ಅತ್ಯಾಚಾರಕ್ಕೆ ಯತ್ನಿಸಿದ ಯುವಕನ ತುಟಿ ಕಚ್ಚಿ ತಪ್ಪಿಸಿಕೊಂಡ ದಿಟ್ಟ ಮಹಿಳೆ

ರಾಜ್ಯ

ಮಹಿಳೆಯೊಬ್ಬರು ತನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಯುವಕನ ವಿರುದ್ಧ ಧೈರ್ಯ ತೋರಿ ಮಾನ ಪ್ರಾಣ ಉಳಿಸಿಕೊಂಡಿದ್ದಾರೆ.ಯುವಕ ಬಲವಂತವಾಗಿ ಚುಂಬಿಸಲು ಯತ್ನಿಸಿದಾಗ ಮಹಿಳೆ ಆತನ ತುಟಿಗಳನ್ನು ಕಚ್ಚಿ ಕತ್ತರಿಸಿದ್ದಾಳೆ. ತುಟಿ ತುಂಡಾದ ತಕ್ಷಣ ಯುವಕ ನೋವಿನಿಂದ ಅಳಲು ಪ್ರಾರಂಭಿಸಿದ್ದಾನೆ. ಈ ವೇಳೆ ಮಹಿಳೆ ಕಿರುಚಿಕೊಂಡಿದ್ದು ಅಕ್ಕಪಕ್ಕದ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದ ಜನರು ಸ್ಥಳಕ್ಕೆ ಆಗಮಿಸಿ ಆರೋಪಿಯನ್ನು ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದರು.

ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಅವನ ತುಟಿಯ ತುಂಡನ್ನು ಪ್ಯಾಕೆಟ್‌ನಲ್ಲಿ ತೆಗೆದುಕೊಂಡು ಸಮೀಪದ ಸಿಎಚ್‌ಸಿಗೆ ಕರೆದೊಯ್ದರು. ಅಲ್ಲಿ ಆತನಿಗೆ ಚಿಕಿತ್ಸೆ ನೀಡಲಾಯಿತು. ಶನಿವಾರ ಮಧ್ಯಾಹ್ನ ದಾರಾವುಲಾ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದೆ. ಪೊಲೀಸರು ಲವಡ್ ಗ್ರಾಮದ ಮೋಹಿತ್ ಸೈನಿ ಮೇಲೆ ಕಿರುಕುಳ ಮತ್ತು ಅತ್ಯಾಚಾರ ಯತ್ನಕ್ಕಾಗಿ ಎಫ್ಐಆರ್ ದಾಖಲಿಸಿದ್ದಾರೆ.

ಶನಿವಾರ ಮಧ್ಯಾಹ್ನ ತನ್ನ ಹೊಲದಲ್ಲಿ ಮಹಿಳೆ ಕೆಲಸ ಮಾಡುತ್ತಿದ್ದಳು. ಆಗ ಒಬ್ಬ ಯುವಕ ಏಕಾಏಕಿ ಹಿಂದಿನಿಂದ ಬಂದು ಆಕೆಯನ್ನು ಹಿಡಿದಿದ್ದಾನೆ. ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲಿ ಆರೋಪಿ ಮಹಿಳೆಯನ್ನು ನೆಲಕ್ಕೆ ಕೆಡವಿ ಒಂದು ಕೈಯಲ್ಲಿ ಆಕೆಯ ಬಾಯಿ ಮುಚ್ಚಿ ಬಟ್ಟೆಗಳನ್ನು ಹರಿಯಲು ಪ್ರಾರಂಭಿಸಿದ್ದಾನೆ. ಸಂತ್ರಸ್ತೆ ಯುವಕನಿಂದ ತನ್ನನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸಿದ್ದರು ಸಾಧ್ಯವಾಗಲಿಲ್ಲ. ಯಾವಾಗ ಯುವಕ ಬಲವಂತವಾಗಿ ಚುಂಬಿಸಲು ಯತ್ನಿಸಿದನೋ ಆಗ ಮಹಿಳೆ ಆತನ ತುಟ್ಟಿಯನ್ನು ಕಚ್ಚಿದ್ದಾಳೆ. ಹೀಗಾಗಿ ಆಕೆ ಯುವಕನಿಂದ ಪಾರಾಗಿದ್ದಾಳೆ.

ಮಹಿಳೆಯ ದೂರಿನ ಮೇರೆಗೆ ಆರೋಪಿ ಮೋಹಿತ್ ಸೈನಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಠಾಣಾಧಿಕಾರಿ ದೌರಾಲಾ ಸಂಜಯ್ ಕುಮಾರ್ ಶರ್ಮಾ ತಿಳಿಸಿದ್ದಾರೆ. ಯುವಕರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ವಿಚಾರಣೆ ವೇಳೆ ತನ್ನ ಹೆಸರನ್ನು ಮೋಹಿತ್ ಸೈನಿ ಎಂದು ಹೇಳಿದ್ದು, ಆತ ಲಾವಾಡದ ಮೊಹಲ್ಲಾ ಸೈಯಾನ್ ನಿವಾಸಿ. ಅವನು ಯಾವ ಉದ್ದೇಶಕ್ಕಾಗಿ ಗ್ರಾಮಕ್ಕೆ ಬಂದಿದ್ದನು ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಸಂತ್ರಸ್ತೆ ಯಾರೆಂಬುದು ಆತನಿಗೆ ಮೊದಲೇ ತಿಳಿದಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದರು