ಜಲೀಲ್ ಹತ್ಯೆ: ಮತ್ತೋರ್ವ ಆರೋಪಿ ಲಕ್ಷೀಶ ದೇವಾಡಿಗ ಬಂಧನ

ಕರಾವಳಿ

ಕಾಟಿಪಳ್ಳ ನೈತಂಗಡಿ ಜಲೀಲ್ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಮತ್ತೋರ್ವ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. ಲಕ್ಷೀಶ ದೇವಾಡಿಗ ಎಂಬಾತ ಬಂಧಿತ ಆರೋಪಿಯಾಗಿದ್ದಾನೆ.

ಜಲೀಲ್ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಶೈಲು ಯಾನೆ ಶೈಲೇಶ್, ಸವಿನ್ ಕಾಂಚನ್ ಆಲಿಯಾಸ್ ಮುನ್ನ, ಪವನ್ ಆಲಿಯಾಸ್ ಪಚ್ಚು ಎಂಬುವರನ್ನು ಘಟನೆ ನಡೆದು 24 ಗಂಟೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಲಕ್ಷೀಶ ದೇವಾಡಿಗ ಬಂಧನದೊಂದಿಗೆ ಬಂಧಿತರ ಸಂಖ್ಯೆ ನಾಲ್ಕಕ್ಕೇರಿದೆ.