ರಾಹುಲ್ ಬುದ್ದಿವಂತ,ಪಪ್ಪು ಅಂತು ಅಲ್ಲವೇ ಅಲ್ಲ: ರಘುರಾಮ್ ರಾಜನ್

ರಾಷ್ಟ್ರೀಯ

ಗಾಂಧಿ ಕುಟುಂಬದ ಕುಡಿ ರಾಹುಲ್ ಗಾಂಧಿ ಯಾವುದೇ ರೀತಿಯಲ್ಲೂ “ಪಪ್ಪು” ಅಲ್ಲ. ಅವರು “ಬುದ್ಧಿವಂತ ವ್ಯಕ್ತಿ” ಎಂದು ಭಾರತೀಯ ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ.ಕಳೆದ ಡಿಸೆಂಬರ್‌ ತಿಂಗಳಲ್ಲಿ ರಾಜಸ್ಥಾನದಲ್ಲಿ ನಡೆದ ಕಾಂಗ್ರೆಸ್ಸಿನ ಭಾರತ್ ಜೋಡೋ ಯಾತ್ರೆ’ಯಲ್ಲಿ ರಾಹುಲ್ ಗಾಂಧಿಯವರೊಂದಿಗೆ ರಾಜನ್‌ ಹೆಜ್ಜೆ ಹಾಕಿದ್ದರು.

ಭಾರತ ಜೋಡೋ ಯಾತ್ರೆಗೆ ಸೇರಿದ ಬಳಿಕ ಮಾತನಾಡಿದ ರಾಜನ್ ಅವರು 2023ರ ವರ್ಷವು ಭಾರತೀಯ ಆರ್ಥಿಕತೆ ಮತ್ತು ಪ್ರಪಂಚದ ಇತರ ಭಾಗಗಳಿಗೆ ಕಷ್ಟಕರವಾಗಿರುತ್ತದೆ ಎಂದು ಹೇಳಿದ್ದಾರೆ. ಅಲ್ಲದೆ ದೇಶವು ಬೆಳವಣಿಗೆಗೆ ಅಗತ್ಯವಾದ ಸುಧಾರಣೆಗಳನ್ನು ರಚಿಸಲು ವಿಫಲವಾಗಿದೆ ಎಂದು ಹೇಳಿದರು.
ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದ ಹೆಚ್ಚು ಬಳಲುತ್ತಿರುವ ಕೆಳ ಮಧ್ಯಮ ವರ್ಗವನ್ನು ಗಮನದಲ್ಲಿಟ್ಟುಕೊಂಡು ನೀತಿಗಳನ್ನು ರೂಪಿಸಬೇಕು ಎಂದು ಅವರು ಸಲಹೆ ನೀಡಿದರು. ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳಿಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸಲು ಮತ್ತು ಸುಸ್ಥಿರ ಇಂಧನ ಕ್ಷೇತ್ರದಲ್ಲಿ ಹಸಿರು ಕ್ರಾಂತಿಗೆ ಉತ್ತೇಜನ ನೀಡಲು ರಾಜನ್ ಹೇಳಿದರು.

ಜಾಗತಿಕ ಆರ್ಥಿಕ ಬೆಳವಣಿಗೆಯ ವಿಚಾರದಲ್ಲಿ ಭಾರತವು ಚೀನಾವನ್ನು ಮೀರಿಸುತ್ತದೆ ಎಂದು. ಯೋಚಿಸುವುದು ಅಪ್ರಬುದ್ಧತೆಯನ್ನು ಸೂಚಿಸುತ್ತದೆ ಎಂದು ಆರ್‌ಬಿಐ ಮಾಜಿ ಗವರ್ನರ್ ಟೀಕಿಸಿದ್ದಾರೆ. ಆದರೆ, ಭಾರತವು ಈಗಾಗಲೇ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆ ಯಾಗಿರುವುದರಿಂದ ಪರಿಸ್ಥಿತಿಯು ಮುಂದೆ ಬದಲಾಗಬಹುದು. ದೇಶವು ಬೆಳೆಯುತ್ತಿದೆ ಮತ್ತು ವಿಸ್ತರಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅವರು ತಿಳಿಸಿದ್ದಾರೆ.