ಮಂಗಳೂರು ಜಿಲ್ಲೆಯಾದ್ಯಾಂತ ಅಲ್ಲಲ್ಲಿ ಮಧ್ಯಮ ವಯಸ್ಸಿನ ಹುಡುಗರು ದಿಢೀರಣೆ ಕಾಣೆಯಾಗುತ್ತಾರೆ.ಅಥವಾ ಬೆಂಗಳೂರು, ಮೈಸೂರು, ಇನ್ನಿತರ ಕಡೆಗಳಿಗೆ ಕೆಲಸಕ್ಕೆ ಹೋದವರು ಮತ್ತೆ ಸಂಪರ್ಕಕ್ಕೆ ಸಿಗುತ್ತಿಲ್ಲ,ಇಲ್ಲಾ ಕಾಣೆಯಾಗಿದ್ದಾರೆ.ಈ ರೀತಿಯ ಸುದ್ದಿಗಳು ದಿನ ದಿನೇ ಬರುತ್ತಾ ಇರುತ್ತವೆ. ಅದು ಪತ್ರಿಕೆ,ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತದೆ. ಕೊನೆಗೆ ಪೋಲೀಸ್ ಕಂಪ್ಲೆಂಟ್ ಕೂಡ ಆಗುತ್ತದೆ.ಇದರ ಬಗ್ಗೆ ಐದಾರು ತಿಂಗಳುಗಳ ಕಾಲ ಆ ವಿಚಾರವಾಗಿ ಯಾವುದೇ ಮಾಹಿತಿ ಯಾರಿಗೂ ಸಿಗುವುದಿಲ್ಲ, ಸುದ್ದಿನೂ ಇರುವುದಿಲ್ಲ. ತಿಂಗಳುಗಳ ಬಳಿಕ ಅವರು ನಮಗೆಲ್ಲ ಕಾಣಸಿಗುವುದು ತೃತೀಯ ಲಿಂಗದವರ ರೂಪದಲ್ಲಿ. ಈ ರೀತಿ ಕಾಣಯಾದವರನ್ನು ಪತ್ತೆ ಹಿಡಿಯುವ ಸಮಯದಲ್ಲಿ ಅವರು ಸಂಪೂರ್ಣ ಅವರ ವೇಷ,ಭೂಷಣ,ತಮ್ಮ ಹಳೇ ಮಾತುಗಾರಿಕೆ, ನಡವಳಿಕೆ ಎಲ್ಲವೂ ಬದಲಾಗಿರುತ್ತದೆ. ಎಲ್ಲಿಯವರೆಗೆ ಅಂದರೆ ಗುರುತು ಹಚ್ಚಿದರೂ ಪರಿಪೂರ್ಣವಾಗಿ ಅದು ಆತನೇ ಎಂದು ಸಂಶಯಪಡುವವರೆಗೂ ಬದಲಾವಣೆ ಹೊಂದಿರುತ್ತಾರೆ.
ವೈಜ್ಞಾನಿಕವಾಗಿ ಅಥವಾ ಮಾನಸಿಕವಾಗಿ ಆತನ ದೇಹದಲ್ಲಿ ಸಣ್ಣದರಲ್ಲಿಯೇ ಹೆಣ್ತನದ ಭಾವನೆಯಲ್ಲಿ ಇರುತ್ತಾರೆ, ಅವರಿಗೆ ಮಾನಸಿಕವಾಗಿ ಯಾವುದೋ ಒಂದು ಕೊರತೆ ಇರುತ್ತದೆ ಅದರಿಂದ ಆತ ಹಾಗೆ ಆಗುತ್ತಾನೆ ಎಂಬ ಬಾಯಿ ಮಾತು ಎಲ್ಲೆಡೆ ಸಾಮಾನ್ಯವಾಗಿ ಕೇಳಿ ಬರುವ ಸಂಗತಿ. ನಿಜವಾಗಿಯೂ ಈ ರೀತಿ ಇರುತ್ತದಾ ಎಂಬ ವಿಷಯಕ್ಕೆ ತದ್ವಿರುದ್ಧವಾಗಿದೆ.
ನಿಜ ಸಂಗತಿ ಏನೆಂದರೆ..
ಬಂಟ್ವಾಳ ತಾಲೂಕಿನ ಸಜೀಪ ಮೂಡ ಗ್ರಾಮದ ಒಬ್ಬ ಯುವಕ ಮೆಲ್ಕಾರಿ ಆಸುಪಾಸಿನ ಒಂದು ಸಂಸ್ಥೆಯಲ್ಲಿ HM ಆಗಿದ್ದವ ಮದುವೆ ಆಗಿ ಒಂದು ಮಗು ಆದ ಬಳಿಕ ಹೆಂಡತಿಗೆ ಡೈವರ್ಸ್ ನೀಡಿ ಹೋದವನು ತೃತೀಯ ಲಿಂಗವಾಗಿ ಬದಲಾಗಿದ್ದಾನೆ. ಹಾಗಾದರೆ ಸ್ವಾಭಾವಿಕವಾಗಿ ಆ ರೀತಿ ಚಿಕ್ಕಂದಿನಿಂದಲೇ ಮಾನಸಿಕವಾಗಿ ಬದಲಾವಣೆಗಳಿದ್ದರೆ ಆತ ಹೇಗೆ ಮದುವೆ ಆಗುತ್ತಿದ್ದ.? ಹೇಗೆ ಮಗು ಪಡೆಯುತ್ತಿದ್ದ.? ಇದೆಲ್ಲವೂ ಒಂದು ಜಾಲ ಅಷ್ಟೇ. ಈ ಜಾಲವನ್ನು ಬೆನ್ನಟ್ಟಲು ಈಗಾಗಲೇ ಒಂದು ತಂಡ ಮಂಗಳೂರು, ಬೆಂಗಳೂರು, ಮೈಸೂರಾದ್ಯಾಂತ ಕಾರ್ಯಚರಿಸುತ್ತಿದೆ. ಯಾಕೆ ಯುವಕರು ತೃತೀಯ ಲಿಂಗಕ್ಕೆ ಬದಲಾವಣೆ ಆಗುತ್ತಿದ್ದಾರೆ, ಹೇಗೆ ಹೋಗುತ್ತಿದ್ದಾರೆ, ಏನು ಇದರಲ್ಲಿ ಅವರಿಗೆ ಲಾಭ ಎಂಬೆಲ್ಲಾ ಮಾಹಿತಿಗಳನ್ನು ಈಗಾಗಲೆ ಕಲೆ ಹಾಕಿದ್ದು, ಈ ಜಾಲದಲ್ಲಿರುವ ಕಾಣದ ಕೈಗಗಳನ್ನು ಪತ್ತೆ ಹಚ್ಚುವ ಎಲ್ಲಾ ತಯಾರಿ ನಡೆಯುತ್ತಿದೆ. ಅಚ್ಚರಿಯ ವಿಷಯ ಏನೆಂದರೆ ಮಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ತೃತೀಯ ಲಿಂಗದ ಸರ್ಜರಿ ನಡೆಯುತ್ತದೆ ಎಂದು ಸಾರ್ವಜನಿಕ ವಲಯದಲ್ಲಿ ಮಾತುಗಳು ಕೇಳಿ ಬರುತ್ತಿದೆ.
