ಕೆಪಿಸಿಸಿ ಪ್ರಚಾರ ಸಮಿತಿಗೆ ಆರ್.ಕೆ ಪ್ರಥ್ವಿರಾಜ್ ನೇಮಕ

ಕರಾವಳಿ

ಕರ್ನಾಟಕ ಪ್ರದೇಶ ಕಾಂಗ್ರೇಸ್ ಪ್ರಚಾರ ಸಮಿತಿಗೆ ಜಂಟಿ ಸಂಯೋಜಕರನ್ನಾಗಿ ಆರ್.ಕೆ ಪ್ರಥ್ವಿರಾಜ್ ಅವರನ್ನು ನೇಮಿಸಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಆದೇಶ ಹೊರಡಿಸಿದ್ದಾರೆ.

ಹಲವಾರು ಸಂಘ ಸಂಸ್ಥೆಯಲ್ಲಿ ಸಕ್ರಿಯರಾಗಿ, ಸಮಾಜ ಸೇವೆಯಲ್ಲೂ ಗುರುತಿಸಿಕೊಂಡಿರುವ ಇವರು ಎಡಪದವು ತಾಲೂಕು ಪಂಚಾಯತ್ ಸದಸ್ಯರಾಗಿ, ಗುರುಪುರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾಗಿ, ಎರಡು ಬಾರಿ ಕೆಪಿಸಿಸಿ ಸದಸ್ಯರಾಗಿ, ಕಾರ್ಯನಿರ್ವಹಿಸಿ ಜನಾನುರಾಗಿಯಾಗಿದ್ದಾರೆ.ಇವರ ಸೇವೆಯನ್ನು ಮನಗಂಡ ಕಾಂಗ್ರೇಸ್ ಪಕ್ಷ ಇನ್ನೂ ಹೆಚ್ಚಿನ ಜವಾಬ್ದಾರಿ ನೀಡಿ ಪಕ್ಷವನ್ನು ಸಂಘಟಿಸಲು ಪ್ರಚಾರ ಸಮಿತಿಯ ಜಂಟಿ ಸಂಯೋಜಕರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.