ಬ್ಯಾರಿ ಸಂಘಟಕ ರಿಯಾಝ್ ಅಶ್ರಫ್ ಕಲಾಕಾರ್ ನಿಧನ

ಕರಾವಳಿ

ಬ್ಯಾರಿ ಸಂಘಟಕ, ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ರಿಯಾಝ್ ಅಶ್ರಫ್ ಕಲಾಕಾರ್ ನಿಧನರಾಗಿದ್ದಾರೆ. ಕಳೆದ 15 ದಿನಗಳಿಂದ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಪ್ರಜ್ಞೆ ಕಳೆದುಕೊಂಡು
ದೇರಳಕಟ್ಟೆ ಕಣಚೂರು ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿದ್ದರು.

ಅನೇಕ ಬ್ಯಾರಿ ಈವೆಂಟ್ ಮೂಲಕ ಪ್ರಸಿದ್ಧಿ ಪಡೆದಿದ್ದರು. ಬ್ಯಾರಿ ಕಲಾವಿದರು ಆಗಿದ್ದರು. ಕವಿ, ಹಾಡುಗಾರ, ಲೇಖಕ, ಚಿತ್ರಗಾರರಾಗಿಯೂ ಜನಮನ್ನಣೆ ಗಳಿಸಿದ್ದರು.

ದಿನಾಂಕ 22-1-2023 ರಂದು ತೀವ್ರ ಹೃದಯಾಘಾಕ್ಕೆ ಒಳಗಾಗಿ ಪ್ರಜ್ಞೆ ಕಳೆದುಕೊಂಡು 15 ದಿನಗಳ ಜೀವನ್ಮರಣ ಹೋರಾಟದ ಬಳಿಕ ನಮ್ಮೆಲ್ಲರ ಪ್ರೀತಿಯ ಗೆಳೆಯ ಬಹುಮುಖ ಪ್ರತಿಭೆಗಳ ಆಗರ ರಿಯಾಝ್ ಅಶ್ರಫ್ ಕಲಾಕಾರ್ ಇದೀಗ 4-2-2023 ದೇರಳಕಟ್ಟೆ ಕಣಚೂರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.