ಈ ಹೊಟೇಲ್ ನಲ್ಲಿ ಕೆಲಸಕ್ಕಿಲ್ಲ ಮಾನವ, ಸರ್ವವು ಸೂಪರ್‌ ಮಾಡೆಲ್‌ ರೋಬೊಗಳು; ವಿಶ್ವದಲ್ಲೇ ಪ್ರಥಮ ಪ್ರಯೋಗ

ಅಂತಾರಾಷ್ಟ್ರೀಯ

ದುಬೈನ ಕೆಫೆವೊಂದರಲ್ಲಿ ಸೂಪರ್‌ ಮಾಡೆಲ್‌ ರೋಬೊಗಳು ಇನ್ನು ಮುಂದೆ ಸರ್ವ್‌ ಮಾಡಲಿದೆ‌. ವಿಶ್ವದಲ್ಲೇ ಮೊದಲ ಬಾರಿಗೆ ದುಬೈನ ‘ದೊನ್ನ ಸೈಬರ್‌ ಕೆಫೆ’ ಎಂಬ ಕೆಫೆಯಲ್ಲಿ 2023ರಿಂದ ಸಂಪೂರ್ಣವಾಗಿ ಸೂಪರ್‌ಮಾಡೆಲ್‌ ರೋಬೊಗಳೇ ಗ್ರಾಹಕರಿಗೆ ಸೇವೆ ಒದಗಿಸಲಿವೆ.

ಗ್ರಾಹಕರಿಗೆ ಈ ಕೆಫೆಯಲ್ಲಿ ಸರ್ವ್ ಮಾಡಲು ಒಬ್ಬರೇ ಒಬ್ಬರು ಮಾನವ ಜೀವಿ ಇರುವುದಿಲ್ಲ.ಎಲ್ಲಾ ಜನರಿಗೂ ಸೂಪರ್‌ ಮಾಡೆಲ್‌ ರೋಬೊಗಳೇ ಸರ್ವ್‌ ಮಾಡಲಿವೆ ಎಂದು ತಿಳಿದು ಬಂದಿದೆ.ಈ ಸೂಪರ್‌ ಮಾಡೆಲ್‌ ರೋಬೊಗಳು ಗ್ರಾಹಕರ ಜೂತೆ ಸಂವಹನ‌ ನಡೆಸುತ್ತದೆ.ಜನರ ಭಾವನೆಗಳಿಗೆ ಸ್ಪಂದಿಸುತ್ತದೆ.ಜನರಿಗೆ ಏನು ಬೇಕೋ ಅದನ್ನು ತಲುಪಿಸುವ ಕೆಲಸ ಮಾಡುತ್ತದೆ.ದಿನದ 24 ಗಂಟೆಯೂ ಕೆಫೆ ತೆರೆದಿರಲಿದ್ದು, ದುಬೈನ ಈ‌ ಕೆಫೆಗೆ ತೆರಳಲು ಜನರು ಹುಮ್ಮಸ್ಸಿನಿಂದ ಕಾಯುತ್ತಿದ್ದಾರೆ.

ಕೆಫೆಯಲ್ಲಿ ಸೂಪರ್ ಮಾಡೆಲ್ ರೋಬೋಟ್ ಜೊತೆಗೆ, ಹಲವಾರು ಸ್ವಯಂ-ಕಾರ್ಯ ನಿರ್ವಹಿಸುವ ಐಸ್ ಕ್ರೀಮ್ ಯಂತ್ರಗಳು‌ ಇವೆ.‌ಇದಲ್ಲದೆ ರೋಬೋಟ್ ಕೈಗಳಿಂದಲೇ ತಯಾರಿಸಿದ ಕಾಫಿ ಇರುತ್ತದೆ.