ನಡೆಯುತ್ತಿದೆ.

ಚುನಾವಣೆ ವರ್ಷವಾಗಿರುವುದರಿಂದ ಕರಾವಳಿ ಭಾಗದಲ್ಲಿ ಇನ್ನಷ್ಟು ಗುಂಪು ಹಲ್ಲೆ, ಅನೈತಿಕ ಪೊಲೀಸ್ ಗಿರಿ ನಡೆಯುವ ಸಾಧ್ಯತೆ ಇರುವುದು ದಟ್ಟವಾಗಿದೆ. ಪೊಲೀಸ್ ಇಲಾಖೆ ಇಂತಹ ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವ ಅನೈತಿಕ ಪೊಲೀಸ್ ಗಿರಿ ಹೀಗೆ ಮುಂದುವರಿದರೆ,ಗೃಹ ಇಲಾಖೆ ಹಾಗೂ ಜಿಲ್ಲಾಢಳಿತದ ವೈಪಲ್ಯವೇ ಕಾರಣವಾದಿತು.