ಮತಾಂಧರ ಪಾಲಿನ ಹೀರೋ, ಉಗ್ರ ಭಾಷಣಕಾರ ರಘು ಸಕಲೇಶಪುರ ಬಜರಂಗದಳಕ್ಕೆ ರಾಜೀನಾಮೆ

ರಾಜ್ಯ

ಬಳಸಿ ಬೀಸಾಡುವ ದೊಣ್ಣೆ ನಾಯಕರು, ಇನ್ನಾದರೂ ಅರ್ಥ ಮಾಡಿಕೊಳ್ಳಿ

ಕರಾವಳಿ ಭಾಗದಲ್ಲಿ ಪ್ರಚೋದನಕಾರಿ ಭಾಷಣದ ಮೂಲಕ ಬಿಜೆಪಿ ಮತ್ತಿತರ ಹಿಂದೂ ಸಂಘಟನೆಗಳಿಗೆ ಗ್ಲುಕೋಸ್ ನೀಡುತಿದ್ದ ಹಲವಾರು ನಾಯಕರುಗಳು ಇದ್ದಾರೆ. ಅದೇ ರೀತಿ ಹಾಸನ, ಸಕಲೇಶಪುರ ಭಾಗದಲ್ಲಿ ತನ್ನ ಪ್ರಚೋದನಕಾರಿ ಭಾಷಣದ ಮೂಲಕ ಹಿಂದುತ್ವವನ್ನು ಬಡಿದೆಬ್ಬಿಸುವ ಮೂಲಕ ಮತಾಂಧರ ಪಾಲಿಗೆ ಹೀರೋ ಆಗಿ ಗುರುತಿಸಿಕೊಂಡಿದ್ದ ರಘು ಸಕಲೇಶಪುರ ಬಜರಂಗದಳಕ್ಕೆ ರಾಜೀನಾಮೆ ನೀಡಿದ್ದಾರೆ ಅನ್ನುವ ಮಾಹಿತಿ ಸಂಘಟನೆಯ ಆಪ್ತ ವಲಯದಲ್ಲಿ ಕೇಳಿ ಬರುತ್ತಿದೆ.

ಬಜರಂಗದಳದಲ್ಲಿ ಇದ್ದುಕೊಂಡು ಹಲವಾರು ಕೆಲಸಕ್ಕೆ ನಾಯಕತ್ವ ವಹಿಸಿ, ತನ್ನ ಪ್ರಚೋದನಕಾರಿ ಭಾಷಣದ ಮೂಲಕ ಹಲವಾರು ಗಲಭೆಗೆ ಕಾರಣವಾಗಿದ್ದ ರಘು ಸಕಲೇಶಪುರ ಸಂಘಟನೆಗೆ ಗುಡ್ ಬೈ ಹೇಳಿರುವುದು ಹಲವರನ್ನು ಶಾಕಿಂಗ್ ಗೊಳಿಸಿದೆ.

ಪ್ರಚೋದನಕಾರಿ ಭಾಷಣಗಳನ್ನೇ ಕಾಯಕ ಮಾಡಿಕೊಂಡಿದ್ದ, ಅದನ್ನೇ ಬದುಕಿನ ದಾರಿ ಮಾಡಿಕೊಂಡಿದ್ದ ರಘು ವನ್ನು ಸಂಘಟನೆ ಯೂಸ್ ಅಂಡ್ ಟ್ರೋ ಮಾಡುವುದಕ್ಕೆ ಮಾತ್ರ ಬಳಸುತ್ತಿದೆ ಎಂಬ ಬೇಸರದಿಂದ ಸಂಘಟನೆಯಿಂದ ದೂರ ಸರಿದಿದ್ದಾರೆ ಅನ್ನುವ ಮಾತು ಕೇಳಿ ಬರುತ್ತಿದೆ. ರಘು ತನ್ನ ಮನೆಗೆ ಬ್ಯಾಂಕ್ ಸಾಲ ಮಾಡಿಕೊಂಡಿದ್ದ, ಅದನ್ನು ಕಟ್ಟಲು ಸಾಧ್ಯವಾಗದೇ ಮನೆ ಹರಾಜಿಗೆ ಬ್ಯಾಂಕ್ ನೋಟಿಸ್ ಬಂದಿತ್ತಂತೆ. ಅದನ್ನು ಬಿಜೆಪಿಯ ಹಲವಾರು ನಾಯಕರ ಬಳಿ ಹೇಳಿಕೊಂಡಿದ್ದ. ಆದರೆ ನಾಯಕರು ಕೇವಲ ಭಾಷಣಕ್ಕಷ್ಟೇ ರಘುವನ್ನು ಉಪಯೋಗಿಸಿದ್ದರು. ಕಷ್ಟ ಕಾಲದಲ್ಲಿ ಯಾವುದೇ ನಾಯಕರು ರಘುವಿನ ಬೆನ್ನಿಗೆ ನಿಂತಿಲ್ಲ. ಇದರಿಂದ ಮನನೊಂದ ರಘು ತನ್ನ ಸ್ನೇಹಿತರ ಬಳಿ ವಿಷಯ ತಿಳಿಸಿದಾಗ ನೆರವಿಗಾಗಿ ವಾಟ್ಸಾಪ್ ಗ್ರೂಪ್ ರಚಿಸಿ ಸಹಾಯಕ್ಕೆ ಮುಂದಾಗಿದ್ದರು. ಇದಕ್ಕೆ ಬ್ರೇಕ್ ಹಾಕಿದ ದೊಣ್ಣೆ ನಾಯಕರು. ಇದರಿಂದ ಸಂಘಟನೆಗೆ ಕೆಟ್ಟ ಹೆಸರು ಬರುತ್ತದೆ ಎಂದು ಹೇಳಿ ವಾಟ್ಸಾಪ್ ಗ್ರೂಪ್ ಅನ್ನೇ ರಿಮೂವ್ ಮಾಡಿದ್ದಾರಂತೆ. ಸಂಘ ನಾಯಕರ ಈ ರೀತಿಯ ವರ್ತನೆಯಿಂದ ಬೇಸತ್ತು ಸಂಘದಿಂದಲೇ ದೂರವಾಗುವ ಚಿಂತನೆಗೆ ಕಾರಣ ಅನ್ನುವ ಮಾತಿದೆ.

ಭಾಷಣವನ್ನೇ ಬಂಡವಾಳ ಮಾಡಿಕೊಂಡು ಸಮಾಜದ ಸ್ವಾಸ್ಥ್ಯ ಹಾಳು ಮಾಡುವವರಿಗೆ ರಘು ರಂತವರ ಈಗಿನ ಪರಿಸ್ಥಿತಿಯೇ ಉತ್ತಮ ಉದಾಹರಣೆ. ಇನ್ನಾದರೂ ಯಾರ್ಯಾರ ಮಾತು ಕೇಳಿ ಪ್ರಚೋದನಕಾರಿ ಭಾಷಣದ ಮೂಲಕ ಇನ್ನೊಬ್ಬರ ಮನೆಯನ್ನು ಹಾಳು ಮಾಡುವವರು ತಮ್ಮ ಕಷ್ಟ ಕಾಲದಲ್ಲಿ ತಮ್ಮನ್ನು ಬಳಸಿಕೊಂಡವರು ಯಾರೂ ಹತ್ತಿರ ಬರುವುದಿಲ್ಲ ಎಂಬುದನ್ನು ಅರಿತುಕೊಂಡರೆ ಒಳ್ಳೆಯದು.