ಹೆಣ್ಣಾಗಲು ಹೋಗಿ ಹೆಣವಾಗಿ ಬಂದಿದ್ದ ಜೆಪ್ಪಿನಮೊಗರುವಿನ ಯುವಕ..!

ಕರಾವಳಿ

🔥 ಸ್ಪೋಟಕ ತನಿಖಾ ವರದಿ

► ಬಂಟ್ವಾಳ, ಜೆಪ್ಪುವಿನ ಯುವಕರಿಬ್ಬರು ‘ನಾನು ಅವನಲ್ಲ, ಅವಳು..!

*► ಮಂಗಳೂರಿನಲ್ಲಿ ಸಕ್ರೀಯವಾಗಿದೆ ಹದಿಹರೆಯದ ಯುವಕರನ್ನು ಪುಸಲಾಯಿಸಿ ಹೆಣ್ಢಾಗಿಸುವ ಖತರ್ನಾಕ್ ಗ್ಯಾಂಗ್ *

*► ಸಮಾಜ ಜಾಗೃತಗೊಳ್ಳಬೇಕಿದೆ. ಕರಾಳ ಜಾಲದ ಸಂಪೂರ್ಣ ವರದಿ. *

ಇದೊಂದು ಕಥೆಯಲ್ಲ. ವಿಕ್ಷಿಪ್ತ, ವಿಕೃತ ಮನಸ್ಸಿನವರ ವ್ಯಥೆ. ಮಾಯಾನಗರಿ ಮುಂಬೈ, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಂತಹ ಘಟನೆಯಲ್ಲ. ನಮ್ಮದೇ ಮಂಗಳೂರಿನಲ್ಲಿ ನಡೆದಂತಹ ಘಟನೆ. ಇಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೊಳಗಾಗುತ್ತಿರುವ ಲಿಂಗ ಪರಿವರ್ತನೆ ಬಗ್ಗೆ 2008 ರಲ್ಲಿ ಸ್ಪೆಷಲ್ ನ್ಯೂಸ್ ಪತ್ರಿಕೆ ಸ್ಪೋಟಕ ವರದಿಯನ್ನು ಬಿಚ್ಚಿಟ್ಟಿತು. ಆದರೆ ಇದೀಗ ಬಂಟ್ವಾಳ, ಜೆಪ್ಪುವಿನ ಯುವಕರಿಬ್ಬರು ಲಿಂಗ ಬದಲಾವಣೆ ಮಾಡಿ ದೊಡ್ಡ ಸುದ್ದಿಯಾಗಿದ್ದಾರೆ. ಇದರ ಹಿಂದಿನ ಸ್ಪೋಟಕ ತನಿಖಾ ವರದಿಯನ್ನು ಸ್ಪೆಷಲ್ ನ್ಯೂಸ್ ಮೀಡಿಯಾ ನಿಮ್ಮ ಮುಂದಿಡುತ್ತಿದೆ.