ತೃತೀಯ ಲಿಂಗಕ್ಕೆ ಬದಲಾವಣೆ ಆಗುವಾಗ ಮಾತಾ ಪೂಜೆ ಎಂಬ ತಿಂಗಳ ಪೂಜೆ ಇದೆ. ಈ ಪೂಜೆ ಮುಗಿದ ಬಳಿಕ ಈ ತೃತೀಯ ಲಿಂಗ ಬದಲಾವಣೆಗಾಗಿ ಬ್ರೈನ್ ವಾಶ್ ಮಾಡಿ ಸ್ವತಹಃ ನಾನೇ ಲಿಂಗ ಬದಲಾವಣೆ ಮಾಡುವುದಾಗಿ ಒಪ್ಪಿಕೊಳ್ಳುವಂತೆ ಮಾಡಲಾಗಿ ಅವರಿಂದ ಸಹಿ ಪಡೆದುಕೊಂಡು, ಪುರಾವೆಯೊಂದಿಗೆ ಲಿಂಗ ಸರ್ಜರಿ ಮಾಡುತ್ತಿದ್ದಾರೆ ಎಂಬ ಮಾಹಿತಿಗಳು ಬೆಳಕಿಗೆ ಬಂದಿದೆ. ಪ್ರಸಕ್ತವಾಗಿ ಮುಸ್ಲಿಮ್ ಕಮ್ಯನಿಟಿಯ ಒಂದು ಪಂಗಡ ಹೆಚ್ಚಾಗಿ ಈ ಜಾಲದಲ್ಲಿ ಸಿಲುಕಿಕೊಂಡು ಬಲಿಯಾಗುತ್ತಿದ್ದಾರೆ. ಈ ಜಾಲದ ಕುರಿತು ಸಮುದಾಯದ ಆಲಿಂಗಳಿಗಾಗಲಿ,ಮುಖಂಡರಿಗಾಗಲೀ ಈ ಜಾಲದ ಬಗ್ಗೆ ಮಾಹಿತಿ ಇಲ್ಲ, ಇದ್ದರೂ ಸ್ಪಷ್ಟವಾಗಿ ಗೊತ್ತಿಲ್ಲ. ಕಾರಣ ಏನೆಂದರೆ ಈ ಲಿಂಗ ಪರಿವರ್ತನೆ ಮಾಡಿಸಿಕೊಳ್ಳುವುದು ಇತ್ತೀಚಿನ ಕೆಲವು ದಿನಗಳಲ್ಲಿ ನಮ್ಮ ಜಿಲ್ಲೆಯಲ್ಲಿ ಬೆಳಕಿಗೆ ಬಂದು ಚರ್ಚೆಗೆ ಒಳಗಾಗುತ್ತಿದೆ. ಈ ಜಾಲ ಇತ್ತೀಚಿನ ದಿನಗಳಲ್ಲಿ ಮಾತ್ರ ಅಲ್ಲ ನಮಗೆ ಅರಿವಿಲ್ಲದೆ ಬಹಳ ವರುಷಗಳಿಂದಲೇ ಈ ದಂಧೆ ನಡೆಯುತ್ತಿದೆ. ಈ ಲಿಂಗ ಪರಿವರ್ತನೆ ಮಾಡಿಸಿಕೊಳ್ಳುವ ಯುವಕರಿಗೆ ಧಾರ್ಮಿಕ ಪ್ರಜ್ಞೆ ತೀರಾ ಕಡಿಮೆ ಇರುವುದರಿಂದ ಈ ಜಾಲಕ್ಕೆ ಸುಲಭವಾಗಿ ಬಲಿಯಾಗುತ್ತಿದ್ದಾರೆ. ಮತ್ತು ತಮ್ಮಲ್ಲಿ ಇರುವ ಅಲ್ಪ ಧಾರ್ಮಿಕ ಪ್ರಜ್ಞೆ ಕೂಡ ಕಳೆದುಕೊಂಡು ಅವರದೇ ಆದ ಧರ್ಮಕ್ಕೆ ಬದಲಾವಣೆಗೊಳ್ಳುತ್ತಿದ್ದಾರೆ. ಕೊನೆಗೆ ಇಲ್ಲಿ ಆತ ಆತನ ಧರ್ಮವನ್ನೇ ಕಳೆದುಕೊಂಡು ಬಿಡುತ್ತಾನೆ.
