ಬಾಲಕಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ಉತ್ತರ ಭಾರತ ಮೂಲದ ಆರೋಪಿಯ ಬಂಧನ

ಕರಾವಳಿ

ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಮಳವೂರು ಗ್ರಾಮದ ಮರವೂರು ಚೆಕ್ ಡ್ಯಾಮ್ ಬಳಿ ಉತ್ತರ ಭಾರತ ಮೂಲದ ಕೂಲಿಕಾರ್ಮಿಕರು ವಾಸವಿದ್ದ ರೂಮಿನಲ್ಲಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಬಲಾತ್ಕಾರ ಮಾಡಲು ಯತ್ನಿಸಿದ ಆರೋಪದಲ್ಲಿ ಕೂಲಿ ಕಾರ್ಮಿಕ ಗೋಪಾಲ್ ಬಿಂದ ಎಂಬಾತನನ್ನು ಇಂದು ಮಧ್ಯಾಹ್ನ ಬಜಪೆ ಪೊಲೀಸರು ಬಂಧಿಸಿದ್ದಾರೆ. ಈತನ ಮೇಲೆ ಪೋಸ್ಕೊ ಪ್ರಕರಣ ದಾಖಲಿಸಲಾಗಿದೆ.

ಆರೋಪಿಯನ್ನು ಉತ್ತರ ಪ್ರದೇಶ ಘಾಜಿಪುರ್ ಜಿಲ್ಲೆಯ ಬಿಂದ್ ಪುರ ಗ್ರಾಮದ ಸುಗ್ರೀವ ಬಿಂದ ಪುತ್ರ 23 ವರ್ಷದ ಗೋಪಾಲ್ ಬಿಂದ ಎಂದು ಗುರುತಿಸಲಾಗಿದೆ.

ಬಜಪೆ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ಪ್ರಕಾಶ್ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.