ದ್ವಿತೀಯ ಪಿಯುಸಿ ಫಲಿತಾಂಶವನ್ನು ಉತ್ತಮ ಗೊಳಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಪ್ರಥಮ ಹಾಗೂ ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆಗಳ ಮಾದರಿಯಲ್ಲಿ ಮಹತ್ವದ ಬದಲಾವಣೆ ಮಾಡಿದೆ.
ಎಲ್ಲಾ ವಿಷಯಗಳಲ್ಲೂ 1 ಅಂಕದ ಪ್ರಶ್ನೆ ಗಳನ್ನು 20ಕ್ಕೆ ಹೆಚ್ಚಿಸಿ ಬಹು ಆಯ್ಕೆ ಮಾದರಿ ಪ್ರಶ್ನೆಗಳಿಗೆ ಹೆಚ್ಚು ಆದ್ಯತೆ ನೀಡಲಾಗಿದೆ.ಈ ಮೂಲಕ ಮಕ್ಕಳು ಸುಲಭವಾಗಿ ಉತ್ತರಿಸುವಂತೆ 2, 3, 4, 5 ಮತ್ತು 6 ಅಂಕಗಳ ಇಳಿಸಲಾಗಿದೆ.
ಪ್ರಶ್ನೆಗಳ ಸಂಖ್ಯೆಯನ್ನು ವಿಷಯವಾರು ಹೆಚ್ಚು ಕಡಿಮೆ ಮಾಡಲಾಗಿದೆ. ಬಿಟ್ಟ ಸ್ಥಳ ಭರ್ತಿ ಮಾಡುವುದು, ಹೊಂದಿಸಿ ಬರೆಯುವುದು ಹೀಗೆ ಮಕ್ಕಳಿಗೆ ಉತ್ತಮವಾಗಿ ಉತ್ತರಿಸಲು ಸಾಧ್ಯವಾಗುವ ಪ್ರಶ್ನೆಗಳ ಮಾದರಿಯನ್ನು ಹೆಚ್ಚಳ ಮಾಡಲಾಗಿದೆ. ಈ ಮೂಲಕ ಮಕ್ಕಳು ಪ್ರಶ್ನೆಗೆ ಸುಲಭವಾಗಿ ಉತ್ತರಿಸಿ ಹೆಚ್ಚು ಅಂಕ ಪಡೆಯಲು ಸಾಧ್ಯವಾಗುತ್ತದೆ ಎಂಬುದು ಶಿಕ್ಷಣ ಇಲಾಖೆಯ ಅಭಿಪ್ರಾಯ. ಸುಲಭವೂ ಅಲ್ಲದ ಕಷ್ಟವೂ ಅಲ್ಲದ ಪ್ರಶ್ನೆಗಳ ಪ್ರಮಾಣವನ್ನು ಶೇ.40ಕ್ಕೆ ಮತ್ತು ಕಷ್ಟದ ಪ್ರಶ್ನೆಗಳ ಪ್ರಮಾಣವನ್ನು ಶೇ.20ಕ್ಕೆ ಇಳಿಸಲಾಗಿದೆ, ಶೇ.35ರಷ್ಟು ಜ್ಞಾನಾಧಾರಿತ ಪ್ರಶ್ನೆ, ಶೇ.30ರಷ್ಟು ತಿಳುವಳಿಕೆ ಸಾಮರ್ಥ್ಯದ ಪ್ರಶ್ನೆ ಶೇ.25ರಷ್ಟು ಅನ್ವಯಿಸು ವಿಕೆ ಶೇ.10ರಷ್ಟು ಕೌಶಲ್ಯಾಧಾ ರಿತ ಪ್ರಶ್ನೆಗಳನ್ನು ಒಳಗೊಂಡಿರುವಂತೆ ಪ್ರಶ್ನೆ ಪತ್ರಿಕೆ ಮಾದರಿ ಸಿದ್ಧಪಡಿಸಲಾಗಿದೆ. ಈ ಮೂಲಕ ಪಿಯುಸಿ ಫಲಿತಾಂಶವನ್ನು ಹೆಚ್ಚಿಸುವಲ್ಲಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.
ಇನ್ನು ಒಟ್ಟಾರೆ ಪ್ರಶ್ನೆಗಳಲ್ಲಿ ಶೇ.35ರಷ್ಟುಜ್ಞಾನಾಧಾರಿತ (ನಾಲೆಡ್ಜ್), ಶೇ.30ರಷ್ಟುತಿಳುವಳಿಕೆ ಸಾಮರ್ಥ್ಯದ, ಶೇ.25ರಷ್ಟುಅನ್ವಯಿಸುವಿಕೆ (ಅಪ್ಲಿಕೇಷನ್) ಮತ್ತು ಶೇ.10ರಷ್ಟುಕೌಶಲ್ಯಾಧಾರಿತ ಪ್ರಶ್ನೆಗಳನ್ನು ಒಳಗೊಂಡಿರುವಂತೆ ಪ್ರಶ್ನೆ ಪತ್ರಿಕೆ ಮಾದರಿಯನ್ನು ಸಿದ್ಧಪಡಿಸಲಾಗಿದೆ.
ವೆಬ್ಸೈಟ್ ವಿಳಾಸದಲ್ಲಿ ಬದಲಾವಣೆ-
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯನ್ನು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಎಂಬುದಾಗಿ ಬದಲಾವಣೆ ಮಾಡಲಾಗಿದೆ. ಈ ಬೆನ್ನಲ್ಲೇ ಎಸ್ ಎಸ್ ಎಲ್ ಸಿ ಮಂಡಳಿಯ ವೆಬ್ ಸೈಟ್ ವಿಳಾಸವನ್ನು ಬದಲಾವಣೆ ಮಾಡಲಾಗಿದೆ.