ಮೇ ತಿಂಗಳ ಕೊನೆಯಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ಸಾಧ್ಯತೆ.?

ರಾಜ್ಯ

ಕರ್ನಾಟಕ ವಿಧಾನಸಭಾ ಚುನಾವಣೆಯ ತಯಾರಿ ಈಗಾಗಲೇ ರಾಜ್ಯದಲ್ಲಿ ಜೋರಾಗಿ ನಡೆಯುತ್ತಿದೆ. ಎಲ್ಲಾ ಪಕ್ಷಗಳು ಈಗಾಗಲೇ ಅಖಾಡಕ್ಕೆ ಇಳಿದಿದ್ದು ಕಾಂಗ್ರೆಸ್, ಬಿಜೆಪಿ,ಜೆಡಿ‌ಎಸ್,ಎಸ್ಡಿಪಿಐ ಜನ ಮತ ಸೆಳೆಯಲು ಶುರು ಪ್ರಾರಂಬಿಸಿದೆ.

ಇದೀಗ ಜನರ ಚಿತ್ತ ಚುನಾವಣಾ ಆಯೋಗದತ್ತವಿದ್ದು ಯಾವಾಗ ಚುನಾವಣೆ ದಿನಾಂಕ ಘೋಷಣೆಯಾಗಬಹುದೆಂಬ ನಿರೀಕ್ಷೆಯಲ್ಲಿದ್ದಾರೆ ರಾಜ್ಯದ ಜನತೆ. ಹಾಲಿ ವಿಧಾನಸಭೆಯ ಅವಧಿ ಈ ವರ್ಷದ ಮೇ ತಿಂಗಳ 24ಕ್ಕೆ ಕೊನೆಗೊಳ್ಳಲಿದೆ.ಮೇ ತಿಂಗಳ 2ನೇ ವಾರದಲ್ಲಿ ಆಯೋಗವು ಚುನಾವಣೆ ನಡೆಸುವ ಸಾಧ್ಯತೆ ಹೆಚ್ಚಳವಾಗಿದೆ.

ಮೇ ತಿಂಗಳ 24ರ ಒಳಗೆ ಹೊಸ ವಿಧಾನಸಭೆ ರಚನೆಯಾಗಬೇಕು. ಕಳೆದ ಬಾರಿ, 2018ರಲ್ಲಿ ಮೇ 12ರಂದು ಮತದಾನ ನಡೆದಿತ್ತು. ಹೆಚ್ಚು ಕಡಿಮೆ ಈ ಬಾರಿಯೂ ಅದೇ ಅವಧಿಯಲ್ಲಿ ನಡೆಯಬಹುದು.ಇದೇ ಆಧಾರದಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಈಗ ಚುನಾವಣೆ ಸಿದ್ಧತೆಗಳಿಗೆ ಮತ್ತಷ್ಟು ಚುರುಕಿನಿಂದ ಕಾರ್ಯಚರಿಸುತ್ತಿದೆ।

ರಾಜ್ಯದ ಚುನಾವಣಾ ಪ್ರಕ್ರಿಯೆಗೆ 3 ಲಕ್ಷ ದಷ್ಟು ಸಿಬಂದಿ ಅಗತ್ಯವಿದ್ದು, ಬಹುತೇಕವಾಗಿ ಶಿಕ್ಷಕರು, ಉಪನ್ಯಾಸಕರನ್ನು ನಿಯೋಜಿ ಸಲಾಗುತ್ತದೆ. ಮಾ. 9ರಿಂದ 29ರ ವರೆಗೆ ರಾಜ್ಯದಲ್ಲಿ ದ್ವಿತೀಯ ಪಿಯುಸಿ ಮತ್ತು ಮಾ. 31ರಿಂದ ಎ.15ರ ತನಕ ಪರೀಕ್ಷೆ ನಡೆಯಲಿದೆ. ಇದರ ನಂತರವಷ್ಟೇ ಚುನಾವಣೆ ಎಂದು ಚುನಾವಣಾ ಆಯೋಗದ ಅಧಿಕಾರಿ ಗಳು ಹೇಳುತ್ತಿದ್ದಾರೆ.