ತಂದೆ,ಮಗ ಸೇರಿ ಒಡಹುಟ್ಟಿದ ಮಗಳನ್ನೇ ಮುಗಿಸಿದರು

ರಾಷ್ಟ್ರೀಯ

ವೈದ್ಯಕೀಯ ವಿದ್ಯಾರ್ಥಿನಿಯ ಮರ್ಯಾದಾ ಹತ್ಯೆ!

22 ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯನ್ನು ಸಹೋದರ ಮತ್ತು ತಂದೆಯೇ ಸೇರಿ ಬೆಂಕಿ ಹಚ್ಚಿ ಕೊಂದುರುವ ಘಟನೆ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿ ನಡೆದಿದೆ.  ವಿಧ್ಯಾರ್ಥಿನಿಯ ಪ್ರೇಮ ಪ್ರಕರಣವನ್ನು ವಿರೋಧಿಸಿ ಮನೆಯವರೇ ಈ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ. ಪ್ರಕರಣದ ಸಂಬಂಧ 5 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಜ.22 ರಂದು ಹತ್ಯೆ ನಡೆದಿದೆ. 

ತೃತೀಯ ವರ್ಷದ ಹೋಮಿಯೋಪತಿ ಮೆಡಿಸಿನ್ ಮತ್ತು ಸರ್ಜರಿ ಪದವಿ ವ್ಯಾಸಂಗ ಮಾಡುತ್ತಿದ್ದ ಶುಭಾಂಗಿ ಜೋಗ್ದಂಡ್ ಗೆ ವಿವಾಹ ನಿಶ್ಚಯವಾಗಿತ್ತು. ಆದರೆ ಆಕೆ ತಾನು ಯುವಕನೋರ್ವನನ್ನು ಪ್ರೀತಿಸುತ್ತಿರುವುದಾಗಿ ಹೇಳಿದ್ದಳು. ಇದರಿಂದ ಮದುವೆ ಮುರಿದು ಬಿದ್ದಿತ್ತು. ಪರಿಣಾಮ ಕುಟುಂಬ ಸದಸ್ಯರು ತೀವ್ರ ಅಸಮಾಧಾನಗೊಂಡಿದ್ದರು. 

ಶುಭಾಂಗಿಯ ತಂದೆ ಮತ್ತು ಸಹೋದರ, ಹಾಗೂ ಕುಟುಂಬದ ಇನ್ನಿತರ ಸದಸ್ಯರು ಒಟ್ಟು ಸೇರಿ ಆಕೆಯನ್ನು ಜನವರಿ 22 ರಂದು ಅವರದೇ ಜಮೀನಿಗೆ ಕರೆದೊಯ್ದು ಕೊರಳು ಬಿಗಿದು ಹತ್ಯೆ ಮಾಡಿ, ಆಕೆಯ ಶವವನ್ನು ಸುಟ್ಟು ಸಾಕ್ಷ್ಯ ನಾಶ ಪಡಿಸಲು ಯತ್ನಿಸಿದ್ದರು.ಹತ್ಯೆ ಆರೋಪದಡಿಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.