ರಾಜ್ಯ ಸರ್ಕಾರದಿಂದ ಕಾನೂನು ಸುವ್ಯವಸ್ಥೆ,ಸಂಚಾರ ನಿರ್ವಹಣೆಗೆ ಮಹತ್ವದ ಕ್ರಮ. 9 ಪೊಲೀಸ್ ಉಪ-ವಿಭಾಗ ನಾಲ್ಕು ಸಂಚಾರಿ ಠಾಣೆಗಳನ್ನು ಹೊಸದಾಗಿ ತೆರೆಯಲು ಅನುಮತಿ ನೀಡಿ, ಆದೇಶಿಸಿದೆ.
ಈ ಕುರಿತಂತೆ ಒಳಾಡಳಿತ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ಭ್ರಷ್ಟಾಚಾರ ನಿಗ್ರಹ ದಳದಿಂದ ಪೊಲೀಸ್ ಇಲಾಖೆಗೆ ಹಂಚಿಕೆ ಮಾಡಿರುವ ಒಟ್ಟು 221 ಹುದ್ದೆಗಳಲ್ಲಿ ಈ ಕೆಳಕಂಡಂತೆ ಮರು ಹಂಚಿಕೆ ಮಾಡಿಕೊಳ್ಳಲು ಸಹಮತಿ ನೀಡಿಲಾಗಿದೆ ಎಂದಿದ್ದಾರೆ.
ಪೊಲೀಸ್ ಉಪಾಧೀಕ್ಷಕರ (ಸಿವಿಲ್)-17 ಹುದ್ದೆಗಳಲ್ಲಿ 8 ಹುದ್ದೆಗಳನ್ನು ವಿವಿಧ ಘಟಕಗಳಿಗೆ ಹಾಗೂ ಹೊಸದಾಗಿ ತೆರೆಯಲಾಗುವ 9 ಪೊಲೀಸ್ ಉಪ-ವಿಭಾಗಗಳಿಗೆ ಮರು ಹಂಚಿಕೆ ಮಾಡಲು ಸಹಮತಿಸಿದೆ ಎಂದಿದ್ದಾರೆ.
ಹೊಸದಾಗಿ 9 ಪೊಲೀಸ್ ಉಪ-ವಿಭಾಗ ಆರಂಭವಾಗಲಿದೆ.
ವಿಜಯನಗರ ಸಂಚಾರ ಉಪ-ವಿಭಾಗ, ಬೆಂಗಳೂರು ನಗರ.
ಹೆಚ್ ಎಸ್ ಆರ್ ಲೇಔಟ್ ಸಂಚಾರ ಉಪ ವಿಭಾಗ, ಬೆಂಗಳೂರು.
ಪೀಣ್ಯ ಉಪ ವಿಭಾಗ, ಬೆಂಗಳೂರು ನಗರ. ಕೆಂಗೇರಿ ಉಪ-ವಿಭಾಗ, ಬೆಂಗಳೂರು ನಗರ.ವಿಜಯನಗರ ಉಪ-ವಿಭಾಗ, ಮೈಸೂರು ನಗರ.
ಶಿವಮೊಗ್ಗ ಉಪ ವಿಭಾಗ-2, ಶಿವಮೊಗ್ಗ ಜಿಲ್ಲೆ. ಚನ್ನರಾಯಪಟ್ಟಣ ಉಪ ವಿಭಾಗ, ಹಾಸನ ಜಿಲ್ಲೆ.
ವಿಜಯಪುರ ಗ್ರಾಮಾಂತರ ಉಪ ವಿಭಾಗ, ವಿಜಯಪುರ ಜಿಲ್ಲೆ.
ಬೆಳ್ತಂಗಡಿ ಉಪ ವಿಭಾಗ, ದಕ್ಷಿಣ ಕನ್ನಡ ಜಿಲ್ಲೆ.ಇನ್ನೂ ಬೆಂಗಳೂರು ನಗರ ಸುಗಮ ಸಂಚಾರ ನಿರ್ವಣೆಗಾಗಿ ಹೊಸದಾಗಿ ನಾಲ್ಕು ಸಂಚಾರ ಪೊಲೀಸ್ ಠಾಣೆಗಳನ್ನು ತೆರೆಯಲಾಗುತ್ತಿದೆ. ಅದಕ್ಕಾಗಿ ಎಸಿಬಿಯಿಂದ ಮಿಕ್ಕುಳಿದಂತ ಹುದ್ದೆಗಳನ್ನು ಮರುಹಂಚಿಕೆ ಮಾಡಲಾಗಿದೆ.
ಬೆಂಗಳೂರಿನ ಹೊಸ ಸಂಚಾರಿ ಪೊಲೀಸ್ ಠಾಣೆಗಳು.
ತಲಘಟ್ಟಪುರ,ಬೆಳ್ಳಂದೂರು,ಹೆಣ್ಣೂರು, ಮಹದೇವಪುರ ಹೀಗೆ ಒಟ್ಟಾರೆಯಾಗಿ ರಾಜ್ಯ ಸರ್ಕಾರದಿಂದ ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ, ಬೆಂಗಳೂರಿನ ಸಂಚಾರ ನಿರ್ವಹಣೆಯ ಭಾಗವಾಗಿ 9 ಉಪ -ವಿಭಾಗೀಯ ಪೊಲೀಸ್ ಠಾಣೆ, ಸಂಚಾರ ಠಾಣೆಯನ್ನು ತೆರೆಯಲಾಗುತ್ತಿದೆ.