Dysp, ಕೆ.ಯು. ಬೆಳ್ಳಿಯಪ್ಪ ಕುಂದಾಪುರಕ್ಕೆ,ಶ್ರೀಕಾಂತ್.ಕೆ ಭಟ್ಕಳಕ್ಕೆ ವರ್ಗಾವಣೆ

ರಾಜ್ಯ

ಕಳೆದ ಒಂದು ವರ್ಷ 10 ತಿಂಗಳುಗಳಿಂದ Dysp ಯಾಗಿ ಭಟ್ಕಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬೆಳ್ಳಿಯಪ್ಪರವರನ್ನು ಕುಂದಾಪುರ Dysp ಯಾಗಿ ವರ್ಗಾವಣೆ ಮಾಡಲಾಗಿದೆ.ಪೊಲೀಸ್‌ ಇಲಾಖೆಯಲ್ಲಿ,ಸಾರ್ವಜನಿಕ ವಲಯದಲ್ಲೂ ಎಲ್ಲರ ಪ್ರೀತಿ, ವಿಶ್ವಾಸವನ್ನು ಸಂಪಾದಿಸಿಕೊಂಡಿದ್ದರು. ಇದೀಗ ಬೆಳ್ಳಿಯಪ್ಪ ಜಾಗಕ್ಕೆ ಕುಂದಾಪುರದಿಂದ ಶ್ರೀಕಾಂತ ಕೆ. ಅವರನ್ನು ವರ್ಗಾವಣೆ ಮಾಡಲಾಗಿದ್ದು, ಒಂದೆರಡು ದಿನಗಳಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಶ್ರೀಕಾಂತ ಈ ಹಿಂದೆ ಕುಮಟಾ ಸಿಪಿಐ, ನಂತರ ಜಿಲ್ಲಾ ಎಸಿಬಿಯಲ್ಲಿ Dysp ಆಗಿ ಕೆಲಸ ನಿರ್ವಹಿಸಿದ್ದರು.