ಬಜಪೆ ಪೊಲೀಸರ ಕಾರ್ಯಾಚರಣೆ,ಯುವತಿಗೆ ಕಿರುಕುಳ ನೀಡುತ್ತಿದ್ದ ಅರೋಪಿ ಶರೀಫ್ ಬಂಧನ

ಕರಾವಳಿ

ಗಂಜಿಮಠ: ನಾಲ್ಕು ಮಕ್ಕಳ ತಂದೆ ಹಿಂದೂ ಯುವತಿಯ ಹಿಂದೆ ಬಿದ್ದು ಕಿರುಕುಳ ನೀಡುತ್ತಿದ್ದ ಎಂದು ಮಳಲಿಯ ಶರೀಫ್ ಎಂಬಾತನು ಬಜರಂಗದಳ ಕಾರ್ಯಕರ್ತರ ಮಾಹಿತಿ ಮೇರೆಗೆ ಬಜಪೆ ಪೊಲೀಸರು ಬಂದಿಸಿದ್ದಾರೆ.

ಕಳೆದ ಒಂದು ವಾರದಿಂದ ಯುವತಿಯ ಬೆನ್ನು ಬಿದಿದ್ದು, ಇಂಡಸ್ಟ್ರಿಯಲ್ ಪ್ರದೇಶದಲ್ಲಿ ಯುವತಿ ಕೆಲಸಕ್ಕೆ ಹೋಗುತ್ತಿದ್ದ ಫ್ಯಾಕ್ಟರಿಯ ಹತ್ತಿರ ರಸ್ತೆ ಬದಿ ನಿಂತು ಯುವತಿಯನ್ನು ಬೈಕ್‌ನಲ್ಲಿ ಬರುತ್ತೀಯ ಎಂದು ಪೀಡಿಸುತ್ತಿದ್ದ, ಶರೀಫ್ ನ ವರ್ತನೆಗೆ ಯುವತಿ ಡೋಂಟ್ ಕ್ಯಾರ್ ಎಂದಾಗ ತನ್ನ ಮೊಬೈಲ್ ನಂಬರ್ ಬರೆದ ಚೀಟಿಯನ್ನು ಯುವತಿಯತ್ತ ಎಸೆದಿದ್ದ. ಯುವತಿ ಈ ಚೀಟಿಯನ್ನು ಬಜರಂಗದಳದ ಕಾರ್ಯಕರ್ತರಿಗೆ ಮುಟ್ಟಿಸಿದ್ದಳು, ಗುರುಪುರ ಭಜರಂಗದಳದ ಕಾರ್ಯಕರ್ತರು ಮಂಗಳವಾರ ಬೆಳಿಗ್ಗೆ ಯುವತಿ ಕೆಲಸಕ್ಕೆ ಹೋಗುವ ವೇಳೆ ಕಾಮಕ ಶರೀಫ್ ಬರುತ್ತಿರುವುದರ ಬಗ್ಗೆ ಬಜಪೆ ಪೊಲೀಸರಿಗೆ ಮಾಹಿತಿ ನೀಡಿದ್ದರು.ಆರೋಪಿ ಶರೀಫ್ ಯುವತಿಯನ್ನು ಮಾತನಾಡಿಸಲು ಪ್ರಯತ್ನಿಸುತ್ತಿದ್ದಂತೆ ತಕ್ಷಣ ಬಜಪೆ ಪೊಲೀಸರು ವಶಕ್ಕೆ ಪಡೆದುಕೊಂಡರು.

ಹಿಂದೂ ಯುವತಿಗೆ ಕಿರುಕುಳ ನೀಡಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಹಿಂದು ಸಂಘಟನೆ, ಮುಂದಕ್ಕೆ ಇದು ಹೀಗೇ ಮುಂದುವರಿದಲ್ಲಿ ಸೂಕ್ತ ಉತ್ತರ ನೀಡಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.