ಅದು 2008 ಇಸವಿ. ವಿಚಿತ್ರ ಆದರೂ ಸತ್ಯ ಎನಿಸುವ ನೈಜ ಘಟನೆ. ಮಂಗಳೂರಿನ ಜೆಪ್ಪಿನಮೊಗರುವಿನ ಯುವಕ ಹೆಣ್ಣಾಗಲು ಹೋಗಿ ಹೆಣವಾಗಿ ಬಂದ ಘಟನೆಯ ಕಥಾ ನಾಯಕ. ಈತನ ಬಾಹ್ಯ ರಚನೆಗಳು ಗಂಡಸಿನಂತೆ ಇದ್ದರೂ ಒಳಗುಟ್ಟು ಹೆಣ್ಣಿನಂತೆಯೇ ಇದ್ದವು. ಹಾರ್ಮೋನ್ ಸಮಸ್ಯೆಯಿಂದ ಹುಟ್ಟುವಾಗಲೇ ಹೆಣ್ಣಿನ ಸ್ವಭಾವ ಆತನಲ್ಲಿತ್ತು. ತಂದೆ-ತಾಯಿ ಇಲ್ಲದೆ ಅನಾಥವಾಗಿದ್ದ ಈತ ಲಿಂಕಿಂಗ್ ಟವರ್ಸ್ ನಲ್ಲಿ ಕೆಲಸಕ್ಕಿದ್ದ. ಯುವಕನಾಗುತ್ತಲೇ ಆತನಲ್ಲಿ ಹೆಣ್ಣಿನ ಲಕ್ಷಣಗಳು ಕಾಣಿಸತೊಡಗಿದವು. ಸಮಾಜದಿಂದ ವಿಮುಖನಾಗಿ ಬಿಟ್ಟ. ಇದರಿಂದಾಗಿ ಆತ ಪೂರ್ಣ ಪ್ರಮಾಣದ ಹೆಣ್ಣಾಗಲು ತೀರ್ಮಾನಿಸಿಬಿಟ್ಟ. ಹೆಣ್ಣಿನ ರೂಪ ತಾಳಲು ಶಿಶ್ನವನ್ನು ಸರ್ಜರಿ ಮಾಡಬೇಕಾಗಿದೆ.ಅವರ ಭಾಷೆಯಲ್ಲಿ ಇದಕ್ಕೆ ‘ನಿರ್ವಹಣ’ ಎಂದು ಹೆಸರು. ತಮಿಳುನಾಡಿನ ಚೆನ್ನೈ ಆಸ್ಪತ್ರೆಯಲ್ಲಿ ಲಿಂಗ ಬದಲಾವಣೆ ಸರ್ಜರಿ ಮಾಡಿಕೊಳ್ಳುತ್ತಾನೆ. ದುರದೃಷ್ಟವಶಾತ್ ಸರ್ಜರಿಯಲ್ಲಿ ಈತನ ಪ್ರಾಣಪಕ್ಷಿ ಹಾರಿ ಹೋಗುತ್ತದೆ. ಮೊಬೈಲು ನಂಬರ್ ಆಧಾರದ ಮೇಲೆ ಈತನ ಸ್ನೇಹಿತರನ್ನು ಆಸ್ಪತ್ರೆ ವರ್ಗ ಸಂಪರ್ಕಿಸಿದರೂ ಅನಾಥನಾಗಿದ್ದ ಈತನ ಮೃತದೇಹವನ್ನು ತರಲು ಹಿಂಜರಿಯುತ್ತಾರೆ. ವಾರೀಸುದಾರರಿಲ್ಲದ ಶವವನ್ನು ಅಲ್ಲಿಯೇ ಅಂತ್ಯ ಸಂಸ್ಕಾರ ಮಾಡುತ್ತಾರೆ.

ಮಂಗಳೂರು ವೇಗವಾಗಿ ಬೆಳೆಯುತ್ತಿದೆ. ಮಾಹಿತಿ ತಂತ್ರಜ್ಞಾನ, ಅಭಿವೃದ್ಧಿಯ ದೃಷ್ಟಿಯಿಂದ ಮಂಗಳೂರಿಗೆ ಮಂಗಳೂರೇ ಸಾಟಿ ಅನ್ನುವಂತಿದೆ. ಇಂತಹ ಮಾಯಾನಗರಿಯ ಕಡೆಗೆ ಸೂಕ್ಷ್ಮ ದೃಷ್ಟಿ ಹರಿಸಿದಾಗ ಬೆಚ್ಚಿ ಬೀಳುವಂತಹ ಅನೇಕ ಘಟನೆಗಳು ನಡೆಯುತ್ತಿರುತ್ತದೆ. ಅವುಗಳಲ್ಲಿ ಲಿಂಗ ಪರಿವರ್ತನೆ ಯ ದಂಧೆ ಕೂಡ ಒಂದು. ಯುವಕರಾಗಿದ್ದರೂ ಹೆಣ್ಣಿನ ಭಾವನೆಯುಳ್ಳವರನ್ನು ಪುಸಲಾಯಿಸಿ ಆಮಿಷವೊಡ್ಡಿ ಹೆಣ್ಣಾಗಿ ಪರಿವರ್ತಿಸುವ ಖತರ್ನಾಕ್ ಗ್ಯಾಂಗ್ ಗಳು ಮಂಗಳೂರು, ಬೆಂಗಳೂರುಗಳಲ್ಲಿ ಸಕ್ರೀಯವಾಗಿದೆ. ಇವರೆಲ್ಲ ಬೆಳಗ್ಗಿನ ಹೊತ್ತು ಯುವಕರಂತೆ ಕಂಡುಬಂದರೂ, ರಾತ್ರಿಯಾಗುತ್ತಿದ್ದಂತೆ ಹೆಣ್ಣಿನ ವೇಷ ಧರಿಸಿ ಪೇಟೆ ಸುತ್ತುತ್ತಾರೆ. ಇಂತವರ ಆಮಿಷಕ್ಕೆ ಒಳಗಾಗಿ ಬಂಟ್ವಾಳ ಪರಿಸರದ ಯುವಕ,ಜೆಪ್ಪುವಿನ ಯುವಕನೊಬ್ಬ ಹೆಣ್ಣಾಗಲು ಹೋದ ಭಯಾನಕ ಸುದ್ದಿ ಹೊರಬಿದ್ದಿದೆ.

