ತಂದೆಯ ಆಸ್ತಿ ಹಂಚಿಕೊಂಡ ಮಗ ತಂದೆ ಮಾಡಿದ ಸಾಲ ಮಗ ತೀರಿಸಬೇಕು: ಹೈಕೋರ್ಟ್

ರಾಜ್ಯ

*ತಂದೆಯ ಆಸ್ತಿಯನ್ನು ಹಂಚಿಕೊಳ್ಳುವ ಮಕ್ಕಳು ತಂದೆಯ‌ ಸಾಲ ತೀರಿಸಬೇಕು ಎಂದು ರಾಜ್ಯ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ, ಮೃತ ತಂದೆಯ ಜವಾಬ್ದಾರಿಗಳನ್ನು ಪೂರೈಸಲು ಮಗ ಹೊಣೆಗಾರನಾಗಿರುತ್ತಾನೆ ಎಂದು ಹೈಕೋರ್ಟ್ ತೀರ್ಪು ನೀಡಿದೆ.

ನ್ಯಾಯಮೂರ್ತಿ ಕೆ.ನಟರಾಜನ್ ಅವರು ತಮ್ಮ ತಂದೆ ಸಾಲ ಪಡೆದಿರುವುದರಿಂದ ಕಾನೂನು ಕ್ರಮ ಜರುಗಿಸಲು ಸಾಧ್ಯವಿಲ್ಲ ಎಂಬ ಆರೋಪಿ ಬಿ.ಟಿ.ದಿನೇಶ್ ಅವರ ವಾದವನ್ನ ತಳ್ಳಿಹಾಕಿದರು. ತಂದೆಯ ಸಾಲವನ್ನು ಮಗ ತೀರಿಸಬೇಕು ಎಂದು ಹೈಕೋರ್ಟ್ ಆದೇಶ ನೀಡಿದೆ.

ಪ್ರಕರಣದ ವಿವರಗಳನ್ನಪ ಗಮನಿಸಿದರೆ ಭರಮಪ್ಪ ಎಂಬ ವ್ಯಕ್ತಿ ತನ್ನ ವ್ಯಾಪಾರ ಹಾಗೂ ಕುಟುಂಬದ ಅಗತ್ಯಗಳಿಗಾಗಿ ಪ್ರಸಾದ್ ರಾಯ್ಕಾರ್ ಎನ್ನುವವರಲ್ಲಿ 2,60,000 ರೂಪಾಯಿ ಸಾಲವಾಗಿ ಪಡೆದಿದ್ದು, ಈ ಸಾಲ ತೀರಿಸದೇ ಸಾವನ್ನಪ್ಪಿದ್ದಾನೆ. ಈ ಬಗ್ಗೆ ಪ್ರಾಮಿಸರಿ ನೋಟ್ ಕೂಡ ಬರೆಯಲಾಗಿತ್ತು. ಭರಮಪ್ಪ ಸಾವಿನ ನಂತ್ರ ಪ್ರಸಾದ್, ಭರಮಪ್ಪನ ಮಗನನ್ನು ಸಾಲ ತೀರಿಸುವಂತೆ ಕೇಳಿದ್ದು, ಮಗ ದಿನೇಶ್ ಕೂಡ 2005ರಲ್ಲಿ 10 ಸಾವಿರ ರೂಪಾಯಿ. ಆ ನಂತರ ಹಲವು ಕಂತುಗಳಲ್ಲಿ 2,25,000 ರೂಪಾಯಿ ಮತ್ತು ಚೆಕ್ ವಿತರಿಸಿದ್ದಾನೆ. ಆದರೆ ಅವೆಲ್ಲವೂ ಬೌನ್ಸ್ ಆಗಿವೆ. ಹೀಗಾಗಿ ಸಾಲ ಕೊಟ್ಟ ಪ್ರಸಾದ್ ನ್ಯಾಯಾಲಯದ ಮೊರೆ ಹೋಗಿದ್ದಾನೆ. ಸಧ್ಯ ಹೈಕೋರ್ಟ್, ಐಸಿಡಿಎಸ್ ಲಿಮಿಟೆಡ್ ವರ್ಸಸ್ ಬೀನಾ ಶಬೀರ್ ಮತ್ತು ಅನ್ಯಾ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನ ಉಲ್ಲೇಖಿಸಿ, ತಂದೆಯ ಸಾಲವನ್ನು ಮಗ ತೀರಿಸಬೇಕೆಂದು ತೀರ್ಪು ನೀಡಿದೆ.