ಪಕ್ಷಾಂತರಿಗಳಾಗುತ್ತಾರೆ,ರಾಜಕೀಯ ಪಕ್ಷಗಳು ಒಡೆಯುತ್ತವೆ,ಪ್ರಕೃತಿ ವಿಕೋಪ ನಡೆಯುತ್ತೆ: ಕೋಡಿ ಮಠ ಶ್ರೀ ಭವಿಷ್ಯ

ರಾಷ್ಟ್ರೀಯ

ರಾಜಕೀಯ ಅಸ್ಥಿರತೆ ಇದೆ. ಯಾವ ಪಕ್ಷವೂ ಕೂಡಿ ಹೋಗೋದು ಕಷ್ಟ. ಚುನಾವಣೆವರೆಗೂ ಏನನ್ನು ಹೇಳೋಕೆ ಆಗೋದಿಲ್ಲ. ಎಲ್ಲ ಡಿವೈಡ್ ಆಗುವ ಲಕ್ಷಣ ಇದೆ. ಆದರೂ ಒಂದು ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ರಾಜ್ಯ ರಾಜಕಾರಣದ ಬಗ್ಗೆ ಕೋಡಿ ಶ್ರೀಗಳು ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಜಮಖಂಡಿಯಲ್ಲಿ ಕೋಡಿ ಶ್ರೀ ಭವಿಷ್ಯ ನುಡಿದಿದ್ದಾರೆ. ಈ ವೇಳೆ ಯುಗಾದಿ ನಂತರ ಪ್ರಕೃತಿ ವಿಕೋಪ ಆಗುತ್ತದೆ ಎಂದಿದ್ದಾರೆ.

ಜಮಖಂಡಿಯಲ್ಲಿ ಮಾತನಾಡಿದ ಕೋಡಿ ಶ್ರೀ, ಚುನಾವಣೆವರೆಗೂ ಏನು ಹೇಳೋಕೆ ಆಗೋದಿಲ್ಲ. ಎಲ್ಲ ಡಿವೈಡ್ ಆಗುವ ಲಕ್ಷಣ ಇದೆ‌‌‌. ಆದರೂ ಒಂದು ಪಕ್ಷ ಅಧಿಕಾರಕ್ಕೆ ಬರುತ್ತದೆ. ಮಾಡಬಾರದ್ದು‌ ಮಾಡಿದರೆ ಆಗಬಾರದ್ದೇ ಆಗುವುದು. ಯಾರರೇ ಆಗಲಿ ತಪ್ಪು ಇರಲಿ ಸರಿ ಇರಲಿ ನಾವು ಏನು ಮಾಡುತ್ತೇವೆಯೋ ಅದೇ ಫಲ ಕೊಡುತ್ತೆ, “ಬಿತ್ತಿದ್ದೆ ಬೆಳೆಯೋದು. ಏನು ಬಿತ್ತುತ್ತೇವೆ ಅದೆ ಬೆಳೆಯುತ್ತದೆ. ಮಾಡಬಾರದು ಮಾಡಿದರೆ ಆಗಬಾರದ್ದೇ ಆಗುತ್ತೆ” ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ ಭಾರತ ಜೊಡೊ ವಿಚಾರವಾಗಿ ಮಾತನಾಡಿದ ಅವರು, ಎಲ್ಲರಿಗೂ ಒಳ್ಳೆಯದಾಗಲಿ. ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಇದೆ. ಚುನಾವಣೆವರೆಗೂ ಪಕ್ಷಾಂತರಗಳು ನಡೆಯುತ್ತವೆ. ರಾಜಕೀಯ ಪಕ್ಷಗಳು ಒಡೆದು ಹೋಗುತ್ತವೆ. ಆದರೂ ಕೊನೆಯಲ್ಲಿ ಒಂದು ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುತ್ತದೆ. ಮುಂದೆ ಎಷ್ಟು ಸುಖವಿದೆ ಅಷ್ಟೇ ಕಷ್ಟವಿದೆ. ಒಲೆ ಹತ್ತಿ ಉರಿದರೆ ನಿಂತುಕೊಳ್ಳಬಹುದು, ಆದರೆ ಧರೆ ಹೊತ್ತಿ ಉರಿದರೆ ನಿಲ್ಲಲು ಸಾಧ್ಯವೇ ಇಲ್ಲ. ನಾನು ಹೇಳಿದ ಮರುದಿನವೇ ಫ್ಲೈಟ್ ಅಪಘಾತವಾಗಿ 50 ಜನ ಸಾವನ್ನಪ್ಪಿದರು. ಯುಗಾದಿ ಬಂತರ ಎಲ್ಲ ಡಿಟೇಲ್ ಆಗಿ ಹೇಳ್ತಿನಿ ಎಂದು ತಿಳಿಸಿದ್ದಾರೆ.