ಮಂಗಳಮುಖಿಯರ ಬಗ್ಗೆ ತಿಳಿಯಬೇಕಾದ ಸತ್ಯಾಸತ್ಯತೆಗಳು

ರಾಜ್ಯ

ನಗರಗಳಲ್ಲಿ ಕೆಲವೊಂದು ಕಡೆಗಳಲ್ಲಿ ಮಂಗಳಮುಖಿಯರನ್ನು ನೋಡಿರಬಹುದು. ಮಂಗಳಮುಖಿಯರ ಬಗ್ಗೆ ಸಾಮಾನ್ಯ ಜನರಲ್ಲಿ ಇಂದಿಗೂ ಕೆಲವೊಂದು ರಹಸ್ಯಗಳಿವೆ. ಮಂಗಳಮುಖಿಯರ ಬಗ್ಗೆ ಇತಿಹಾಸಗಳಲ್ಲೂ ಉಲ್ಲೇಖವಿದೆ. ಮಂಗಳಮುಖಿಯರ ಆ ಗೋಳು, ಕೇಳುವವರು ಯಾರು?

ಮಹಾಭಾರತದಲ್ಲೂ ಮಂಗಳಮುಖಿಯ ಬಗ್ಗೆ ಉಲ್ಲೇಖವಿದೆ. ಇಸ್ಲಾಂನ ಗ್ರಂಥಗಳಲ್ಲೂ ಮಂಗಳಮುಖಿಯರ ಉಲ್ಲೇಖವಿದೆ. ಮುಘಲ್ ಸಾಮ್ರಾಜ್ಯದಲ್ಲಿ ಮಂಗಳಮುಖಿಯರಿದ್ದರು. ಹಿಂದೂ ಪುರಾಣಗಳಲ್ಲಿ ಮಂಗಳಮುಖಿಯರ ಕೆಲವು ಆಚರಣೆಗಳ ಉಲ್ಲೇಖವಿದೆ. ಆದರೆ ಇದನ್ನು ಮುಸ್ಲಿಮರು ಕೂಡ ಆಚರಿಸಿಕೊಂಡು ಬಂದಿದ್ದಾರೆ.

ಇಂದಿನ ದಿನಗಳಲ್ಲಿ ಮಂಗಳಮುಖಿಯರು ಹೆಚ್ಚಾಗಿ ಭಿಕ್ಷೆ ಬೇಡುವುದನ್ನು ಕಾಣುತ್ತೇವೆ. ಆದರೆ ಹಿಂದಿನ ಕಾಲದಲ್ಲಿ ತುಂಬಾ ಕಠಿಣ ಪರಿಶ್ರಮದಿಂದ ಅವರು ಜೀವನ ಸಾಗಿಸುತ್ತಿದ್ದರು. ಶ್ರೀಮಂತ ಮಹಿಳೆಯರಿಗೆ ರಕ್ಷಕರಾಗಿ ಅಥವಾ ಕೆಲಸದವರಾಗಿ ತುಂಬಾ ಕಠಿಣ ಪರಿಶ್ರಮದಿಂದ ಹಣ ಸಂಪಾದನೆ ಮಾಡುತ್ತಿದ್ದರು.ರಾಜಮನೆತನದವರು ಹೆಚ್ಚಾಗಿ ಮಂಗಳಮುಖಿಯರ ಮೇಲೆ ಭರವಸೆಯನ್ನಿಡುತ್ತಿದ್ದರು.

ಮಂಗಳಮುಖಿ ಜನಿಸಿದಾಗ ಮರುಜನ್ಮ ಸಮಾರಂಭ ಆಯೋಜಿಸಲಾಗುವುದು. ಇದನ್ನು ನಿರ್ವಹಣ ಸಮಾರಂಭವೆಂದೂ ಕರೆಯಲಾಗುವುದು. ಪುರುಷರ ಬಾಹ್ಯ ಲೈಂಗಿಕ ಅಂಗಗಳಾದ ಶಿಶ್ನ ಹಾಗೂ ವೃಷಣ ತೆಗೆದು ಹಾಕಲಾಗುವುದು.ಇದರ ಮೂಲಕ ಪುರುಷನನ್ನು ನಪುಂಸಕನಾಗಿ ಪರಿವರ್ತಿಸಲಾಗುವುದು.
ಸಮರ್ಥ ಮಂಗಳಮುಖಿಯಾಗುವ ಮೊದಲು ಮಂಗಳಮುಖಿಯರು ವಿಶೇಷ ಆಹಾರ ಕ್ರಮ ಪಾಲಿಸಬೇಕಾಗುವುದು.ಕೆಲವೊಂದು ರೀತಿಯ ನಿರ್ಬಂಧಗಳೊಂದಿಗೆ ಪ್ರಸವದ ಬಳಿಕ ಮಹಿಳೆಯರು ಅನುಸರಿಸುವಂತಹ ನಿರ್ಬಂಧದ ಸಮಯ ಕಳೆಯಬೇಕು. ಶಸ್ತ್ರಚಿಕಿತ್ಸೆಯ 40 ದಿನಗಳ ಮೊದಲು ಇದನ್ನು ನಡೆಸಲಾಗುವುದು.

ಮಂಗಳಮುಖಿಯರಲ್ಲಿ ಭವಿಷ್ಯ ನೋಡುವಂತಹ ಅತಿ ಮಾನುಷ್ಯ ಸಾಮರ್ಥ್ಯವು ಮಂಗಳಮುಖಿ ಯರಲ್ಲಿ ಇರುವುದು ಎಂದು ನಂಬಲಾಗಿದೆ. ಅವರಿಗೆ ತಮ್ಮ ಸಾವಿನ ಬಗ್ಗೆ ಮೊದಲೇ ತಿಳಿದುಬರುವುದು ಎಂಬ ನಂಬಿಕೆ ಇದೆ.ಮಂಗಳಮುಖಿಯರ ಸಾವಿನ ಶೋಕಾಚರಣೆಯಲ್ಲಿ ತೊಡಗಿಕೊಳ್ಳುವ ಮಂದಿ ಕೆಲವೇ ಕೆಲವು ಮಂದಿ. ಯಾಕೆಂದರೆ ಇದು ತುಂಬಾ ಗೌಪ್ಯ ಸಮಾರಂಭ ವಾಗಿರುವುದು. ಮಂಗಳಮುಖಿಯರ ಸಾವಿನ ಕಾರ್ಯಗಳನ್ನು ರಾತ್ರಿ ವೇಳೆ ನಡೆಸಲಾಗುತ್ತದೆ.