ಸ್ಮಾರ್ಟ್ ಸಿಟಿ ಕಾಮಗಾರಿ ಅವ್ಯವಸ್ಥೆ-ರಸ್ತೆ ಬದಿ ತೋಡಿದ್ದ ಹೊಂಡಕ್ಕೆ ಬಿದ್ದ ಬಡಪಾಯಿ ಮಹಿಳೆ

ಕರಾವಳಿ

ಮಂಗಳೂರು ಸ್ಮಾರ್ಟ್ ಸಿಟಿ ಕಾಮಗಾರಿ ಅವ್ಯವಸ್ಥೆ ಹಾಗೂ ಬೇಜಾಬ್ಧಾರಿಯಿಂದ ಕೂಡಿದೆ ಎನ್ನುವುದಕ್ಕೆ ಮತ್ತೊಂದು ಉದಾಹರಣೆ.

ಜ್ಯೋತಿ ಅಂಬೇಡ್ಕರ್ ವೃತ್ತದ ಬಳಿಯ ಕೆಎಂಸಿ ಹಾಸ್ಪತ್ರೆಯ ಮುಂಭಾಗದ ರಸ್ತೆ ಪಕ್ಕದ ಗುಂಡಿ ತೋಡಿ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಇದ್ದುದರಿಂದ ದಾರಿ ಹೋಕ ಮಹಿಳೆಯೊಬ್ಬರು ಅ ಗುಂಡಿಗೆ ಬಿದ್ದಿರುವ ಈ ಘಟನೆ ಸೋಮವಾರ ನಡೆದಿದೆ.

ಪತಿಯೊಂದಿಗೆ ತೆರಳುತ್ತಿದ್ದ ಮಹಿಳೆಯು ಆಕಸ್ಮಿಕವಾಗಿ ಕಾಲು ಜಾರಿ ಅ ಗುಂಡಿಗೆ ಬಿದ್ದಿದ್ದು, ತಕ್ಷಣ ಸ್ಥಳೀಯರು ಅವರನ್ನು ಮೇಲಕ್ಕೆತ್ತಿ ರಕ್ಷಿಸಿದ್ದಾರೆ.ಕಾಮಗಾರಿಯ ಹಿನ್ನೆಲೆಯಲ್ಲಿ ಅಗೆಯಲ್ಪಟ್ಟ ಈ ಗುಂಡಿಯನ್ನು ಮುಚ್ಚದೆ ಇದ್ದಿರುವುದೇ ಘಟನೆಗೆ ಕಾರಣ ಎನ್ನಲಾಗಿದೆ.

ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯದ ವಿರುದ್ಧ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವು ದಿನಗಳಿಂದ ಜನನಿಬಿಡ ಪ್ರದೇಶದಲ್ಲಿ ಗುಂಡಿ ತೋಡಲಾಗಿದ್ದು, ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಯಾವುದೇ ಮುಂಜಾಗ್ರತ ಕ್ರಮ ಕೈಗೊಳ್ಳದಿರುವುದು,ಕಾಮಗಾರಿ ಪೂರ್ತಿಗೊಳಿಸದೆ ಬಿಟ್ಟ ಕಾರಣದಿಂದ ಇಂತಹ ದುರಂತಗಳು ಸಂಭವಿಸಿದೆ.