5ನೇ ಹಾಗೂ 8ನೇ ತರಗತಿ ಮಕ್ಕಳ ಮೌಲ್ಯಮಾಪನ ಅದು ಪಬ್ಲಿಕ್ ಪರೀಕ್ಷೆಯಲ್ಲ. ಯಾರನ್ನೂ ಫೈಲ್ ಮಾಡುವುದಿಲ್ಲ:ಶಿಕ್ಷಣ ಸಚಿವರು

ರಾಜ್ಯ

5ನೇ ಹಾಗೂ 8ನೇ ತರಗತಿ ಮಕ್ಕಳ ಮೌಲ್ಯಮಾಪನದ ಬಗ್ಗೆ ಸರ್ಕಾರದ ಸುತ್ತೋಲೆ ಬಗ್ಗೆ ಕೆಲವರು ತಪ್ಪಾಗಿ ಅರ್ಥೈಸಿದ್ದಾರೆ. ಅದು ಪಬ್ಲಿಕ್ ಪರೀಕ್ಷೆಯಲ್ಲ. ಯಾರನ್ನೂ ಅನುತ್ತೀರ್ಣ ಮಾಡುವುದಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸ್ಪಷ್ಟಪಡಿಸಿದರು.

ನಗರದ ಸರ್ಕಾರಿ ಎಂಪ್ರೆಸ್ ಶಾಲೆಯ ಸಭಾಂಗಣದಲ್ಲಿ ರುಪ್ಸಾ ರಾಜ್ಯ ಸಂಘಟನೆ ಹಾಗೂ ಜಿಲ್ಲಾ ಅನುದಾನ ರಹಿತ ಶಾಲಾ ಆಡಳಿತ ಮಂಡಳಿ ಒಕ್ಕೂಟ ಟ್ರಸ್ಟ್ ವತಿಯಿಂದ ಶನಿವಾರ ಆಯೋಜಿಸಿದ್ದ ಶೈಕ್ಷಣಿಕ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಹಲವು ಸಂದರ್ಭದಲ್ಲಿ ಕೆಳಹಂತದಲ್ಲಿ ಮಕ್ಕಳಿಗೆ ಏನು ಕಲಿಸಿಲ್ಲ ಎಂಬ ದೂರುಗಳು ಬರುತ್ತಿವೆ. ಅಲ್ಲದೆ ಡ್ರಾಪ್ ಔಟ್ ಸಂಖ್ಯೆಯೂ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಕಲಿಕೆಯ ಮೌಲ್ಯಮಾಪನ ಮಾಡುವುದಕ್ಕೆ ಸುತ್ತೋಲೆ ಹೊರಡಿಸಲಾಗಿದೆ ಎಂದರು.

ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಮಗುವಿನ ತಿಳುವಳಿಕೆ ಮೌಲ್ಯಮಾಪನ ಮಾಡಲಾಗುತ್ತಿದೆ. ಇದರಿಂದ ಮುಂದಿನ ತರಗತಿಯಲ್ಲಿ ವಿದ್ಯಾರ್ಥಿಗೆ ಪಕ್ಕದಲ್ಲಿ ಕುಳಿತವನಿಗಿಂತ ನಾನು ಕಲಿಕೆಯಲ್ಲಿ ಹಿಂದೆ ಎಂಬ ಕೀಳರಿಮೆ ಬಾರದಂತೆ ನೋಡಿಕೊಳ್ಳುವುದೇ ಇದರ ಉದ್ದೇಶ ಎಂದರು.