ಜಲೀಲ್ ಮರ್ಡರ್: ಹಳೆ ರೌಡಿ ಶೀಟರ್ ಪುತ್ರನ ಕೈವಾಡ ಬಯಲು

ಕರಾವಳಿ

ಕಾಟಿಪಳ್ಳ 4 ನೇ ಬ್ಲಾಕ್ ನೈತನಂಗಡಿ ಬಳಿ ನಿನ್ನೆ ರಾತ್ರಿ ಜಲೀಲ್ ಮೇಲೆ ದುಷ್ಕರ್ಮಿಗಳು ಅಂಗಡಿಗೆ ನುಗ್ಗಿ ಹಲ್ಲೆ ನಡೆಸಿದ್ದು, ತೀವ್ರ ರಕ್ತಸ್ರಾವಕ್ಕೊಳಗಾದ ಜಲೀಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.

ಕೋಮು ಸೂಕ್ಷ್ಮ ಕಾಟಿಪಳ್ಳದಲ್ಲಿ ಜಲೀಲ್ ಹತ್ಯೆ ಪ್ರಕರಣ ದೊಡ್ಡ ರೀತಿಯ ಸಂಚಲನಕ್ಕೆ ಕಾರಣವಾಗಿದೆ. ಇದೀಗ ಜಲೀಲ್ ಹತ್ಯೆಯ ಹಿಂದೆ ಹಳೇ ರೌಡಿ ಶೀಟರ್ ಪುತ್ರನ ಕೈವಾಡವಿರುವುದಾಗಿ ಬೆಳಕಿಗೆ ಬಂದಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿರುವುದು ದೃಢಪಟ್ಟಿದೆ.

ಜಲೀಲ್ ಕೂಳೂರಿನ ನಿವಾಸಿಯಾಗಿದ್ದು, ಕಾಟಿಪಳ್ಳದಲ್ಲಿ ಅಂಗಡಿ ಇಟ್ಟು ವ್ಯಾಪಾರ ನಡೆಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಈತನ ಅಂಗಡಿಗೆ ರೌಡಿ ಶೀಟರ್ ಪುತ್ರನ ತಂಡ ಹಫ್ತಕ್ಕಾಗಿ ಪೀಡಿಸುತ್ತಿದ್ದ ಘಟನೆಯೂ ಇದೀಗ ಬಯಲಾಗಿದೆ. ಸುರತ್ಕಲ್ ವ್ಯಾಪ್ತಿಯಲ್ಲಿ ಅನೇಕ ಚಿಲ್ಟು ಪಿಲ್ಟು ಗ್ಯಾಂಗ್ ಗಳು ತಂಡ ಕಟ್ಟಿಕೊಂಡು ಹಫ್ತಾಕ್ಕಾಗಿ ಬೆದರಿಸುವ ಘಟನೆಗಳು ನಡೆಯುತ್ತಿದ್ದು, ಪೊಲೀಸ್ ಇಲಾಖೆಯ ನಿರ್ಲಕ್ಷ್ಯ ವೂ ಕೂಡ ಹಫ್ತಾ ಗ್ಯಾಂಗ್ ಗೆ ಅನುಕೂಲಕಾರಿಯಾಗಿ ಬಿಟ್ಟಿದೆ.

ಜಲೀಲ್ ಹತ್ಯೆಯ ಹಿಂದೆ ಪುರಾತನ ರೌಡಿಯೊಬ್ಬನ ಪುತ್ರನ ನೆರಳಿದ್ದು, ಈ ತಂಡ ಜಲೀಲ್ ನನ್ನು ಹತ್ಯಗೈದಿರುವುದು ದೃಢಪಟ್ಟಿದೆ. ಸಂಪೂರ್ಣ ವಿವರ ಪೊಲೀಸ್ ತನಿಖೆಯಿಂದ ತಿಳಿದುಬರಲಿದೆ.