ರ‍್ಯಾಗಿಂಗ್‌ ಪೆಡಂಭೂತ; ಸುಳ್ಯ ಕೆವಿಜಿ ಕಾಲೇಜಿನಲ್ಲಿ ಕೇರಳ ಮೂಲದ ವಿದ್ಯಾರ್ಥಿಗಳಿಂದ ವಿದ್ಯಾರ್ಥಿನಿಯ ರ‍್ಯಾಗಿಂಗ್‌

ಕರಾವಳಿ

ರ‍್ಯಾಗಿಂಗ್‌ ಎಂಬ ಪೆಡಂಭೂತ ಸುಳ್ಯಕ್ಕೂ ಕಾಲಿಟ್ಟಿದ್ದು, ಸುಳ್ಯದ ಕೆವಿಜಿ ಡೆಂಟಲ್ ಕಾಲೇಜಿನಲ್ಲಿ ಸರಕಾರಿ ಸೀಟ್ ವಿಚಾರವಾಗಿ ರಾಗಿಂಗ್ ನಡೆಸಿರುವ ಬಗ್ಗೆ ಕೇರಳ ಮೂಲದ ಆರು ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲಾಗಿದೆ. ರ‍್ಯಾಗಿಂಗ್‌ಗೆ ಒಳಗಾದ ಬೆಂಗಳೂರಿನ ವೈಟ್ ಫೀಲ್ಡ್ ನಿವಾಸಿ ಡೆಂಟಲ್ ವಿದ್ಯಾರ್ಥಿನಿ ಡಾ.ಪಲ್ಲವಿ ದೂರು ನೀಡಿದ್ದಾರೆ. ಮೂರನೇ ವರ್ಷದ ಡೆಂಡಲ್ ವಿದ್ಯಾರ್ಥಿನಿಯಾಗಿರುವ ಡಾ.ಪಲ್ಲವಿ ರ‍್ಯಾಂಕ್ ಹೋಲ್ಡರ್ ಆಗಿದ್ದಾರೆ.

ಡಾ.ಪಲ್ಲವಿಗೆ ರ‍್ಯಾಂಗಿಗ್ ಮಾಡಿದ ಆರೋಪದ ಮೇಲೆ ಕೇರಳ ಮೂಲದ ಆರು ವಿದ್ಯಾರ್ಥಿಗಳ ಮೇಲೆ ದೂರು ದಾಖಲಾಗಿದೆ. ರ‍್ಯಾಂಗಿಗ್ ಮತ್ತು ಪರಿಶಿಷ್ಟ ಜಾತಿ ದೌರ್ಜನ್ಯ ತಡೆ ಕಾಯ್ದೆಯಡಿ ಕೇಸು ದಾಖಲಾಗಿದೆ. ಡಾ.ಪಲ್ಲವಿ ಮೇಲೆ ಹಲ್ಲೆಯನ್ನೂ ನಡೆಸಿದ್ದಾರೆ.ಮೂರನೇ ವರ್ಷದ ಡೆಂಡಲ್ ವಿದ್ಯಾರ್ಥಿ ವಿಶಾಖ್, ಡಾ.ವಿಶಾಕ್, ಐಶ್ವರ್ಯ, ಐಲ್ಪಾ ಮೇರಿ ಮ್ಯಾಥ್ಯೂ, ಡೆನಲ್ ಸೆಬಾಸ್ಟಿಯನ್, ರಿಷಿಕೇಸ್, ದಯಾ ವರ್ಗೀಸ್ ವಿರುದ್ಧ ಸುಳ್ಯ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೇರಳ ಮೂಲದ ಈ ವಿದ್ಯಾರ್ಥಿಗಳಿಂದ ನಿರಂತರ ಕಿರುಕುಳ,ರ‍್ಯಾಗಿಂಗ್‌ ಮಾತ್ರವಲ್ಲದೆ‌ ಹಲ್ಲೆಯನ್ನು‌ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ. ಪರಿಶಿಷ್ಟ ಜಾತಿ ಮೆರಿಟ್​ನಲ್ಲಿ ಕಾಲೇಜಿನಲ್ಲಿ ಸೀಟು ಪಡೆದಿದ್ದ ಪಲ್ಲವಿಯನ್ನು ಇದೇ ವಿಚಾರವಾಗಿ ಕಿರುಕುಳ ನೀಡುತ್ತಿದ್ದರೆಂದು ಆರೋಪ ಮಾಡಿದ್ದಾರೆ. ಈ ಸಂಬಂಧ ಪ್ರಿನ್ಸಿಪಾಲ್​ಗೆ ಮತ್ತು HOD ಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.ಡಿಸೆಂಬರ್ 21 ರಂದು ಅಣ್ಣನ ಹಾಗೂ ನನ್ನ ಮೇಲೆ ಹಲ್ಲೆ ಮಾಡಿದರು. ನಾನು ಮತ್ತು ನಮ್ಮಣ್ಣ ಊಟ ಮುಗಿಸಿ ವಾಪಸ್ ಬರುತ್ತಿದ್ದಾಗ ಕೆಟ್ಟ ಪದಗಳಿಂದ ನಿಂದನೆ ಮಾಡಿದರು.

ಆ ಸಮಯದಲ್ಲಿ ನನ್ನ ಅಣ್ಣ ಪ್ರಶ್ನೆ ಮಾಡಿದ್ದಕ್ಕೆ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ನಾವು ಕೂಡಲೇ ಕಾಲೇಜು ಪ್ರಿನ್ಸಿಪಾಲ್ ಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ಅಲ್ಲಿಂದ ನೇರವಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಪಡೆದಿದ್ದೇವೆ.ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದೆ. ಈ ಘಟನೆಯ ಬಗ್ಗೆ ಡಿಪಾರ್ಟ್‌ಮೆಂಟ್ HOD ಗೆ ತಿಳಿಸಿದ್ದೇವೆ. ಆದರೂ ಕಾಲೇಜು ಆಡಳಿತ ಮಂಡಳಿ ಈ ಬಗ್ಗೆ ಯಾವ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ.