ಮಂಗಳೂರಿನಲ್ಲಿ ಕಾಂಗ್ರೆಸ್​ ಟಿಕೆಟ್​ ಪೈಪೋಟಿ,ಜನಾರ್ದನ ಪೂಜಾರಿ ಪ್ರಭಾವ ಬಳಸಿ ಟಿಕೆಟ್​ ಗಿಟ್ಟಿಸೋ ಪ್ಲಾನ್​

ಕರಾವಳಿ

ಪೂಜಾರಿಯಿಂದ ಡಿಕೆಶಿಗೆ ಕರೆ.

ಮಂಗಳೂರಿನಲ್ಲಿ ಕಾಂಗ್ರೆಸ್​ ಟಿಕೆಟ್​ ಪೈಪೋಟಿಯಿದ್ದು, ಜನಾರ್ದನ ಪೂಜಾರಿ ಪ್ರಭಾವ ಬಳಸಿ ಟಿಕೆಟ್​ ಗಿಟ್ಟಿಸೋ ಪ್ಲಾನ್​ ನಡೆಸಿದ್ದಾರೆ. ಜನಾರ್ದನ ಪೂಜಾರಿಯಿಂದ ಡಿಕೆಶಿಗೆ ಕರೆ ಮಾಡಿಸಿ ಟಿಕೆಟ್ ಮನವಿ ಮಾಡಿದ್ದಾರೆ.

ಆಶೀತ್ ಪಿರೇರಾ ಟಿಕೆಟ್​ ಕಸರತ್ತು ಮಾಡುತ್ತಿದ್ದಾರೆ. ಆಶೀತ್​ ಪಿರೇರಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಪಿರೇರಾ ಜನಾರ್ದನ ಪೂಜಾರಿ ‌ಮನೆಗೆ ತೆರಳಿ ಒತ್ತಡ ಹೇರಿದ್ದು, ಪೂಜಾರಿ ಡಿಕೆಶಿಗೆ ಕರೆ ಮಾಡಿ ಟಿಕೆಟ್​ ಕೊಡುವಂತೆ ಹೇಳಿದ್ದಾರೆ. ಜೆ.ಆರ್.ಲೋಬೋ ಬದಲು ಪಿರೇರಾಗೆ ಟಿಕೆಟ್ ಕೊಡುವಂತೆ ಒತ್ತಡ ಹಾಕಿದ್ದು, ‘ನನ್ನಲ್ಲಿಗೆ ಯೂತ್ ಕಾಂಗ್ರೆಸ್ ಲೀಡರ್ ಆಶೀತ್ ಪಿರೇರಾ ಬಂದಿದಾರೆ’. ‘ಮಂಗಳೂರು ದಕ್ಷಿಣಕ್ಕೆ ಸಹಾಯ ಮಾಡಲು ಸಾಧ್ಯ ಉಂಟಾ?’ ‘ನೀವೇ ಸುಧಾರಿಸಿ, ಆಶೀತ್ ಪಿರೇರಾ ಕೂಡ ಕ್ರಿಶ್ಚಿಯನ್’ ಎಂದು ಪೂಜಾರಿ ಹೇಳಿದ್ದಾರೆ. ಜೆ.ಆರ್.ಲೋಬೋ, ಐವನ್ ಡಿಸೋಜಾ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.