ಕೋವಿಡ್ ನಾಲ್ಕನೇ ಅಲೆ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ ಕೋಡಿಮಠದ ಸ್ವಾಮಿಜಿ

ರಾಷ್ಟ್ರೀಯ

ಚೀನಾದಲ್ಲಿ ರೌದ್ರಾ ನರ್ತನ ತೋರಿರುವ ಕೊರೋನಾ ಬಗ್ಗೆ ಈಗಾಗಲೇ ಭಾರತದಲ್ಲಿ ಆತಂಕ ಹೆಚ್ಚಾಗಿದೆ. ಮೊದಲ ಮೂರು ಅಲೆಗಳಂತೆ ನಾಲ್ಕನೇ ಅಲೆಯು ಜೋರಾಗಿ ಕಾಡಬಹುದೆಂಬ ಭೀತಿ ಶುರುವಾಗಿದೆ, ಹೀಗಿರುವಾಗಲೇ ಕೋಡಿಮಠದ ಸ್ವಾಮಿಗಳು ನಾಲ್ಕನೇ ಅಲೆ ಬಗ್ಗೆ ಭವಿಷ್ಯ ನುಡಿದಿದ್ದಾರೆ.

ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕೋಡಿಮಠದ ಸ್ವಾಮಿಗಳು,
“ಒಲೆ ಹತ್ತಿ ಉರಿದರೆ ಅಡುಗೆ ಆಗುತ್ತೆ, ಭೂಮಿ ಹತ್ತಿ ಉರಿದರೆ ಏನಾಗುತ್ತೆ?,” ಅಂಥ ಪ್ರಸಂಗ ಮುಂದೆ ನಡೆಯುತ್ತೆ, ಮುಂದೆ ಅದರ ಬಗ್ಗೆ ಭವಿಷ್ಯ ನುಡಿಯುತ್ತೇನೆ. ಕೊರೊನಾ ನಾಲ್ಕನೆ ಅಲೆ ಹೆಚ್ಚು ಬಾಧಿಸುವುದಿಲ್ಲ, ಜನರು ಆತಂಕ ಪಡುವ ಅವಶ್ಯಕತೆಯೇ ಇಲ್ಲ. ಕೊರೊನಾ ಬರುತ್ತದೆ,ಹೋಗುತ್ತದೆ.ಸಾವು ನೋವು ಸಂಭವಿಸಲ್ಲ. ಅಪಾಯ ಪಡುವ ಅಗತ್ಯವೇ ಇಲ್ಲ ಎಂದು ಕೋಡಿಮಠದ ಡಾ.ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಭವಿಷ್ಯ ನುಡಿದಿದ್ದಾರೆ.