ಬೆಳ್ತಂಗಡಿ ತಾಲೂಕಿನ ವೇಣೂರಿನ ಗೋಳಿಯಂಗಡಿ ಬಳಿ ಬಸ್ಸು-ಇನೋವಾ ಕಾರಿನ ಮಧ್ಯೆ ನಡೆದ ಅಪಘಾತದಲ್ಲಿ ನೌಷಾದ್ ಹಾಜಿ ಸೂರಲ್ಪಾಡಿ ಸೇರಿದಂತೆ ಮತ್ತೊಬ್ಬರು ಮೃತಪಟ್ಟ ಘಟನೆ ನಡೆದಿದೆ.
ನೌಷಾದ್ ಹಾಜಿ ಸೂರಲ್ಪಾಡಿ ದಕ್ಷಿಣ ಕನ್ನಡ ಜಿಲ್ಲಾ ಮದರಸ ಮ್ಯಾನೇಜ್ ಮೆಂಟ್ ಅಧ್ಯಕ್ಷರಾಗಿ, ನಂಡೋ ಪೆಂಞಳ್ ಇದರ ಅಧ್ಯಕ್ಷರಾಗಿದ್ದರು. ಇವರು ಅರಳ ನಿವಾಸಿಯಾಗಿದ್ದು ಪ್ರಸ್ತುತ ಸೂರಲ್ಪಾಡಿಯಲ್ಲಿ ವಾಸವಾಗಿದ್ದಾರೆ..