ಮೂಡಬಿದ್ರೆಯಲ್ಲಿ ಬೆಳಗಿನ ಜಾವ ಅಕ್ರಮ ಕಸಾಯಿ ಖಾನೆಗೆ ದಾಳಿ ನಡೆಸಿ,4 ಗೋವು,ಭಾರಿ ಪ್ರಮಾಣದ ಮಾಂಸ ವಶ

ಕರಾವಳಿ

ಮೂಡಬಿದಿರೆಯ ಅಲಂಗಾರು ಎಂಬಲ್ಲಿ ಬೆಳಗಿನ ಜಾವ ಅಕ್ರಮ ಕಸಾಯಿಖಾನೆಗೆ ದಾಳಿ ನಡೆಸಿದ ಹಿಂದು ಜಾಗರಣೆ ವೇದಿಕೆಯ ಕಾರ್ಯಕರ್ತರು.

ಮೂಡಬಿದಿರೆಯ ಸಮೀಪದ ಅಲಂಗಾರು ಎಂಬಲ್ಲಿರುವ ಆಶ್ರಯ ಕಾಲೋನಿಯಲ್ಲಿ ವಾಸವಾಗಿರುವ ಗಿಲ್ಬರ್ಟ್ ಮಿರಾಂದ ಎಂಬವರ ಅಕ್ರಮ ಕಸಾಯಿ ಖಾನೆಗೆ ಇಂದು ಬೆಳಿಗ್ಗಿನ ಜಾವ 4 ಗಂಟೆಗೆ ಖಚಿತ ಮಾಹಿತಿ ಮೇರೆಗೆ ಹಿಂಜಾವೇ ಕಾರ್ಯಕರ್ತರು ದಾಳಿ ನಡೆಸಿದ್ದಾರೆ.

ದಾಳಿ ಸಂದರ್ಭದಲ್ಲಿ ಹತ್ಯೆ ಮಾಡಲು ತಂದ 4 ಗೋವುಗಳು ಮತ್ತು ಭಾರಿ ಪ್ರಮಾಣ ದನದ ಮಾಂಸವನ್ನು ವಶ ಪಡಿಸಿಕೊಂಡಿದ್ದಾರೆ.ನಂತರ ಮೂಡಬಿದ್ರೆ ಪೊಲೀಸರಿಗೆ ಮಾಹಿತಿ ನೀಡಿ ವಶ ಪಡಿಸಿಕೊಂಡ ವಸ್ತುಗಳನ್ನು ಮೂಡಬಿದ್ರೆಯ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಈ ಬಗ್ಗೆ ಕೇಸು ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ.