ಸಿವಿಲ್ ನ್ಯಾಯಾಧೀಶರ ಪರೀಕ್ಷೆಯಲ್ಲಿ ಮಂಗಳೂರಿನ ಯುವ ನ್ಯಾಯವಾದಿ ರಾಹುಲ್ ಶೆಟ್ಟಿಗಾರ್ ಪ್ರಥಮ ಸ್ಥಾನಗಳಿಸಿದ್ದಾರೆ.

ಕರಾವಳಿ

ಇತ್ತೀಚೆಗೆ ನಡೆದ ಸಿವಿಲ್ ನ್ಯಾಯಾಧೀಶರ ಪರೀಕ್ಷೆಯಲ್ಲಿ ಮಂಗಳೂರಿನ ಯುವ ನ್ಯಾಯವಾದಿ ರಾಹುಲ್ ಶೆಟ್ಟಿಗಾರ್ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರು ಖ್ಯಾತ ಹಿರಿಯ ವಕೀಲ ಪಿ.ಪಿ.ಹೆಗ್ಡೆ ಅವರ ಬಳಿ ಕಿರಿಯ ವಕೀಲರಾಗಿ ಸೇವೆ ಸಲ್ಲಿಸಿದ್ದಾರೆ.

ಪುತ್ತೂರಿನ ಯುವ ನ್ಯಾಯವಾದಿ ತ್ವಾಹ ಖಲೀಲ್ ಕೆ.ಎ. ಅವರು ಸಿವಿಲ್ ನ್ಯಾಯಾಧೀಶರ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ.ಕುಶಾಲನಗರ ನಿವಾಸಿ ಅಬೂತಾಹಿರ್ ರವರೂ ನ್ಯಾಯಾಧೀಶರಾಗಿ ಆಯ್ಕೆಯಗೊಂಡಿದ್ದಾರೆ. ಈ ಬಾರಿ ಒಟ್ಟು 40 ಮಂದಿ ವಕೀಲರು ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ.