ಶಾಲಾ ಬಸ್-ಬೈಕ್ ಅಪಘಾತ: ಇಬ್ಬರು ವಿದ್ಯಾರ್ಥಿಗಳು ದುರ್ಮರಣ

ಕರಾವಳಿ

ಮಂಜೇಶ್ವರದ ಮೀಯಪದವು ಸಮೀಪದ ಬಾಳಿಯೂರು ಎಂಬಲ್ಲಿ ಶಾಲಾ ಬಸ್ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.

ಮೃತಪಟ್ಟವರನ್ನು ಮೀಯಪದವು ದರ್ಬೆಯ ಪ್ರೀತೇಶ್ ಶೆಟ್ಟಿ, ಬೆಜ್ಜಂಗಳದ ಅಭಿಷೇಕ್ ಎಂದು ತಿಳಿದು ಬಂದಿದೆ. ಇಬ್ಬರು ಮಂಗಳೂರಿನ ಖಾಸಗಿ ಕಾಲೇಜಿನ ಪದವಿ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ. ಘಟನೆಯಲ್ಲಿ ಮತ್ತೋರ್ವ ವಿದ್ಯಾರ್ಥಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಕಾಸರಗೋಡು- ಕೇರಳ ಪ್ರಮುಖ ರಸ್ತೆ ಅಗಲೀಕರಣದ ಉದ್ದೇಶದಿಂದ ಅಲ್ಲಲ್ಲಿ ಹೊಂಡ ಗುಂಡಿಗಳನ್ನು ತೆರೆದಿದ್ದು, ಅಪಘಾತಕ್ಕೆ ಪ್ರಮುಖ ಕಾರಣ ಎಂದು ತಿಳಿದುಬಂದಿದೆ.