ಕುಂದಾಪುರದ ಕೋಟ ಪಡುಕೆರೆ ನಿವಾಸಿ ಖತಾರ್ ನಲ್ಲಿ ಕುಸಿದು ಬಿದ್ದು ಮೃತ್ಯು

ಕರಾವಳಿ

ಕೋಟತಟ್ಟು ಪಡುಕರೆ ನಿವಾಸಿ ಮುಹಮ್ಮದ್ (45) ಎಂಬವರು ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿರುತ್ತದೆ.ಮುಹಮ್ಮದ್ ಎಂಬವರು ಖತಾರಿನ ಸನಯ್ಯ ಎಂಬಲ್ಲಿ 14 ವರ್ಷಗಳಿಂದ ಉದ್ಯೋಗ ಮಾಡುತ್ತಿದ್ದರು.

2023ರ ಜ.2 ರಂದು ಊರಿಗೆ ಬರಲು ಸಿದ್ಧತೆ ನಡೆಸುತ್ತಿದ್ದರು.ಆದರೆ
ನಾಲ್ಕು ದಿನಗಳ ಹಿಂದೆ ಕೆಲಸ ಮಾಡುವಲ್ಲಿ ಕುಸಿದು ಬಿದ್ದು, ಮೆದುಳು ನಿಷ್ಕ್ರಿಯೆಗೊಂಡಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೆ ಮುಹಮ್ಮದ್ ರವರು ಮೃತಪಟ್ಟಿದ್ದಾರೆ.ಇವರು ಕೆಸಿಎಫ್ ಖತಾರ್ ಯುನಿಟ್ ನಲ್ಲೂ ಸಕ್ರಿಯರಾಗಿ ಕಾರ್ಯ ನಿರ್ವಹಿಸುತ್ತಿದ್ದರು.