ಹೊನ್ನಾವರ: ಓವರ್ ಟೇಕ್ ಮಾಡುವ ವಿಚಾರದಲ್ಲಿ ಜಗಳವಾಗಿ ಬೈಕ್ ಸವಾರನೋರ್ವ ಸಾರಿಗೆ ಬಸ್ ಚಾಲಕ ಹಾಗೂ ನಿರ್ವಾಹಕನ ಮೇಲೆ ಹಲ್ಲೆ ಮಾಡಿದ ಘಟನೆ ತಾಲೂಕಿನಲ್ಲಿ ನಡೆದಿದೆ.
ಹೊನ್ನಾವರ ಡಿಪ್ಪೋಗೆ ಸೇರಿದ ಬಸ್ಸಿನ ಚಾಲಕ ಕೃಷ್ಣಾ ನಾಯ್ಕ, ನಿರ್ವಾಹಕ ಮರಿಯಪ್ಪ ಹಲ್ಲೆಗೊಳಗಾದವರಾಗಿದ್ದಾರೆ. ತಾಲೂಕಿನ ಟೊಂಕ ಬಳಿ ಪ್ರಯಾಣಿಕರನ್ನ ಇಳಿಸಿ ತೆರಳುವಾಗ ಓವರ್ ಟೇಕ್ ಮಾಡುವ ಸಂಭಂದ ಬಸ್ಸಿನ ಚಾಲಕ ಹಾಗೂ ಬೈಕ್ ಚಾಲಕನ ನಡುವೆ ಜಗಳವಾಗಿದೆ.
ಇದೇ ವೇಳೆ ಬೈಕ್ ಚಾಲಕ ಸಾರಿಗೆ ಬಸ್ಸಿನ ಚಾಲಕ ಹಾಗೂ ನಿರ್ವಾಹಕನ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದು ಹಲ್ಲೆ ಮಾಡುವ ದೃಶ್ಯವನ್ನ ಪ್ರಯಾಣಿಕರೋರ್ವರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.