ಈ ಕರಾಳ ಜಾಲವನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿರುವ ತಂಡದೊಂದಿಗೆ ಸಮಾಲೋಚನೆ ನಡೆಸಿದಾಗ ಅವರ ಮಾಹಿತಿಗಳನ್ನೆಲ್ಲಾ ಕೇಳಿದಾಗ ದಿಗ್ಭ್ರಮೆಗೊಳ್ಳಬೇಕು.ಅಂತಹ ಭಯಾನಕ ವಿಷಯಗಳು ಇವರ ನಡುವೆ ನಡೆಯುತ್ತವೆ ಎಂಬ ಮಾಹಿತಿ ಕೇಳಿಸಿಕೊಂಡಾಗ. ಈ ವಿಷಯಗಳೆಲ್ಲವೂ ಸಮಾಜಕ್ಕೆ ಅರಿವೇ ಇಲ್ಲವಲ್ಲ ಎಂಬ ಕಳವಳಗಳು ಮನಸ್ಸನ್ನು ಆಘಾತಗೊಳಿಸುತ್ತದೆ.ಈ ಜಾಲದ ಕುತಂತ್ರಕ್ಕೆ ಬಲಿಯಾದ ಯುವಕರ ಬಳಿ ಸ್ವಯಂ ಅವರ ಕೈಯಿಂದಲೇ ಲಿಖಿತ ಸಹಿ ಪಡೆದುಕೊಂಡು ಸರ್ಜರಿ ಮಾಡಿಸಿ ಇಷ್ಟು ದಿನಗಳವರೆಗೆ ಗಂಡಸರನ್ನು ನೋಡಬಾರದು ಎಂದು ಗೌಪ್ಯ ಸ್ಥಳಗಳಲ್ಲಿ ಕೂಡಿಹಾಕಿ ಇಂತಹ ದಂಧೆಗೆ ಇಳಿಸುತ್ತಿತರುವುದು ವಿಶೇಷವಾಗಿ ಮಂಗಳೂರು ಜಿಲ್ಲೆಯಾದ್ಯಾಂತ ವಿಶೇಷವಾಗಿ ಮುಸ್ಲಿಮ್ ಕಮ್ಯುನಿಟಿಯ ಹುಡುಗರು ಕಾಣೆಯಾಗುತ್ತಿರೋದು ಇದೇ ಕಾರಣ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಈ ಜಾಲವನ್ನು ಭೇದಿಸಲು ಹೊರಟ ತಂಡಕ್ಕೆ ನಾವು ಅಭಿನಂದನೆ ಸಲ್ಲಿಸಬೇಕು.ಕಾರಣ ಆ ತಂಡ ಇಡೀ ಕರಾಳವಾದ ಜಾಲವನ್ನು ಪತ್ತೆಹಚ್ಚುವ ಕಾರ್ಯ ನಡೆಸುತ್ತಿದೆ.ಇದು ಎಲ್ಲಿಂದ ಎಲ್ಲಿ ಶುರು ಆಗುತ್ತಿದೆ, ಎಲ್ಲಿ ಯುವಕರ ತಲೆಗೆ ತುಂಬಿ ತಮ್ಮನ್ನು ತಾವೇ ಬದಲಾವಣೆಗೊಳಿಸುತ್ತಾರೆ ಹೀಗೇ ಹಲವು. ಈ ಜಾಲವನ್ನು ನಿಲ್ಲಿಸದೇ ಹೋದರೆ ನಾಳೆ ನಮ್ಮ ಮಕ್ಕಳು, ನಮ್ಮ ಕುಟುಂಬದ, ಊರಿನ ಮಕ್ಕಳು ಬಲಿಯಾಗುವುದರಲ್ಲಿ ಯಾವುದೇ ಸಂಶಯವೇ ಇಲ್ಲ. ಈ ಜಾಲವನ್ನು ನಿರ್ಣಾಮ ಮಾಡಬೇಕಾದ ಹೊಣೆ ನಾಗರಿಕ ಸಮಾಜದ್ದು ಮತ್ತು ಪೊಲೀಸ್ ಇಲಾಖೆಯದ್ದು.