ಎಂಚಿನ ನಳಿನಣ್ಣ ಲವ್ ಜಿಹಾದ್‌‌.? ಚರಂಡಿ, ಮೋರಿ ಸಮಸ್ಯೆ ಏರ್ ತೂಪಿನಿ.?

ಕರಾವಳಿ

ಮಂಗಳೂರು, ಉಳ್ಳಾಲವು ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶ. ಇಲ್ಲಿ ರಸ್ತೆ, ಒಳಚರಂಡಿಯಂತಹ ಸಮಸ್ಯೆಗಳನ್ನು ಮಾತನಾಡುವ ಅಗತ್ಯವಿಲ್ಲ. ಬದಲಿಗೆ ನಿಮ್ಮ ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸಿ ಲವ್ ಜಿಹಾದ್‌‌ನಿಂದ ರಕ್ಷಿಸಿ ಎಂದು ನಳಿನ್ ಕುಮಾರ್ ಕಟೀಲು ಕರೆ ನೀಡಿದ್ದಾರೆ.

ಲವ್ ಜಿಹಾದ್ ನಿಲ್ಲಿಸಲು ‌ಭಾರತೀಯ ಜನತಾ ಪಾರ್ಟಿ ಬೇಕು. ಲವ್ ಜಿಹಾದ್ ವಿರುದ್ದ ಕಾನೂನನ್ನ ಬಿಜೆಪಿ ಸರ್ಕಾರ ತರುತ್ತೆ ಎಂದಿದ್ದಾರೆ.

ಇನ್ನು ಲವ್ ಜಿಹಾದ್ ಇತ್ತೀಚೆಗೆ ಕಾಡುತ್ತಿರುವ ಬಹಳ ದೊಡ್ಡ ಸಾಮಾಜಿಕ ಪಿಡುಗಾಗಿದ್ದು, ಇದಕ್ಕೆ ನಿಮ್ಮ ಮಕ್ಕಳು ಬಲಿಯಾಗದಂತೆ ನೋಡಿಕೊಳ್ಳಿ. ಅದಕ್ಕೆ ಬಿಜೆಪಿಗೆ ಗೆಲ್ಲಿಸಿ ಅಧಿಕಾರ ನೀಡಿ. ಬಿಜೆಪಿ ಅಧಿಕಾರಕ್ಕೆ ಬಂದರೆ ಯುವಕ-ಯುವತಿಯರ ರಕ್ಷಣೆಗೆ ಬದ್ಧವಾಗಿದೆ ಎಂದರು.

ಇವುಗಳು ಬಿಜೆಪಿ ರಾಜ್ಯಾಧ್ಯಕ್ಷ ಕಂ ಮಂಗಳೂರು ಎಂ.ಪಿ ನಳಿನಣ್ಣನ ಅಣಿಮುತ್ತು ಗಳು. ಬಿಜೆಪಿ ಬೂತ್ ಕಾರ್ಯಾಗಾರದಲ್ಲಿ ಇಂತಹ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ.

ಅಷ್ಟಕ್ಕೂ ನಳೀನ್ ಕುಮಾರ್ ರವರ ಈ ಲವ್ ಜಿಹಾದಿಗೂ- ರಸ್ತೆ, ಮೋರಿಗೂ ಇರುವುದು ಚುನಾವಣೆಯ ಸಂಬಂಧ. ಸುರತ್ಕಲ್ ಟೋಲ್ ಗೇಟ್ ಹೋರಾಟ, ಪಂಪ್ ವೆಲ್ ಬ್ರಿಡ್ಜ್ ಅಣಕು, ಮಂಗಳೂರು ತುಂಬೆಲ್ಲಾ ಹೊಂಡ ಗುಂಡಿಗೆ ಬಿದ್ದು ಹಲವಾರು ಜನರು ಪ್ರಾಣತೆತ್ತಾಗ ಇಲ್ಲಿನ ಮತದಾರ ಪ್ರಭುಗಳು ಸಂಸದರಿಗೆ ಹಿಡಿ ಶಾಪ ಹಾಕಿದ್ದರು. ಬಹುಶಃ ಜಿಲ್ಲೆಯ ಜನರ ಭಾವನೆಗಳನ್ನು ಚೆನ್ನಾಗಿ ಅರ್ಥೈಸಿಕೊಂಡಿರುವ ಮೂರು ಬಾರಿಯ ಸಂಸದ ನಳಿನ್ ಜನರು ಚುನಾವಣೆ ಸಮಯದಲ್ಲಿ ಹಿಂದುತ್ವ ಅಪಾಯದಲ್ಲಿದೆ ಎಂದುಬಿಟ್ಟರೆ ಜನ ನಂಬುತ್ತಾರೆ ಅನ್ನುವುದನ್ನು ಗೊತ್ತಿದ್ದು ಈ ರೀತಿಯ ಹೊಸ ಪ್ರಚೋದನಕಾರಿ ಭಾಷಣ ಮೊರೆ ಹೋಗಿದ್ದಾರೆ. ಲವ್ ಜಿಹಾದ್ ಬಗ್ಗೆ ಸುಪ್ರೀಂ ಕೋರ್ಟ್ ಸಾಕ್ಷ್ಯ ಗಳಿಲ್ಲ, ಆಧಾರ ಗಳಿಲ್ಲ ಎಂದು ಹೇಳಿದರೂ ಚುನಾವಣೆ ಲಾಭಕ್ಕಾಗಿ ಬಿಜೆಪಿ ಜನರಲ್ಲಿ ತೇಲಿಬಿಡುತ್ತದೆ. ಜನ ಮೂರ್ಖರಲ್ಲ ಅನ್ನುವುದನ್ನು ಸಾಬೀತು ಪಡಿಸಬೇಕಾದ ಅನಿವಾರ್ಯತೆ ಇದೆ. ಅದನ್ನು ಬುದ್ಧಿವಂತ ಜಿಲ್ಲೆಯ ಮತದಾರರು ತೀರ್ಮಾನಿಸಬೇಕಿದೆ.

ನಳಿನಣ್ಣ ಲವ್ ಜಿಹಾದ್ ಹಿಂದೆ ಹೋಗಲಿ. ಚರಂಡಿ,ಮೋರಿ ಸಮಸ್ಯೆ ನೋಡಲು ಸಮರ್ಥ ಸಂಸದ, ಶಾಸಕನನ್ನು ಜನ ಚುನಾಯಿಸಲಿ.