ಚುನಾವಣಾ ಪೂರ್ವ ಸಮೀಕ್ಷೆ ಬಹಿರಂಗ: ಬಿಜೆಪಿಗಿಂತಲೂ ಕಾಂಗ್ರೆಸ್ ಮೇಲುಗೈ

ರಾಜ್ಯ

ಹೈದರಾಬಾದ್ ಮೂಲದ ಎಸ್ ಎ ಎಸ್ ಗ್ರೂಪ್ IPSS ನೊಂದಿಗೆ ಬಹುನಿರೀಕ್ಷಿತ 2023 ರ ಕರ್ನಾಟಕ ವಿಧಾನಸಭಾ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದೆ. ಈ ಸಮೀಕ್ಷೆಯಲ್ಲಿ ಆಡಳಿತಾರೂಢ ಬಿಜೆಪಿಗಿಂತಲೂ ಮತದಾರರ ಚಿತ್ತ ಕಾಂಗ್ರೆಸ್ ನತ್ತ ಹೆಚ್ಚಿರುವುದು ಕಂಡುಬಂದಿದೆ.

ಸಮೀಕ್ಷೆ ಪ್ರಕಾರ ಕಾಂಗ್ರೆಸ್ ಗೆ ಅತಿ ಹೆಚ್ಚಿನ ಮತ ಸಿಕ್ಕಿದ್ದು, ಶೇ 40 ರಷ್ಟು ಮತದಾರರು ‘ಕೈ’ ಪಕ್ಷದ ಪರ ಒಲವು ಹೊಂದಿದ್ದಾರೆಂದು ತಿಳಿದುಬಂದಿದೆ. ಅದೇ ರೀತಿ ಆಡಳಿತಾರೂಢ ಬಿಜೆಪಿ ಪರ ಶೇ 34 ರಷ್ಟು ಮತದಾರರು ಒಲವು ಹೊಂದಿದ್ದಾರೆಂದು ತಿಳಿದುಬಂದಿದೆ. ಇನ್ನೂ ಜೆಡಿಎಸ್ ಪರ ಶೇ 17 ರಷ್ಟು ಮತದಾರರು ಒಲವು ಹೊಂದಿದ್ದಾರೆ ಮತ್ತು ಶೇ. 6 ರಷ್ಟು ಜನರು ಇತರರ ಪರವಾಗಿದ್ದರೆ, ಶೇ. 3 ರಷ್ಟು ಮತದಾರರು ಸೈಲೆಂಟ್ ವೋಟ್ ಫ್ಯಾಕ್ಟರ್ (SVF) ಆಗಿದ್ದಾರೆಂದು ತಿಳಿದುಬಂದಿದೆ.