ಮೋಹನ್ ಭಾಗವತ್ ಕಾಳಜಿ ವೈದಿಕರ ಬಗ್ಗೆಯೂ ಇರಲಿ,ಮುಸ್ಲಿಮರ ಬಗ್ಗೆ ಅಗತ್ಯವಿಲ್ಲ: ಕೆ.ಅಶ್ರಫ್,ಮುಸ್ಲಿಮ್ ಒಕ್ಕೂಟ.

ಕರಾವಳಿ

ಮೋಹನ್ ಭಾಗವತ್ ಇತ್ತೀಚೆಗೆ ಪತ್ರಿಕಾ ಹೇಳಿಕೆ ನೀಡಿ, ಈ ದೇಶದ ಮುಸ್ಲಿಮರು ವಾಕ್ಚಾತುರ್ಯ ಮಾಡ ಕೂಡದು, ಅವರಿಗೆ ಭಾರತದಲ್ಲಿ ಭಯ ಬೇಡ,ಇಲ್ಲಿನ ನಿರ್ಧಿಷ್ಟ ಸಮುದಾಯವೊಂದು ಸಾವಿರಾರು ವರ್ಷದಿಂದ ಕಲಹದಿಂದ ಬದುಕುತ್ತಿದ್ದಾರೆ. ಎಂಬಿತ್ಯಾದಿಯಾಗಿ ಅಸಂಬದ್ಧ ಹೇಳಿಕೆ ನೀಡಿ ಇಲ್ಲಿನ ಮುಸ್ಲಿಮೇತರನ್ನು ಖುಷಿ ಪಡಿಸಲು,ಮುಸ್ಲಿಮರ ಬಗ್ಗೆ ಕಾಳಜಿ ವಹಿಸುವುದರಲ್ಲಿ ಅರ್ಥವಿಲ್ಲ. ಭಾಗವತರ ಹೇಳಿಕೆ ಒಂದರ್ಥದಲ್ಲಿ ಖಂಡನೀಯ, ಮುಸ್ಲಿಮರ ಪ್ರತಿಕ್ರಿಯೆ ಅಪೇಕ್ಷಿಸಿ ಯೇ ಹೇಳಿಕೆ ನೀಡುವ ಭಾಗವತರ ಸಮುದಾಯ ಈ ದೇಶಕ್ಕಾಗಿ ಮಾಡಿದ್ದುದ್ದಾದರೂ ಏನು ಎಂದಾದರೂ ಬಹಿರಂಗ ಪಡಿಸಬೇಕಿತ್ತು. ಮುಸ್ಲಿಮರು ಈ ದೇಶಕ್ಕಾಗಿ ಮಾಡಿದ ತ್ಯಾಗ,ಸೇವೆ,ಮತ್ತು ಕೊಡುಗೆಗಳ ಪಟ್ಟಿಯು ಈ ಮಣ್ಣಿನಲ್ಲಿ ಅಚ್ಚಳಿಯದೆ ಉಳಿದಿದೆ.ಅದನ್ನು ವಿವರಿಸುವ ಅಗತ್ಯ ಈ ಸಂಧರ್ಭದಲ್ಲಿ ಬರಲಾರದು.ಆದರೆ ಭಾಗವತರು ಈ ದೇಶದ ಮುಸ್ಲಿಮರ ಬಗ್ಗೆ ಕಾಳಜಿ ವಹಿಸುವ ಬದಲು ವೈದಿಕರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಿದೆ ಮತ್ತು ತಮ್ಮ ಕಾಳಜಿಯಲ್ಲಿ ಮುಸ್ಲಿಮರನ್ನು ಸೇರ್ಪಡೆ ಗೊಳಿಸುವ ಅಗತ್ಯವಿಲ್ಲ.


ಈ ದೇಶದ ಮುಸ್ಲಿಮರು ಯಾರದೊ ಹಂಗಿನಲ್ಲಿ ಈ ದೇಶದಲ್ಲಿ ಬದುಕುತ್ತಿಲ್ಲ, ಬದಲಾಗಿ ಮುಸ್ಲಿಮರು ಈ ದೇಶದಲ್ಲಿ ಅವರದ್ದೇ ಆದ ಸಂಸ್ಕೃತಿ, ಸುಶಿಕ್ಷಣ ಮತ್ತು ಸಂಪ್ರದಾಯದಂತೆ ಬದುಕಿ ಈ ಮಣ್ಣಿನೊಂದಿಗೆ ಲೀನವಾಗುವ ಸರ್ವ ಹಕ್ಕನ್ನು ಹೊಂದಿದ್ದಾರೆ ಅದಕ್ಕೆ ಯಾರದೋ ಶಿಫಾರಸಿನ ಅಗತ್ಯವೂ ಇಲ್ಲ. ಇವೆಲ್ಲದರ ಕೊರತೆ ಬಹುಷ್ಯ ಒಂದು ನಿರ್ಧಿಷ್ಟ ಸಮುದಾಯಕ್ಕೆ ಇರಲೂ ಬಹುದು, ಆ ಬಗ್ಗೆ ಭಾಗವತರು ಕಾಳಜಿ ವಹಿಸುವುದು ಈ ಸಂದರ್ಭದ ಅನಿವಾರ್ಯತೆ ಕೂಡಾ ಹೌದು ಎಂಬುದನ್ನು ಅರಿಯಲಿ.