ಹಿಜಾಬ್ ವಿವಾದ ಬಳಿಕ ರಾಜ್ಯದಲ್ಲಿ ಧರ್ಮದ ಅಮಲೇರಿ,ಧರ್ಮ ದಂಗಲ್ ಪ್ರಾರಂಭವಾಗಿ,ದೊಡ್ಡ ಮಟ್ಟದಲ್ಲಿ ಸುದ್ದಿಯೂ ಮಾಡಿತ್ತು. ಅನ್ಯ ಧರ್ಮೀಯರಿಗೆ ಜಾತ್ರೆಗಳಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಬಾರದೆಂದು ಆಗ್ರಹ ಕೇಳಿ ಬಂದಿತ್ತು.ಕೆಲವು ಕಡೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡದೆ ಬಹೀಷ್ಕರಿಸಲಾಗಿತ್ತು.
ಹಣ್ಣು,ತರಕಾರಿ,ಮೀನು ಮಾರುವ ಮುಸ್ಲಿಮರ ವಿರುದ್ಧ ರಾಜ್ಯದ ಕರಾವಳಿ ನಗರವಾದ ಮಂಗಳೂರಿನಲ್ಲಿ ಆಕ್ರಮಣಾಕಾರಿ ಪ್ರಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿದುಬಿಡಲಾಗಿತ್ತು.ಈ ಸಂದೇಶ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತು.ಕೆಲವು ಹಿಂದೂ ಸಂಘಟನೆಗಳ ನೇತಾರರು ಯಾರೂ ಬ್ಯಾರಿಗಳಿಂದ ಏನನ್ನೂ ಖರೀದಿಸಬೇಡಿ ಎಂದು ಫರ್ಮಾನು ಹೊರಡಿಸಿದರು.
ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಕೆಲವು ಹಿಂದೂ ಸಂಘಟನೆಗಳು ದೇವಸ್ಥಾನದ ಆವರಣದಲ್ಲಿ ಮುಸ್ಲಿಮರಿಗೆ ವ್ಯಾಪಾರ ನಿರ್ಬಂಧದ ಬ್ಯಾನರ್ ಅಳವಡಿಸಿ ನಿರ್ಬಂಧ ಹೇರಿತ್ತು.ಹಲಾಲ್ ಮತ್ತು ಜಟ್ಕಾ ವಿಚಾರ ಧರ್ಮ ಸಂಘರ್ಷಕ್ಕೆ ಕಾರಣವಾಗಿತ್ತು. ಇದೀಗ ಮಂಗಳೂರು ನಗರದ ಹೃದಯ ಭಾಗದ ಬಲ್ಮಠದಲ್ಲಿ “ಕೇಸರಿ ಮಿಲಿಟರಿ ಹೋಟೆಲ್”ಎಂಬ ಹೊಸ ನಮೂನೆಯ ಹೋಟೇಲೊಂದು ಆರಂಭಗೊಂಡಿದೆ.
ಈ ಹೋಟೆಲಿನ ಮುಂಭಾಗದಲ್ಲಿ ಭಗವತ್ ಧ್ವಜವನ್ನು ಅಳವಡಿಸಿ ವ್ಯಾಪಾರ ಆರಂಭಿಸಲಾಗಿದೆ. ಹೋಟೆಲ್‌ನ ಮುಂಬಾಗದಲ್ಲಿ ಜಟ್ಕಾ ಬೋಡ್೯ ಕಾಣಿಸಿಕೊಂಡಿದೆ. ಹಲಾಲ್‌ಗೆ ವಿರುದ್ಧವಾಗಿ ಜಟ್ಕಾ ಹೋಟೆಲ್ ಅರಂಭಗೊಂಡಿದೆ. ಮುಂದೊಂದು ದಿನ ಮಂಗಳೂರಿನ ಹೋಟೇಲು ಉದ್ಯಮವು ಧರ್ಮ ದಂಗಲ್ ಗೆ ಸಿಲುಕಿ ಕೇಸರಿಮಯ ಆಗಲೂಬಹುದು.ಈ ಧರ್ಮ ದಂಗಲ್ ರಾಜಕೀಯದಿಂದ ಕರಾವಳಿಯನ್ನು ಅ ಭಗವಂತನೇ ಕಾಪಾಡಬೇಕು.