ಈ ದೇಶದ ಪರಂಪರೆ ಸೌಹಾರ್ದತೆಯ ಪರಂಪರೆಯಾಗಿದೆ: ನಹೀಂ ಫೈಝಿ

ಕರಾವಳಿ

ಅಡ್ಯಾರ್ ಕಣ್ಣೂರು SKSSF ಮಾನವ ಸರಪಳಿ

ರಾಷ್ಟ್ರ ರಕ್ಷಣೆಗೆ ಸೌಹಾರ್ದತೆಯ ಸಂಕಲ್ಪ ಧ್ಯೇಯ ವಾಕ್ಯದೊಂದಿಗೆ SKSSF ದ.ಕ ವೆಸ್ಟ್ ಜಿಲ್ಲೆ ಆಶ್ರಯದಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಮಾನವ ಸರಪಳಿ ಕಾರ್ಯಕ್ರಮ ಅಡ್ಯಾರ್ ಕಣ್ಣೂರು ನಲ್ಲಿ ಜರುಗಿತು.

ಮುಖ್ಯ ಭಾಷಣಗೈದ ನಹೀಂ ಫೈಝಿ ಪುತ್ತೂರು ‘ಧರ್ಮದ ತಿರುಳು ತಿಳಿಯದ ಕೆಲವೊಂದು ವಿಚ್ಛಿದ್ರಕಾರಿ ಶಕ್ತಿಯಿಂದ ಗಲಭೆಗಳು ನಡೆಯುತ್ತಿದೆ. ಯಾವುದೇ ಧರ್ಮ ಹಿಂಸೆಯನ್ನು ಪ್ರಚೋದಿಸುವುದಿಲ್ಲ. ಈ ದೇಶದ ಪರಂಪರೆ ಸೌಹಾರ್ದತೆಯ ಪರಂಪರೆಯಾಗಿದೆ. ಇನ್ನಾದರೂ ದ್ವೇಷದ ಕಾರ್ಮೋಡ ತೊಲಗಲಿ’ ಎಂದರು.

ಅಮೀರ್ ತಂಞಳ್ ಕಿನ್ಯಾ, ರಫೀಕ್ ಹುದವಿ ಕೋಲಾರ, ರೆವರೆಂಡ್ ಫಾದರ್ ರೂಪೇಶ್ ಮೆಹ್ತಾ, ಇಬ್ರಾಹಿಂ ಬಾತಿಷ್ ತಂಞಳ್ ಆನೇಕಲ್, ಅನ್ವರ್ ಹುದವಿ ವೆಲಾಯಿಲ್, ಮುಸ್ತಫಾ ಉಳ್ಳಾಲ, ರಮ್ಲಾನ್ ಮಾರಿಪಳ್ಳ ಮೊದಲಾದವರು ಉಪಸ್ಥಿತರಿದ್ದರು.

ಇದಕ್ಕಿಂತ ಮೊದಲು ಪಡೀಲ್ ಜಂಕ್ಷನ್ ನಿಂದ ಅಡ್ಯಾರ್ ಕಣ್ಣೂರು ವರೆಗೆ ಸಾವಿರಾರು ಕಾರ್ಯಕರ್ತರಿಂದ ಜಾಥಾ ನಡೆಯಿತು.