ಮಂಗಳೂರಿನಲ್ಲಿ ಇಂತಹ ಜಾಲ ಸಕ್ರೀಯವಾಗಿದ್ದರೂ ಲಿಂಗ ಬದಲಾವಣೆ ಸರ್ಜರಿ ಮಾಡುವುದು ಬೆಂಗಳೂರು ಹಾಗೂ ತಮಿಳುನಾಡಿನ ಕೆಲವೊಂದು ಆಸ್ಪತ್ರೆಗಳು. ಯುವಕ ಬಾಹ್ಯ ರೂಪದಲ್ಲಿ ಗಂಡಾಗಿದ್ದರೂ ಹೆಣ್ಣಿನ ರೀತಿಯಲ್ಲಿ ವರ್ತಿಸುವ ಹದಿಹರೆಯದ ಯುವಕರನ್ನು ಬ್ರೈನ್ ವಾಶ್ ಮಾಡಿ ಹೆಣ್ಣಾಗಿ ಪರಿವರ್ತಿಸುವ ಕರಾಳ ಜಾಲ ಮಂಗಳೂರಿನಲ್ಲಿ ದೊಡ್ಡದಿದೆ. ಇವರ ಜಾಲಕ್ಕೆ ಸಿಲುಕಿದ ಮೇಲೆ ಸಂಪೂರ್ಣವಾಗಿ ಮನೆಯವರನ್ನು ಮರೆಯುತ್ತಾರೆ. ಆ ರೀತಿ ಅವರ ಬ್ರೈನ್ ವಾಶ್ ಮಾಡಲಾಗುತ್ತಿದೆ. ವಿಚಿತ್ರ ಅಂದರೆ ಹೆಣ್ಣಾಗಿ ಪರಿವರ್ತನೆಗೊಂಡವರಿಗೆ ಮದುವೆಯೂ ಕೂಡಾ ಮಂಗಳೂರಿನ ಹಲವು ಭಾಗಗಳಲ್ಲಿ ನಡೆಯುತ್ತಿದೆ. ಇದಕ್ಕೆ ಅವರದೇ ತಂಡ ಸಾಥ್ ನೀಡುತ್ತಿದ್ದು, ಅವರ ಸಂಘಟನೆ ಇವರಿಗೆ ಸಂಪೂರ್ಣ ಬೆಂಬಲ ನೀಡುತ್ತದೆ ಅನ್ನುವ ಮಾಹಿತಿಯೂ ಇದೆ. ಇದೀಗ ಹೊರಬಿದ್ದ ಲಿಂಗ ಬದಲಾವಣೆ ಮಾಡಿದ ಯುವಕರನ್ನು ಪುಸಲಾಯಿಸಿ ಕರೆದುಕೊಂಡ ಯುವಕ ದೇರಳಕಟ್ಟೆ ಆಸುಪಾಸಿನಲ್ಲಿ ವಾಸವಿರುವುದು ದೃಢಪಟ್ಟಿದೆ. ಬೇರೆ ಊರಿನಿಂದ ಬಂದು ದೇರಳಕಟ್ಟೆ ಪ್ರದೇಶಕ್ಕೆ ಕಪ್ಪು ಚುಕ್ಕೆ ಇಡುತ್ತಿದ್ದಾನೆ ಎಂದು ಊರಿನವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ವಿಚಿತ್ರ ಅಂದರೆ ಹೆಣ್ಣಿನ ರೂಪ ತಾಳುವವರು ಮೊದಲು ಮಂಗಳೂರು, ಬೆಂಗಳೂರಿನ ಅವರದೇ ಒಂದು ಸಂಘಟನೆಯಲ್ಲಿ ಸದಸ್ಯರಾಗಬೇಕು. ಆಮೇಲೆ ಅವನ ಇಚ್ಛೆಯಂತೆ ಶಿಶ್ನ ಸರ್ಜರಿ ನಡೆಯುತ್ತದೆ. ಎಲ್ಲವೂ ಅವರವರ ಒಪ್ಪಿಗೆಯಂತೆ.ನಂತರ 45 ದಿವಸ ಅವರ ಮನೆಯಲ್ಲಿ ಹಾರೈಕೆ ಎಲ್ಲಾ ನಡೆದ ನಂತರ ಹೆಣ್ಣಾಗಿ ಬದಲಾಗುತ್ತಾರೆ. ಆದರೆ ಲೈಂಗಿಕ ಕ್ರಿಯೆ ನಡೆಸಲು ಆಗುವುದಿಲ್ಲ. ತನ್ನ ಎದೆ ಉಬ್ಬಿಸಲು ಲಕ್ಷ ಆಸುಪಾಸಿನಲ್ಲಿ ಖರ್ಚು ಮಾಡಿ ಸರ್ಜರಿ ಮಾಡುತ್ತಾರೆ. ಗಡ್ಡ ಮೀಸೆ ಬಂದದ್ದನ್ನು ಶಾಕ್ ಟ್ರೀಟ್ ಮೆಂಟ್ ಮಾಡಿ ಗಡ್ಡ ಮೀಸೆ ಬರದಂತೆ ಮಾಡುತ್ತಾರೆ.

