ರಾಜ್ಯದಲ್ಲಿ ಗಂಡಿಗಿಂತ ಹೆಣ್ಣು ಮಕ್ಕಳೇ ಅಧಿಕ ನಾಪತ್ತೆ.!

ರಾಜ್ಯ

ಪೊಲೀಸ್ ವರದಿ ಬಹಿರಂಗ

ರಾಜ್ಯದಲ್ಲಿ ಕೋವಿಡ್ ಅಲೆ ಆರಂಭವಾದ ನಂತರ ಕಳೆದ ಮೂರು ವರ್ಷಗಳಲ್ಲಿ ಕಾಣೆಯಾಗಿದ್ದ 47 ಸಾವಿರ ಜನರ ಪೈಕಿ ಮಕ್ಕಳು ಸೇರಿ 5,510 ಜನ ಪೊಲೀಸ್ ತನಿಖೆಗೂ ಸಿಗದೆ ಕಣ್ಮರೆಯಾಗಿದ್ದಾರೆ.

ದೇಶದಲ್ಲಿ 2019 ರಲ್ಲಿಯೇ ಕೋವಿಡ್ ಅಲೆ ಆರಂಭವಾಗಿದ್ದರೂ ಗಂಭೀರವಾಗಿ ಆವರಿಸಿದ್ದು 2020 ರಲ್ಲಿ, ಆ ವರ್ಷ ಮತ್ತು 2021,2022 ರಲ್ಲಿ ಪ್ರತಿ ವರ್ಷ ಸರಾಸರಿ 15-17 ಸಾವಿರ ಜನರಂತೆ ಒಟ್ಟು 47 ಸಾವಿರ ಜನ ಕಾಣೆಯಾಗಿರುವ ಕೇಸು ದಾಖಲಾಗಿದೆ. ಅದರಲ್ಲಿ 4,500 ಪ್ರಕರಣ ಇನ್ನೂ ತನಿಖೆಯಲ್ಲಿದೆ. 1010 ಕೇಸ್ ಗಳಲ್ಲಿ ಕಾಣೆಯಾದವರನ್ನು ಪತ್ತೆ ಮಾಡಲು ಆಗಿಲ್ಲ ಎಂದು ಪೊಲೀಸ್ ವಾರ್ಷಿಕ ವರದಿಯಲ್ಲಿ ತಿಳಿಸಲಾಗಿದೆ.

ಹೆಣ್ಣು ಮಕ್ಕಳೇ ಜಾಸ್ತಿ
ಪ್ರತಿ ವರ್ಷ ಸರಾಸರಿ ಎರಡೂವರೆ ಸಾವಿರದಷ್ಟು ಮಕ್ಕಳು ಕಾಣೆಯಾಗುತ್ತಿರುವ ಬಗ್ಗೆ ಪೊಲೀಸ್ ಇಲಾಖೆಯಲ್ಲಿ ಪ್ರಕರಣ ದಾಖಲಾಗುತ್ತಿದೆ. 2020 ರಲ್ಲಿ 2700 ಕ್ಕೂ ಅಧಿಕ ಮಕ್ಕಳು ಕಾಣೆಯಾಗಿದ್ದಾರೆ. ಹೀಗೆ ಕಾಣೆಯಾಗುತ್ತಿರುವ ಮಕ್ಕಳಲ್ಲಿ ಹೆಣ್ಣು ಮಕ್ಕಳೇ ಜಾಸ್ತಿ ಎನ್ನುವುದು ಆತಂಕಕಾರಿ ಸಂಗತಿ. ವಿಶೇಷ ಅಂದರೆ ಕಳೆದ ಡಿಸೆಂಬರ್ ನಲ್ಲಿಯೇ ಬರೋಬ್ಬರಿ 249 ಮಕ್ಕಳು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. 2021 ರಲ್ಲಿ 2,500 ಮಕ್ಕಳು ಕಾಣೆಯಾಗಿದ್ದರು. ಅದರಲ್ಲಿ 1711 ಹೆಣ್ಣು ಮಕ್ಕಳು.