ಮಂಗಳೂರಿನಲ್ಲಿ ತುಂಬಾ ಖಾಸಗಿ ಆಸ್ಪತ್ರೆಗಳದ್ದೇ ಕಾರುಬಾರು. ಇಂತಹ ಹೆಸರಾಂತ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆಗಾಗಿ ಬರುವ ಬಡ ರೋಗಿಗಳ ಪಾಡನ್ನಂತೂ ಹೇಳಲು ಆಗದಂತವು. ಪೂರ್ತಿ ಸುಲಿಗೆ ಮಾಡುವುದರಲ್ಲಿಯೇ ಇಂತಹ ಆಸ್ಪತ್ರೆಗಳು ಎತ್ತಿದ ಕೈ. ಆಪರೇಷನ್ ಇಲ್ಲ, ಚಿಕಿತ್ಸೆ ಇಲ್ಲ ಹೆಲ್ತ್ ಕಾರ್ಡ್ ಇದ್ದರೆ ಸಾಕು ಒಂದೇ ದಿನಕ್ಕೆ ಲಕ್ಷಗಟ್ಟಲೆ ರೂಪಾಯಿ ಬಿಲ್ ಸೃಷ್ಟಿಯಾಗುತ್ತದೆ. ಇದು ಮಂಗಳೂರಿನ ಕೆಲವು ಬಹು ಮಹಡಿ ಆಸ್ಪತ್ರೆಗಳಲ್ಲಿ ಮಾತ್ರ ಸಾಧ್ಯ.
ಇತ್ತೀಚೆಗೆ ಉಸಿರಾಟದ ಸಮಸ್ಯೆಯಿಂದ ಅಸ್ವಸ್ಥರಾಗಿದ್ದ ಮಹಿಳೆಯೊಬ್ಬರನ್ನು ಸುಬ್ರಹ್ಮಣ್ಯ ದಿಂದ ಮಂಗಳೂರಿಗೆ ಚಿಕಿತ್ಸೆಗೆಂದು ಕರೆದುಕೊಂಡು ಬಂದು ಮಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿ, ಅದೇ ಆಸ್ಪತ್ರೆಯ ಹೆಲ್ತ್ ಕಾರ್ಡ್ ತೋರಿಸಿ ದಾಖಲಿಸಲಾಯಿತು.ದಾಖಲಿಸುವಾಗ ಕೋವಿಡ್ ಪರೀಕ್ಷೆ ಮಾಡಬೇಕು ಒಂದು ದಿನದಲ್ಲಿ result ಬರುತ್ತದೆ ಅಲ್ಲಿಯವರೆಗೆ Isolation ward ನಲ್ಲಿ ಐಸಿಯುನಲ್ಲಿ ಇಡುತ್ತೇವೆ. ಬೆಡ್ ದಿನಕ್ಕೆ ರೂ 3000/-PPE kit , Oxygen , medicine ಹಾಗೂ nursing charge ಪ್ರತ್ಯೇಕ ಎಂದು ತಿಳಿಸಿ, ವೈದ್ಯರು ಪರಿಶೀಲಿಸಿ ನ್ಯುಮೋನಿಯ ಇದೆ ಎಂದು ತಿಳಿಸಿದರು. ಆದರೆ ಮಾರನೇ ದಿನ ಬೆಳಿಗ್ಗೆ ಕೊರೋನಾ ನೆಗೆಟಿವ್ ಬಂದಿದೆ. ಹೃದಯದ ತೊಂದರೆಯೂ ಇದೆ. ಬೇರೆ ವಾರ್ಡ್ ಗೆ ಶಿಫ್ಟ್ ಮಾಡಬೇಕು ಆಸ್ಪತ್ರೆಯಲ್ಲಿ ನಾಲ್ಕೈದು ದಿನ ಇರಬೇಕು. ಒಂದು ದಿನದ ಬಿಲ್ಲು ಕಟ್ಟಿ ಎಂದು ಹೇಳಿದ್ದಾರೆ. ಬಿಲ್ಲಿಂಗ್ ಕೌಂಟರ್ ನಲ್ಲಿ ಕೊಟ್ಟ ಬಿಲ್ ನೋಡಿ ಪೇಸೆಂಟ್ ಪಾರ್ಟಿಯವರಿಗೆ ಶಾಕ್.! ಒಂದು ದಿನದ ಐಸೊಲೇಶನ್, ಐಸಿಯು ಬಿಲ್ ಬರೋಬ್ಬರಿ ರೂಪಾಯಿ 83,000 ಆಗಿತ್ತು
ಇನ್ನೊಂದು ವೈರಸ್ ಪರೀಕ್ಷೆ ಮಾಡಿಸಬೇಕು ಇದಕ್ಕೆ ರೂಪಾಯಿ 23,000/- ಆಗುತ್ತದೆ ನಿಮ್ಮ ಸಮ್ಮತಿ ಇದ್ದಲ್ಲಿ ಮಾಡುತ್ತೇವೆ ಎಂದು ಹೇಳಿದ್ದರಿಂದ, ಪೇಸೆಂಟ್ ಪಾರ್ಟಿಯವರು ವೈದ್ಯರಲ್ಲಿ ತಮ್ಮ ಕಷ್ಟವನ್ನು ಹೇಳಿ, ಈ ಆಸ್ಪತ್ರೆಯ ಲಕ್ಷಕ್ಕೂ ಮೇಲ್ಪಟ್ಟ ದುಬಾರಿ ಬಿಲ್ ಕಟ್ಟಲು ಕಷ್ಟವಾಗುದಿಲ್ಲ, ಡಿಸ್ಟಾರ್ಜ್ ಮಾಡಲು ಕೇಳಿಕೊಂಡಾಗ ವೈದ್ಯರು ಡಿಸ್ಟಾರ್ಜ್ ಮಾಡಲು ಒಪ್ಪಿಗೆ ಕೊಟ್ಟರು. ನಂತರ ಬಿಲ್ ಕೌಂಟರ್ ನಲ್ಲಿ ಪರಿ-ಪರಿಯಾಗಿ ಕೇಳಿ ಕೊಂಡರೂ ಬಿಲ್ ಕಡಿಮೆ ಮಾಡಲು ಒಪ್ಪಲಿಲ್ಲ. ಇಲ್ಲಿನ ಉದ್ಯೋಗಿಗಳಿಗೆ ಸಂಬಳ ಕೊಡ ಬೇಕಲ್ಲವೇ ಎಂದು ಸಮಜಾಯಿಷಿ ನೀಡುತ್ತಾರೆ. ಅದೇ ಅಸ್ಪತ್ರೆಯವರು ಕೊಟ್ಟ ಹೆಲ್ತ್ ಕಾರ್ಡ್ ಗೆ ಯಾವುದೇ ರಿಯಾಯಿತಿ ಇಲ್ಲವಂತೆ.ಒಂದೇ ದಿನಕ್ಕೆ ಇಷ್ಟೊಂದು ದೊಡ್ಡ ಮೊತ್ತದ ದುಬಾರಿ ಬಿಲ್ ಆಗಬಹುದೆಂಬ ಊಹೆಯೂ ಆ ಪಾರ್ಟಿಗೆ ಇರಲಿಲ್ಲ. ದಾಖಲಿಸುವಾಗ ಅಸ್ಪತ್ರೆಯವರು ಮಾಹಿತಿಯೂ ಕೂಡ ನೀಡಿಲ್ಲ.
ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಬೇಕಾದ ಸಂಬಂಧ ಪಟ್ಟ pro ರವರಲ್ಲಿ ಈ ದುಬಾರಿ ಬಿಲ್ ಬಗ್ಗೆ ವಿಚಾರಿಸುವ ಎಂದರೆ ಆ ವ್ಯಕ್ತಿಗಳು ಹಾಗೆಲ್ಲ ಮಾತನಾಡಲು ಸಿಗುವುದು ಇಲ್ಲ.
ಕೋವಿಡ್ ಪರೀಕ್ಷೆಗೆ ಸಾಂಪಲ್ ಕೊಟ್ಟ ದಿನವೇ ರಿಸಲ್ಟ್ ನೆಗೆಟಿವ್ ಬಂದರೂ ಮಾರನೆಯ ದಿನದವರೆಗೆ ರೋಗಿಯ ಕಡೆಯವರಿಗೆ ವಿಷಯ ತಿಳಿಸುವುದಿಲ್ಲ. ರೋಗಿ ಐಸಿಯು ವಾರ್ಡ್ ಒಳಗೆ ಹೋದರೆ ಹೊರಗೆ ಬರುವಾಗ ಆಕ್ಸಿಜನ್ ಚಾರ್ಜ್, medical Equipment charges ,medicine charges, miscellaneous charges , Materials charges ಈ ನಕಲಿಗಳನ್ನು ಕೇಳುವವರೇ ಇಲ್ಲದಂತಾಗಿದೆ .ಕೊನೆಗೆ ಆ ಮಹಿಳೆಯನ್ನು ಅಲ್ಲಿಂದ ಡಿಸ್ಚಾರ್ಜ್ ಮಾಡಿ ಅಲ್ಲೇ ಪಕ್ಕದಲ್ಲಿದ್ದ ಇನ್ನೊಂದು ಆಸ್ಪತ್ರೆಯಲ್ಲಿ ದಾಖಲು ಮಾಡಿದರಂತೆ, ಅಲ್ಲಿ ಐದು ದಿನಗಳ ಚಿಕಿತ್ಸೆ ಪಡೆದು ಗುಣಮುಖರಾಗಿ ಡಿಸ್ಚಾರ್ಜ್ ಮಾಡುವಾಗ ಅಲ್ಲಿನ ಚಿಕಿತ್ಸಾವೆಚ್ಚ ಕೇವಲ ರೂಪಾಯಿ 14,500 ಪಾವತಿಸಿ ಆರೋಗ್ಯವಾಗಿ ಊರಿಗೆ ಸೇರಿದರಂತೆ ಆ ಬಡಪಾಯಿ ಕುಟುಂಬ.
ಮಂಗಳೂರಿನ ಕೆಲವು ಪ್ರತಿಷ್ಠಿತ ಆಸ್ಪತ್ರೆಯವರ ಹಗಲು ದರೋಡೆಗೆ ಬಡಜನರು ಆಸ್ಪತ್ರೆಯ ಚಿಕಿತ್ಸಾ ವೆಚ್ಚ ಭರಿಸಲು ಚಡಪಡಿಸುತ್ತಿದ್ದಾರೆ. ರೋಗಿಗಳ ರಕ್ತ ಹೀರುವ ಇಂತಹಾ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಹೋಗುವುದಕ್ಕಿಂತ ಮುಂಚೆ ಎರಡೆರಡು ಬಾರಿ ಯೋಚಿಸುವುದು ಉತ್ತಮ. ಬಡವರ ರಕ್ತ ಹೀರುವ ಇಂತಹ ಆಸ್ಪತ್ರೆಗಳ ಆಡಳಿತ ವರ್ಗದ ಮೇಲೆ ನಿಗಾ ಇಟ್ಟು ಕಾನೂನು ಮೂಲಕ ತಕ್ಕ ಪಾಠ ಕಲಿಸಬೇಕಾಗಿದೆ.