ಯುವಕರ ಜೊತೆ ಮದುವೆಯಾದ ಮಧ್ಯ ವಯಸ್ಕರೂ ಹೆಂಡತಿಗೆ ಡೈವೋರ್ಸ್ ನೀಡಿ ಇಂತಹ ಜಾಲಕ್ಕೆ ಸಿಲುಕಿರುವ ಉಧಾಹರಣೆಗಳೂ ಇದೆ. ಇಂತವರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಲು ಕೆಲವೊಂದು ತೊಡಕು ಇರುವುದರಿಂದ ಇದನ್ನು ಎನ್ ಕ್ಯಾಶ್ ಮಾಡಿಕೊಳ್ಳುವ ಇವರು ಇಂತಹ ಕಾರ್ಯಕ್ಕೆ ಮುಂದಾಗುತ್ತಾರೆ. ಸಮಾಜ ಈ ಬಗ್ಗೆ ಜಾಗೃತಗೊಳ್ಳುವುದು ಅಗತ್ಯ.

ಬಂಟ್ವಾಳ ಪರಿಸರದ ಯುವಕ ಹೆಣ್ಣಾಗಿ ಬದಲಾಗಲು ಹೋಗಿ ಸರ್ಜರಿ ಮಾಡಿಸಿಕೊಂಡ ನಂತರ ಆಡಿಯೋ ಒಂದು ವೈರಲ್ ಆಗಿದೆ. ಏನೂ ಅರಿಯದ ಹೆತ್ತಮ್ಮ ಮಗನಿಗೆ ಕಾದು ಕಾದು ಊಟ ಬಿಟ್ಟು ಪರಿತಪಿಸುವ ವೇದನೆ ಎಂತಹವರ ಎದೆಯನ್ನು ಝಲ್ಲೆನ್ನುತ್ತದೆ. ತನ್ನ ಮಕ್ಕಳಿಗಾಗಿ ಊಟ, ನಿದ್ರೆ ಬಿಟ್ಟು ಬೆಳೆಸಿದ ಕುಟುಂಬವರ್ಗ ಚಿಂತಾಕ್ರಾಂತವಾಗಿದೆ.ಹದಿಹರೆಯಕ್ಕೆ ಕಾಲಿಟ್ಟಾಗ ಖತರ್ನಾಕ್ ಗ್ಯಾಂಗ್ ನ ಸದಸ್ಯರ ಕೈಗೆ ಸಿಲುಕಿ ಸರ್ವಸ್ವವನ್ನೂ ಕಳೆದುಕೊಳ್ಳುತ್ತಿದ್ದಾರೆ ಕೆಲವು ಯುವಕರು.ಇಂತಹ ಗ್ಯಾಂಗ್ ಮಂಗಳೂರಿನಲ್ಲಿ ಸಕ್ರೀಯವಾಗಿ ಹಲವಾರು ತಾಯಂದಿರ ಕಣ್ಣೀರು ಭರಿಸಿದೆ. ಸಮಾಜಕ್ಕೆ ದೊಡ್ಡ ಮಾರಕವಾಗಿರುವ ಇಂತವರ ಬಗ್ಗೆ ಸಾಮಾಜಿಕ ನಾಯಕರು, ಧಾರ್ಮಿಕ ಮುಖಂಡರು ಧ್ವನಿ ಎತ್ತಬೇಕಾಗಿದೆ. ಸ್ಪೆಷಲ್ ನ್ಯೂಸ್ ಪತ್ರಿಕೆ 2008 ರಲ್ಲಿಯೇ ಇಂತಹ ದಂಧೆಯ ಬಗ್ಗೆ ಪಿನ್ ಟು ಪಿನ್ ಡೀಟೈಲ್ಸ್ ನೀಡಿತ್ತು. ಪೊಲೀಸ್ ಇಲಾಖೆ ಈ ಬಗ್ಗೆ ಗಂಭೀರವಾಗಿ ಕ್ರಮ ಕೈಗೊಳ್ಳಬೇಕಾಗಿದೆ.